ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಸ್ಪರ್ಧಿಗಳಿಗೆ ಹೊಸ ಹೊಸ ಬಗೆಯ ವಿಶೇಷ ಟಾಸ್ಕ್ ನೀಡಲಾಗುತ್ತಿದೆ. ಸದ್ಯ ದೊಡ್ಮನೆಯೊಳಗೆ ಜೋಡಿ ಟಾಸ್ಕ್ ನಡೆಯುತ್ತಿದೆ. ಅಂದರೆ ಇಬ್ಬರು ಸ್ಪರ್ಧಿಗಳು ಸದಾ ಅಂಟಿಕೊಂಡೇ ಇರುವ ಟಾಸ್ಕ್ ಇದಾಗಿದೆ. ಈ ವಾರ ಜೋಡಿ ಜೋಡಿಯಾಗಿಯೇ ಎಲ್ಲ ಟಾಸ್ಕ್ ಆಡಬೇಕಿದೆ. ಇದರಲ್ಲಿ ಯಾರು ಗೆಲ್ಲುತ್ತಾರೊ ಎಂಬ ಕುತೂಹಲವಿದೆ. ಹೀಗಿರುವಾಗ ಮನೆಗೆ ವಿಶೇಷ ಅತಿಥಿಗಳ ಆಗಮನವಾಗಿದೆ.
ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ರಾಮಚಾರಿ ಖ್ಯಾತಿಯ ರಾಮಚಾರಿ (ರಿತ್ವಿಕ್ ಕೃಪಾಕರ್) ಮತ್ತು ಚಾರು (ಮೌನ ಗುಡ್ಡೇಮನೆ) ದೊಡ್ಮನೆಗೆ ಅತಿಥಿಗಳಾಗಿ ಎಂಟ್ರಿ ನೀಡಿದ್ದಾರೆ. ಇದರಲ್ಲಿ ಟ್ವಿಸ್ಟ್ ಎಂದರೆ ಬಿಗ್ ಬಾಸ್ ಮನೆಯ ಇತರೆ ಜೋಡಿಗಳ ಹಾಗೆ ರಾಮಾಚಾರಿ – ಚಾರುಲತಾ ಸಹ ಬೆಲ್ಟ್ ಧರಿಸಿಕೊಂಡಿದ್ದಾರೆ. ಇವರನ್ನು ಕಂಡು ಮನೆಮಂದಿ ಒಂದು ಕ್ಷಣ ಶಾಕ್ ಆದರು.
ಬಳಿಕ ಎಲ್ಲ ಸ್ಪರ್ಧಿಗಳು ಒಟ್ಟಾಗಿ ಇವರಿಗೆ ಬಿಗ್ ಬಾಸ್ ಮನೆಯನ್ನು ಪರಿಚಯಿಸಿದ್ದಾರೆ. ಈ ಜೋಡಿಯನ್ನು ಕಂಡು ಹನುಮಂತ ಫುಲ್ ಎನರ್ಜಿಯಲ್ಲಿ ಚಾರು ಅವರಿಗೆ ಇಂಪ್ರೆಸ್ ಮಾಡಿದ್ದಾರೆ. ಹನುಮಂತ ಅವರು ತಮ್ಮ ಶೈಲಿಯಲ್ಲಿ ಹಾಡನ್ನು ಹೇಳಿ, ಮಂಡಿಯೂರಿ ಚಾರು ಅವರಿಗೆ ಗುಲಾಬಿ ಹೂ ನೀಡಿದ್ದಾರೆ. ಚಾರುಲತಾಗೆ ನನ್ ಕಣ್ಣು ನಿನ್ ಮ್ಯಾಗ ಅಂತ ಹಾಡು ಹಾಡಿದ್ದಾರೆ.
ಇದರ ಜೊಗೆಗೆ ಮನೆಯ ಸದಸ್ಯರಿಗೆ ಬಿಗ್ ಬಾಸ್ ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಎಲ್ಲ ಸದಸ್ಯರ ಬಾಲ್ಯದ ನೆನಪುಗಳನ್ನು ಮರುಕಳಿಸಿದ್ದಾರೆ. ಬಿಗ್ಬಾಸ್, ಎಲ್ಲ ಸದಸ್ಯರ ಬಾಲ್ಯದ ಚಿತ್ರಗಳನ್ನು ತೋರಿಸಿ ಯಾರೆಂದು ಊಹಿಸುವಂತೆ ಇತರರಿಗೆ ಸೂಚಿಸಿದ್ದರು. ಎಲ್ಲರೂ ಖುಷಿಯಿಂದ ಟಾಸ್ಕ್ನಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ತಮಾಷೆಯ ಹಾಗೂ ಭಾವುಕ ಸನ್ನಿವೇಶಗಳ ಇಲ್ಲಿ ನಡೆದಿವೆ.
10 ಮಂದಿ ನಾಮಿನೇಟ್:
ಇದೀಗ ಏಳನೇ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಲು ಹತ್ತು ಸದಸ್ಯರು ನಾಮಿನೇಟ್ ಆಗಿದ್ದಾರೆ. ಈ ಪೈಕಿ ಅನುಷಾ ರೈ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ ಜಾದವ್, ಹನುಮಂತ, ಶಿಶಿರ್ ಶಾಸ್ತ್ರೀ, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ.
BBK 11: ಚೈತ್ರಾ ಅಲ್ಲ: ತ್ರಿವಿಕ್ರಮ್ಗೆ ಜೋಡಿಯಾದ ಸದಸ್ಯೆ ಇವರೇ ನೋಡಿ