ಮುಂಬಯಿ: ಹರಿಯಾಣದ ವೇಗಿ ಅನ್ಶುಲ್ ಕಾಂಬೋಜ್(Anshul Kamboj) ರಣಜಿ ಕ್ರಿಕೆಟ್ ಟೂರ್ನಿಯಲ್ಲಿ(Ranji Trophy 2024/25) ದಾಖಲೆಯೊಂದನ್ನು ಬರೆದಿದ್ದಾರೆ. ಕೇರಳ(Kerala vs Haryana) ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಘಾತಕ ಬೌಲಿಂಗ್ ದಾಳಿ ನಡೆಸಿದ ಅನ್ಶುಲ್, ಇನಿಂಗ್ಸ್‌ನ ಎಲ್ಲಾ 10 ವಿಕೆಟ್‌ಗಳನ್ನು ಕಿಂತು ಮಿಂಚಿದ್ದಾರೆ. ಈ ಮೂಲಕ ರಣಜಿ ಟ್ರೋಫಿಯ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಂಗಾಳದ ಪ್ರೇಮಾಂಗ್ಶು ಚಟರ್ಜಿ (10/20) ಮತ್ತು ರಾಜಸ್ಥಾನದ ಪ್ರದೀಪ್ ಸುಂದರಂ (10/78) ಉಳಿದಿಬ್ಬರು.
ಒಟ್ಟಾರೆಯಾಗಿ, ಕಾಂಬೋಜ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 10 ವಿಕೆಟ್ ಪಡೆದ ಆರನೇ ಭಾರತೀಯರಾಗಿದ್ದಾರೆ. ಅನಿಲ್ ಕುಂಬ್ಳೆ, ಸುಭಾಷ್ ಗುಪ್ತೆ ಮತ್ತು ದೇಬಶಿಶ್ ಮೊಹಾಂತಿ ಈ ಪಟ್ಟಿಯಲ್ಲಿರುವ ಇತರರು. 23ರ ಹರೆಯದ ಅನ್ಶುಲ್ 2ನೇ ದಿನದಾಟದ ವೇಳೆಗೆ 8 ವಿಕೆಟ್ ಕಿತ್ತಿದ್ದರು. ಮೂರನೇ ದಿನವಾದ ಇಂದು(ಶುಕ್ರವಾರ) 2 ವಿಕೆಟ್ ಉರುಳಿಸುವುದರೊಂದಿಗೆ 10 ವಿಕೆಟ್ ಗೊಂಚಲು ತಮ್ಮದಾಗಿಸಿಕೊಂಡರು. ಇವರ ಈ ಘಾತಕ ಬೌಲಿಂಗ್ ದಾಳಿಗೆ ನಲುಗಿದ ಕೇರಳ ತಂಡ 291 ಕ್ಕೆ ಆಲೌಟ್ ಆಯಿತು. ಹರ್ಯಾಣ ಪರ ಒಂದೇ ಇನ್ನಿಂಗ್ಸ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯೂ ಕಾಂಬೋಜ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಜೋಗಿಂದರ್ ಶರ್ಮಾ ಹೆಸರಿನಲ್ಲಿತ್ತು. ಅವರು 2004-05ರ ಸೀಸನ್‌ನಲ್ಲಿ ವಿದರ್ಭ ವಿರುದ್ದ ಎಂಟು ವಿಕೆಟ್ ಕಿತ್ತಿದ್ದರು.
1⃣ innings 🤝 1⃣0⃣ wickets 👏
— BCCI Domestic (@BCCIdomestic) November 15, 2024
Historic Spell 🙌
3⃣0⃣.1⃣ overs
9⃣ maidens
4⃣9⃣ runs
1⃣0⃣ wickets 🔥
Watch 📽️ Haryana Pacer Anshul Kamboj's record-breaking spell in the 1st innings against Kerala 👌👌#RanjiTrophy | @IDFCFIRSTBank pic.twitter.com/RcNP3NQJ2y
30.1 ಓವರ್ ಬೌಲಿಂಗ್ ನಡೆಸಿದ ಅನ್ಶುಲ್ ಕಾಂಬೋಜ್ 9 ಮೇಡನ್ ಸಹಿತ ಕೇವಲ 49 ರನ್ ವೆಚ್ಚದಲ್ಲಿ 10 ವಿಕೆಟ್ ಪಡೆದರು. ಇವರ ಈ ಸಾಧನೆಗೆ ಮಾಜಿ ಆಟಗಾರರಾದ ಅನಿಲ್ ಕುಂಬ್ಳೆ, ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್ ಸುನೀಲ್ ಗವಾಸ್ಕರ್ ಸೇರಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.