Friday, 15th November 2024

Diljit Dosanjh : ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್‌ಗೆ ತೆಲಂಗಾಣ ಸರ್ಕಾರದಿಂದ ನೋಟಿಸ್‌!

Diljit Dosanjh

ಹೈದರಾಬಾದ್‌: ನವೆಂಬರ್ 15 ಶುಕ್ರವಾರದಂದು ಹೈದರಾಬಾದ್‌ನಲ್ಲಿ ಪಂಜಾಬಿ ನಟ ಹಾಗೂ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಅವರ ಸಂಗೀತ ಕಾರ್ಯಕ್ರಮ (Music Consert) ನಡೆಯಲಿದ್ದು, ಕಾರ್ಯಕ್ರಮಕ್ಕೆ ಮುಂಚಿತವಾಗಿಯೇ ತೆಲಂಗಾಣ ಸರ್ಕಾರ (Telangana Government) ದಿಲ್ಜಿತ್‌ಗೆ ನೋಟಿಸ್‌ ನೀಡಿದೆ. ಯವುದೇ ರೀತಿಯ ಮದ್ಯಪಾನ ಹಾಗೂ ಮಾದಕ ದ್ರವ್ಯಗಳ ಕುರಿತು ಇರುವ ಹಾಡನ್ನು ಹಾಡಬಾರದು ಎಂದು ನೋಟಿಸ್‌ ಮೂಲಕ ಎಚ್ಚರಿಕೆ ನೀಡಿದೆ.

ದಿಲ್ಜಿತ್ ಅವರ ದಿಲ್-ಲುಮಿನಾಟಿ (Dil-Luminati concert ) ಸಂಗೀತ ಕಚೇರಿಯ ಸಂಘಟಕರಿಗೆ ನೋಟೀಸ್‌ ಬಂದಿದ್ದು, ಕಾರ್ಯಕ್ರಮದಿಂದ ಸಣ್ಣ ಮಕ್ಕಳನ್ನು ದೂರವಿಡಿ ಎಂದು ಸಲಹೆ ನೀಡಿದೆ. ಹಾಗೂ ಕಾರ್ಯಕ್ರಮದಲ್ಲಿ ದೊಡ್ದ ಶಬ್ದಗಳು ಹಾಗೂ ಲೈಟಿಂಗ್‌ ಮೇಲೆ ಗಮನವಿರಿಸಿ ಎಂದು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ತಿಂಗಳು ಹೊಸದಿಲ್ಲಿಯ ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ ನಡೆದ ಲೈವ್ ಶೋನಲ್ಲಿ ದಿಲ್ಜಿತ್ ದೋಸಾಂಜ್ ಅವರು ಮದ್ಯ, ಮಾದಕ ದ್ರವ್ಯ ಮತ್ತು ಹಿಂಸಾಚಾರವನ್ನು ಉತ್ತೇಜಿಸುವ ಹಾಡುಗಳನ್ನು ಹಾಡಿದ್ದಾರೆ ಎಂಬ ಪುರಾವೆಯನ್ನು ನೋಟೀಸ್‌ನಲ್ಲಿ ಉಲ್ಲೇಖಿಸಲಾಗಿದೆ. ದಿಲ್ಜಿತ್ ದೋಸಾಂಜ್ ಅವರ ದಿಲ್-ಲುಮಿನಾಟಿ ಪ್ರವಾಸ ಭಾರತದ ಹಲವು ನಗರಗಳಲ್ಲಿ ನಡೆಯಲಿದ್ದು ಶುಕ್ರವಾರ ಹೈದರಾಬಾದ್‌ನಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಎರಡು ದಿನ ಇರುವಾಗಲೇ ದಿಲ್ಜಿತ್ ಹೈದರಾಬಾದ್‌ ತಪುಪಿದ್ದು, ನಿಜಾಮನಗರ ಹಾಗೂ ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಹೈದರಾಬಾದ್‌ ಪ್ರವಾಸದ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರು ಆಟೋದಲ್ಲಿ ಪ್ರಯಾಣ ಮಾಡಿ ಜನರ ಜೊತೆ ಮಾತನಾಡುತ್ತಿರುವುದನ್ನು ಕಾಣಬಹುದು. ಸದ್ಯ ಹೈದರಾಬಾದ್‌ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ನಂತರ ಲಕ್ನೋ, ಪುಣೆ, ಕೋಲ್ಕತ್ತಾ, ಬೆಂಗಳೂರು, ಇಂದೋರ್, ಚಂಡೀಗಢ  ಹಾಗೂ ಕೊನೆಯಲ್ಲಿ ಡಿಸೆಂಬರ್ 29 ರಂದು ಗುವಾಹಟಿಯಲ್ಲಿ ನಡೆಯಲಿದೆ.

ಇದನ್ನೂ ಓದಿ: Diljit Dosanjh’s Jaipur Concert: ದಿಲ್ಜಿತ್‌ ಜೈಪುರ ಸಂಗೀತ ಕಾರ್ಯಕ್ರಮದಲ್ಲಿ ಅಧ್ವಾನ; ನೂರಾರು ಮೊಬೈಲ್‌ ಕಳವು; ಕುಡಿಯಲು ನೀರಿಲ್ಲದೆ ಹಾಹಾಕಾರ

ಈ ಹಿಂದೆ ಅವರ ಸಂಗೀತ ಕಾರ್ಯಕ್ರಮ ಜೈಪುರದಲ್ಲಿ ನಡೆದಿತ್ತು. ಕಾರ್ಯಕ್ರಮದ ನಕಲಿ ಟಿಕೆಟ್‌ಗಳನ್ನು ತಯಾರಿಸಿ ಜನರಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಘಟನೆಯ ನಂತರ ದಿಲ್ಜಿತ್ ಖುದ್ದಾಗಿ ತಾವೇ ಕ್ಷಮೆ ಕೇಳಿದ್ದರು. ಯಾರಾದರೂ ಟಿಕೆಟ್‌ ಹಗರಣದಲ್ಲಿ ಮೋಸ ಹೋಗಿದ್ದರೆ ಕ್ಷಮಿಸಿ. ಇದು ನಮ್ಮ ತಂಡದವರ ಗಮನಕ್ಕೆ ಬಾರದೇ ಆಗಿರುವ ಘಟನೆಯಾಗಿದೆ. ನಮ್ಮ ತಂಡದವರೂ ಯಾರೂ ಈ ಕೃತ್ಯವನ್ನು ಮಾಡಿಲ್ಲ. ಇದು ಹೊರಗಿನವರಿಂದ ಆದ ಪ್ರಕರಣವಾಗಿದೆ. ಇದರ ಬಗ್ಗೆ ತನಿಖೆ ನಡಿಯುತ್ತಿದೆ. ಆದಷ್ಟು ಬೇಗ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ್ದರು.