ಬೆಂಗಳೂರು: 2024ರ ಕೊನೆಯ ಘಟ್ಟಕ್ಕೆ ಬಂದು ನಿಂತಿದ್ದೇವೆ. ಇನ್ನೇನು ಒಂದೂವರೆ ತಿಂಗಳು ಕಳೆದರೆ 2025ಕ್ಕೆ ಕಾಲಿಡಲಿದ್ದೇವೆ. ಹೀಗಾಗಿ ರಾಜ್ಯ ಸರ್ಕಾರ ಮುಂದಿನ ವರ್ಷದ ಸಾರ್ವತ್ರಿಕ ರಜಾ ದಿನಗಳನ್ನು ಪ್ರಕಟಿಸಿದೆ (Public Holidays 2025).
ಎಂದಿನಂತೆ 2ನೇ ಮತ್ತು 4ನೇ ಶನಿವಾರ ಮತ್ತು ಭಾನುವಾರ ರಜೆ ಇರಲಿದೆ. ಇನ್ನು ಈ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಗಣರಾಜ್ಯೋತ್ಸವ (ಜ. 26), ಯುಗಾದಿ (ಮಾ. 30), ಮೊಹರಂನ ಕಡೆಯ ದಿನ (ಜು. 6) ಮತ್ತು ಮಹಾಲಯ ಅಮಾವಾಸ್ಯೆ (ಸೆ. 21) ಹಾಗೂ 2ನೇ ಶನಿವಾರದಂದು ಬರುವ ಕನಕದಾಸ ಜಯಂತಿ (ನ. 8)ಯನ್ನು ಉಲ್ಲೇಖಿಸಿಲ್ಲ. ಇದನ್ನು ಹೊರತುಪಡಿಸಿ ಒಟ್ಟು 19 ರಜೆಗಳಿವೆ. ಅದರಲ್ಲಿಯೂ ಅಕ್ಟೋಬರ್‌ನಲ್ಲಿ 5 ದಿನ ರಜೆ ಇರಲಿದ್ದು, ಏಪ್ರಿಲ್‌ನಲ್ಲಿ 4 ರಜೆ ಇದೆ. ಉಳಿದಂತೆ ಯಾವೆಲ್ಲ ದಿನಗಳು ರಜಾ ಇರಲಿವೆ ಎನ್ನುವ ವಿವರ ಇಲ್ಲಿದೆ.
ದಿನಾಂಕ | ಸಾರ್ವತ್ರಿಕ ರಜಾದಿನ |
ಜ. 14 | ಮಕರ ಸಂಕ್ರಾಂತಿ |
ಫೆ. 26 | ಮಹಾಶಿವರಾತ್ರಿ |
ಮಾ. 31 | ರಂಜಾನ್ |
ಏ. 10 | ಮಹಾವೀರ ಜಯಂತಿ |
ಏ. 14 | ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ |
ಏ. 18 | ಗುಡ್‌ಫ್ರೈಡೇ |
ಏ. 30 | ಬಸವ ಜಯಂತಿ, ಅಕ್ಷಯ ತೃತೀಯ |
ಮೇ 1 | ಕಾರ್ಮಿಕರ ದಿನಾಚರಣೆ |
ಜೂ. 7 | ಬಕ್ರೀದ್ |
ಆ. 15 | ಸ್ವಾತಂತ್ರ್ಯ ದಿನಾಚರಣೆ |
ಆ. 27 | ವರಸಿದ್ದಿ ವಿನಾಯಕ ವ್ರತ |
ಸೆ. 5 | ಈದ್‌ಮಿಲಾದ್ |
ಅ. 1 | ಮಹಾನವಮಿ, ಆಯುಧಪೂಜೆ, ವಿಜಯದಶಮಿ |
ಅ. 2 | ಗಾಂಧಿ ಜಯಂತಿ |
ಅ. 7 | ಮಹರ್ಷಿ ವಾಲ್ಮೀಕಿ ಜಯಂತಿ |
ಅ. 20 | ನರಕ ಚತುದರ್ಶಿ |
ಅ. 22 | ಬಲಿಪಾಡ್ಯಮಿ, ದೀಪಾವಳಿ |
ನ. 1 | ಕರ್ನಾಟಕ ರಾಜ್ಯೋತ್ಸವ |
ಡಿ. 25 | ಕ್ರಿಸ್‌ಮಸ್ |
ಇಲ್ಲಿದೆ ರಜಾದಿನಗಳ ಪಟ್ಟಿ
ಕೇಂದ್ರ ಸರ್ಕಾರಿ ಉದ್ಯೋಗಿಗಳ ರಜೆಯೂ ಘೋಷಣೆ
ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ 2025ರ ರಜಾದಿನಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಎರಡು ರೀತಿಯ ರಜೆಗಳನ್ನು ಘೋಷಿಸಲಾಗಿದೆ. ಮೊದಲನೆಯದು ಗೆಜೆಟೆಡ್ (ಕಡ್ಡಾಯ) ಮತ್ತು ಎರಡನೆಯದು ಐಚ್ಛಿಕ. ಈ ಪೈಕಿ 17 ರಜಾಗಳನ್ನು ಗೆಜೆಟೆಡ್ ರಜಾದಿನಗಳೆಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ನೀಡಲೇಬೇಕಾಗಿದೆ.
ಈ ಸುದ್ದಿಯನ್ನೂ ಓದಿ: DK Shivakumar: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ರಾಜ್ಯಪಾಲರಿಗೆ ದೂರು!