ಚೆನ್ನೈ: ಸಮಾಜದಲ್ಲಿ ಕೆಟ್ಟ ಕೆಲಸಗಳಲ್ಲಿ ತೊಡಗಿರುವವರನ್ನು ದಂಡಿಸಿ ಸರಿದಾರಿಗೆ ತರಬೇಕಾದ ಪೊಲೀಸರೇ ಈಗ ಹಳಿತಪ್ಪಿದರೆ ಹೇಗೆ? ಇತ್ತೀಚೆಗೆ ಸಬ್‌ಇನ್ಸ್‌ಪೆಕ್ಟರ್ ಕೈದಿಗಳನ್ನು ಜೈಲಿನಿಂದ ಕರೆದೊಯ್ಯುವಾಗ ಪೊಲೀಸ್ ವಾಹನದೊಳಗೆ ಮದ್ಯಪಾನ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಹಾಗಾಗಿ ಅಧಿಕಾರಿಯ ವಿರುದ್ಧ ಇಲಾಖೆ ತನಿಖೆಗೆ ಆದೇಶಿಸಿದೆ.
ಸೇಂಟ್ ಥಾಮಸ್ ಮೌಂಟ್ ಸಶಸ್ತ್ರ ಮೀಸಲು ಪಡೆಯ ಎಸ್ಎಸ್ಐ ಲಿಂಗೇಶ್ವರನ್ ಅವರು ಕೈದಿಗಳನ್ನು ಜೈಲಿನಿಂದ ಕರೆದೊಯ್ಯುವಾಗ ಪೊಲೀಸ್ ವಾಹನದೊಳಗೆ ಮದ್ಯಪಾನ ಮಾಡಿದ್ದಾರೆ. ಪೊಲೀಸ್ ಡ್ರೈವರ್ ಪಕ್ಕದಲ್ಲಿದ್ದ ಕಪ್ ಹೋಲ್ಡರ್‌ನಲ್ಲಿ ಇರಿಸಲಾಗಿದ್ದ ಮೊಬೈಲ್ ಫೋನ್‍ನಲ್ಲಿ ಈ ವಿಡಿಯೊ ರೆಕಾರ್ಡ್ ಆಗಿದೆ. ನಂತರ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇದು ವೈರಲ್ ಆದ ಕಾರಣ ಪೊಲೀಸರು ಈಗ ಎಸ್ಎಸ್ಐ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರೆಂದು ಸಾಬೀತಾದರೆ ಅವರನ್ನು ಅಮಾನತುಗೊಳಿಸಲಾಗುವುದು ಎನ್ನಲಾಗಿದೆ.
#JUSTIN சென்னையில் போலீஸ் வாகனத்தில் மது அருந்திய எஸ்.எஸ்.ஐ. சஸ்பெண்ட்
— News18 Tamil Nadu (@News18TamilNadu) November 14, 2024
சென்னை பரங்கிமலை ஆயுதப்படையில் சிறப்பு உதவி ஆய்வாளராக பணிபுரியும் லிங்கேஸ்வரன், சீருடை அணியாமல் காவல் வாகனத்திலேயே மது அருந்தும் வீடியோ #Chennai #SubInspector #Suspend #News18Tamilnadu |… pic.twitter.com/tsy60W1eWA
ಅಷ್ಟೇ ಅಲ್ಲದೇ ಜೈಲುಗಳಿಗೆ ಕರೆದೊಯ್ಯುವಾಗ ಮತ್ತು ಅಲ್ಲಿಂದ ಮರಳಿ ತರುವಾಗ ಕೈದಿಗಳಿಗೆ ತಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಅಕ್ರಮವಾಗಿ ಮಾತನಾಡಲು ಅವಕಾಶ ಮಾಡಿಕೊಟ್ಟಂತಹ ಆರೋಪಗಳನ್ನು ಲಿಂಗೇಶ್ವರನ್ ಎದುರಿಸುತ್ತಿದ್ದಾರೆ ಮತ್ತು ಕೈದಿಗಳಿಗೆ ತಮ್ಮ ಮೊಬೈಲ್ ಫೋನ್ ಬಳಸಿ ವಿಡಿಯೊ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕ್ಯಾನ್ಸರ್ ರೋಗಿ ತಾಯಿಗೆ ತಪ್ಪು ಔಷಧ; ಡಾಕ್ಟರ್‌ಗೆ ಇರಿದ ಮಗ!
ಪೊಲೀಸರು ಈ ರೀತಿ ಬೇಜವಾಬ್ದಾರಿಯಿಂದ ವರ್ತಿಸಿದ ಘಟನೆ ಇದೇ ಮೊದಲಲ್ಲ. ಇತ್ತೀಚೆಗೆ ಉತ್ತರ ಪ್ರದೇಶದ ಆಗ್ರಾದಲ್ಲಿ ಕಾನ್‌ಸ್ಟೇಬಲ್ ಕುಡಿದ ಮತ್ತಿನಲ್ಲಿ ಪೊಲೀಸ್ ಠಾಣೆಯ ಹೊರಗೆ ನಡು ರಸ್ತೆಯಲ್ಲಿ ವಾಹನಗಳು ಓಡಾಡುವಾಗ ತಮ್ಮ ಪ್ಯಾಂಟ್ ಬಿಚ್ಚಿ ಎಲ್ಲರ ಮುಂದೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಪೊಲೀಸ್ ಕಾನ್‌ಸ್ಟೇಬಲ್ ಮಾಡಿದ ಈ ನಾಚಿಕೆಗೇಡಿನ ಕೃತ್ಯವನ್ನು ನೋಡಿದ ಜನರು ಅವರ ಕೃತ್ಯಗಳಿಂದ ದಿಗ್ಭ್ರಮೆಗೊಂಡಿದ್ದಾರೆ. ಕೆಲವರು ಈ ಘಟನೆಯ ವಿಡಿಯೊವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಡೀ ಪೊಲೀಸ್ ಇಲಾಖೆಗೆ ಮುಜುಗರವನ್ನುಂಟು ಮಾಡಿತ್ತು. ಈ ನಾಚಿಕೆಗೇಡಿನ ಕೃತ್ಯಕ್ಕಾಗಿ ಪೊಲೀಸ್ ಕಾನ್‌ಸ್ಟೇಬಲ್ ವಿರುದ್ಧ ಕ್ರಮ ಕೈಗೊಂಡು ಅವರನ್ನು ತಕ್ಷಣ ಅಮಾನತುಗೊಳಿಸಲಾಗಿತ್ತು.