ಮಧ್ಯಪ್ರದೇಶ: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ತಡರಾತ್ರಿ ಕೆಫೆಯೊಂದಕ್ಕೆ ಬಂದ ರೌಡಿ ಯುವಕರಿಬ್ಬರು ಪಿಜ್ಜಾ ನೀಡಲು ಸಿಬ್ಬಂದಿ ನಿರಾಕರಿಸಿದ ಕಾರಣ ಕೋಪಗೊಂಡು ಕೆಫೆಯ ಮೈನ್ ಡೋರ್‌ಗೆ ಗುಂಡು ಹಾರಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ವೈರಲ್ ವಿಡಿಯೊದಲ್ಲಿ ಇಬ್ಬರು ಕೆಫೆಯೊಂದಕ್ಕೆ ನುಗ್ಗಿ ಪಿಜ್ಜಾಕ್ಕಾಗಿ ಆರ್ಡರ್ ಮಾಡಿದ್ದಾರೆ. ಕಿಚನ್ ಈಗಾಗಲೇ ಮುಚ್ಚಲ್ಪಟ್ಟಿದೆ ಎಂದ ಸಿಬ್ಬಂದಿ ಯಾವುದೇ ಆರ್ಡರ್ ತೆಗೆದುಕೊಳ್ಳಲು ನಿರಾಕರಿಸಿದಾಗ, ಅವರು ಹೊರಗೆ ಹೋಗಿ ಕೆಫೆಟೇರಿಯಾದ ಡೋರ್‌ಗೆ ಗುಂಡು ಹಾರಿಸಿದ್ದಾರೆ. ಇದರಿಂದ ಅಲ್ಲಿದ್ದವರು ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಅಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕೆಫೆ ಸಿಬ್ಬಂದಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ಮಾಡಿದ್ದಾರೆ.
#WATCH | #Gwalior: Man Fires Shots At Entrance Of Cafe After Staff Refuses To Serve Him Pizza Late At Night#MadhyaPradesh #MPNews pic.twitter.com/yNeyLHhs76
— Free Press Madhya Pradesh (@FreePressMP) November 14, 2024
ಮಾಹಿತಿಯ ಪ್ರಕಾರ, ಗ್ವಾಲಿಯರ್‌ನ ಐಷಾರಾಮಿ ಪಟೇಲ್ ನಗರದಲ್ಲಿರುವ ಕೆಫೆಟೇರಿಯಾದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ರಾತ್ರಿ ಕೆಫೆಯನ್ನು ಮುಚ್ಚುವ ಸಮಯದಲ್ಲಿ ಬಂದ ಇಬ್ಬರು ಪಿಜ್ಜಾವನ್ನು ಆರ್ಡರ್ ಮಾಡಿದ್ದಾರೆ. ಕಿಚನ್ ಮುಚ್ಚಲಾಗಿದೆ ಎಂದು ಸಿಬ್ಬಂದಿಯೊಬ್ಬರು ಹೇಳಿದರೂ ಕೇಳದ ಕಾರಣ ಅವರ ನಡುವೆ ವಾಗ್ವಾದ ನಡೆದಿದೆ. ಯುವಕರು ತಮ್ಮ ಕಾರಿನ ಬಳಿ ಹೋಗಿ ಬಂದೂಕನ್ನು ತೆಗೆದು ಸಿಬ್ಬಂದಿಯನ್ನು ಬೆದರಿಸಲು ಕೆಫೆಟೇರಿಯಾದ ಡೋರ್‌ಗೆ ಗುಂಡುಗಳನ್ನು ಹಾರಿಸಿದ್ದಾರೆ. ಮತ್ತು ತಾವು ಕೇಳಿದ್ದನ್ನು ನೀಡುವಂತೆ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ. ಊಟದ ನಂತರ, ಅವರು ಅಲ್ಲಿಂದ ಪರಾರಿಯಾಗಿದ್ದಾರೆ.
ಇದನ್ನೂ ಓದಿ: ಎಣ್ಣೆ ಹೊಡೆದು ಖಾಕಿ ಡ್ಯೂಟಿ! ಪೊಲೀಸ್ ವ್ಯಾನ್‌ನಲ್ಲೇ ‘ಗುಂಡು’ ಹಾಕಿದ ಸಬ್ ಇನ್ಸ್‌ಪೆಕ್ಟರ್- ವಿಡಿಯೊ ಇದೆ
ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೆಫೆ ಸಿಬ್ಬಂದಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ, ವಿಶ್ವವಿದ್ಯಾಲಯ ಪೊಲೀಸರು ಇಬ್ಬರು ಅಪರಿಚಿತ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಶಂಕಿತರನ್ನು ಗುರುತಿಸಿ ಶೀಘ್ರದಲ್ಲೇ ಅವರನ್ನು ಬಂಧಿಸುವುದಾಗಿ ಹೇಳಿದ್ದಾರೆ.