ಮಧ್ಯಪ್ರದೇಶ: ಮಕ್ಕಳ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಇನ್ನು ಚಿಕ್ಕಮಕ್ಕಳ ಕೈಗೆ ಸೈಕಲ್ ಕೊಟ್ಟು ಬಿಟ್ಟರಂತೂ ಕೇಳುವುದೇ ಬೇಡ! ಮಕ್ಕಳ ಧ್ಯಾನ ಪೂರ್ತಿ ಸೈಕಲ್ ಮೇಲೆಯೇ ಇರುತ್ತದೆ. ಅದೂ ಅಲ್ಲದೇ ರಸ್ತೆಯಲ್ಲಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಆದ ಅವಘಡಗಳು ಸಾಕಷ್ಟಿವೆ. ಇಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ರಸ್ತೆಯ ಬಳಿ ಸೈಕಲ್‍ನಲ್ಲಿ ನಿಂತಿದ್ದ 5 ವರ್ಷದ ಬಾಲಕನಿಗೆ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಆ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಮಧ್ಯಪ್ರದೇಶದ ಬೆತುಲ್‍ನಲ್ಲಿ ಈ ಘಟನೆ ನಡೆದಿದೆ. ಈ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರಿನ ಚಕ್ರವು ಬಾಲಕನ ಮೇಲೆ ಹರಿದ ನಂತರವೂ ಬಾಲಕನಿಗೆ ಯಾವುದೇ ಗಾಯಗಳಾಗದೆ ಸುರಕ್ಷಿತವಾಗಿದ್ದಾನೆ. ಈ ಬಾಲಕ ಸರಣ್ಶ್ ಯಾದವ್ ಎಂಬುದಾಗಿ ತಿಳಿದುಬಂದಿದ್ದು, ಅಪಘಾತ ಸಂಭವಿಸುವ ಮೊದಲು ಬಾಲಕ ಮನೆಯ ಮುಂದೆ ಸೈಕಲ್‌ನಲ್ಲಿ ಆಡುತ್ತಿದ್ದನಂತೆ. ಆದರೆ ಇದ್ದಕ್ಕಿದ್ದಂತೆ ಸೈಕಲ್‍ನಲ್ಲಿ ಏನೋ ಸಮಸ್ಯೆಯಾದ ಕಾರಣ ಆತ ನಡುರಸ್ತೆಯಲ್ಲಿ ನಿಂತುಕೊಂಡು ಸೈಕಲ್ ಅನ್ನು ಪೆಡಲ್ ಮಾಡಲು ಪ್ರಯತ್ನಿಸಿದ್ದಾನಂತೆ. ಈ ಸಮಯದಲ್ಲಿ ಅವನ ಹಿಂದೆ ಒಂದು ಕಾರೊಂದು ಬಂದು ನಿಂತಿತ್ತು. ವಾಹನದ ಹೊರಗೆ ನಿಂತಿದ್ದ ಮಹಿಳೆಯೊಬ್ಬಳು ಮಗುವಿಗೆ ರಸ್ತೆಯಿಂದ ಹೋಗುವಂತೆ ಹೇಳಿ ಅವಳು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ ಕೆಲವು ಸೆಕೆಂಡುಗಳ ನಂತರ, ಚಾಲಕ ಕಾರನ್ನು ಮುಂದೆ ಸರಿಸಿ, ಬಾಲಕನ ಮೇಲೆ ಹಾರಿಸಿಕೊಂಡು ಹೋಗಿದ್ದಾನಂತೆ. ಬಾಲಕ ಸೈಕಲ್‍ನಿಂದ ಬೀಳುವಾಗ ಕಾರಿನ ಹಿಂಭಾಗದ ಚಕ್ರವು ಅವನ ಮೇಲೆ ಹಾದುಹೋಗಿದೆ. ಆದರೆ ಅದೃಷ್ಟವಶಾತ್ ಕಾರು ಅವನ ಮೇಲೆ ಹರಿದರೂ ಬಾಲಕ ಗಾಯಗೊಳ್ಳದೆ ಎದ್ದು ನಿಂತಿದ್ದಾನೆ. ಇದನ್ನು ಕಂಡು ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ.
Caught on cam: 4-year-old on bicycle run over by car in MP's Betul, climbs out safe
— Republic (@republic) November 15, 2024
.
.
.#Betul #RunOver #CarAccident #ViralVideo pic.twitter.com/huEhSLmAJN
ವರದಿ ಪ್ರಕಾರ ಅಪಘಾತದ ನಂತರ, ಸರಣ್ಶ್ ಪೋಷಕರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅವನಿಗೆ ಎಕ್ಸ್-ರೇ ಸ್ಕ್ಯಾನ್‍ಗಳನ್ನು ಮಾಡಿಸಲಾಗಿದ್ದು, ಅದರಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎನ್ನಲಾಗಿದೆ. ಚಾಲಕನ ವಿರುದ್ಧ ಸರಣ್ಶ್ ತಂದೆ ಎಫ್ಐಆರ್ ದಾಖಲಿಸಿದ್ದು, ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಎಣ್ಣೆ ಹೊಡೆದು ಖಾಕಿ ಡ್ಯೂಟಿ! ಪೊಲೀಸ್ ವ್ಯಾನ್‌ನಲ್ಲೇ ‘ಗುಂಡು’ ಹಾಕಿದ ಸಬ್ ಇನ್ಸ್‌ಪೆಕ್ಟರ್- ವಿಡಿಯೊ ಇದೆ
ಇದೇ ರೀತಿಯ ಘಟನೆಯೊಂದು ಈ ವರ್ಷದ ಆಗಸ್ಟ್‌ನಲ್ಲಿ ನಡೆದಿತ್ತು. ಸೈಕಲ್ ಓಡಿಸುತ್ತಿದ್ದ ಪುಟ್ಟ ಬಾಲಕಿಯೊಬ್ಬಳು ಬ್ಯಾಲೆನ್ಸ್ ತಪ್ಪಿ ರಸ್ತೆಗೆ ಬಿದ್ದ ಕಾರಣ ಆಕೆಯ ಮೇಲೆ ಟಾಟಾ ನೆಕ್ಸಾನ್ ಕಾರು ಹರಿದು ಬಾಲಕಿ ಸ್ಥಳದಲ್ಲೇ ಸಾವನಪ್ಪಿದ ಭಯಾನಕ ಘಟನೆ ಗುಜರಾತ್‌ನ ಮೆಹ್ಸಾನ್‌ನಲ್ಲಿ ನಡೆದಿದೆ. ಈ ದುರಂತದಲ್ಲಿ 4 ವರ್ಷದ ದಿಶಾ ಪಟೇಲ್ ಎಂಬ ಬಾಲಕಿ ಮೃತಪಟ್ಟಿದ್ದಾಳೆ . ಮೆಹ್ಸಾನ್‌ನ ಸ್ಪರ್ಶ್ ಹೌಸಿಂಗ್ ಸೊಸೈಟಿಯ ಕಾಂಪೌಂಡ್ ಒಳಗಡೆಯ ಈ ಘಟನೆ ನಡೆದಿದೆ. ಈ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.