Friday, 15th November 2024

BBK 11: ಬಿಗ್ ಬಾಸ್ ಮನೆಯಲ್ಲಿ ಮನೋರಂಜನ ಕಾರ್ಯಕ್ರಮ: ಸ್ಪರ್ಧಿಗಳಿಂದ ಸಖತ್ ಡ್ಯಾನ್ಸ್

BBK 11 Dance

ಆರಂಭದಲ್ಲಿ ಕೊಂಚ ಡಲ್ ಆಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಇದೀಗ ಕಳೆದ ಎರಡು ಮೂರು ವಾರಗಳಿಂದ ರಂಗೇರುತ್ತಿದೆ. ಸ್ಪರ್ಧಿಗಳಿಗೆ ಟಫ್ ಟಾಸ್ಕ್ ನೀಡುತ್ತಿದ್ದು, ಗೆಲುವಿಗಾಗಿ ಮೈಚಳಿ ಬಿಟ್ಟು ಆಡಲು ಮುಂದಾಗಿದ್ದಾರೆ. ಆರಂಭದ ಕೆಲವು ದಿನಗಳಲ್ಲಿ ಬರೀ ಜಗಳ, ವಿವಾದಗಳಿಂದಲೇ ಕೂಡಿದ್ದ ಶೋ ಈಗ ಮಸ್ತ್ ಮನರಂಜನೆ ಕೊಡುತ್ತಿದೆ. ಸದ್ಯ ಮನೆಯೊಳಗೆ ಚಾರು ಹಾಗೂ ರಾಮಾಚಾರಿಯನ್ನು ಎಂಟರ್ಟೈನ್ ಮಾಡಲು ಬಿಗ್ ಬಾಸ್ ಮನೋರಂಜನ ಕಾರ್ಯಕ್ರಮ ಕೂಡ ಹಮ್ಮಿಕೊಂಡಿದ್ದಾರೆ.

ಇಲ್ಲಿ ಸ್ಪರ್ಧಿಗಳು ಇಂಪ್ರೆಸ್ ಮಾಡಲು ಸಖತ್ ಕಷ್ಟಪಟ್ಟಿದ್ದಾರೆ. ಬಿಗ್ ಬಾಸ್​ ಮನೆ ಒಂದು ಡ್ಯಾನ್ಸ್ ವೇದಿಕೆಯಾಗಿ ಬದಲಾಗಿದ್ದು, ನೃತ್ಯವೇ ಬಾರದ ಗೋಲ್ಡ್ ಸುರೇಸ್ ಹಾಗೂ ಹನುಮಂತ ಭರ್ಜರಿ ಸ್ಟೆಪ್ ಹಕಿ ಮಿಂಚಿದ್ದಾರೆ. ಅನುಷಾ-ಗೋಲ್ಡ್‌ ಸುರೇಶ್‌ ಸಿಂಹಾದ್ರಿಯ ಸಿಂಹ ಸಿನಿಮಾದ ಮಲ್ನಾಡ್‌ ಅಡಿಕೆ ಮೈಸೂರ್‌ ವೀಳ್ಯದೆಲೆ ಹಾಡಿಗೆ ಡ್ಯಾನ್ಸ್‌ ಮಾಡಿದರೆ, ಗೌತಮಿ ಹಾಗೂ ಹನುಮಂತ ಇಬ್ಬರೂ ರಾಂಬೋ ಸಿನಿಮಾದ ಚುಟು ಚುಟು ಅಂತೈತಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ನಿನ್ನೆಯ ಸಂಚಿಕೆಯಲ್ಲಿ ಕೂಡ ಶಿಶಿರ್ – ಚೈತ್ರಾ ಅವರು ಮುತ್ತಾಣ್ಣ ಪೀಪಿ ಊದುವ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ನೃತ್ಯವನ್ನು ನೋಡಿ ಸಹ ಸ್ಪರ್ಧಿಗಳು ಭಾವುಕರಾಗಿದ್ದಾರೆ. ಚೈತ್ರಾ ಅವರನ್ನು ಗಂಡನ ಮನೆಗೆ ಕಳುಹಿಸಿದ ದೃಶ್ಯ ನೋಡಿ ಸಹ ಸ್ಪರ್ಧಿಗಳು ಭಾವುಕರಾಗಿದ್ದಾರೆ. ಮಂಜು ಅವರು ಇದನ್ನು ನೋಡಿ ಕಣ್ಣೀರಿಟ್ಟಿದ್ದಾರೆ. ಮಂಜು ಅವರು ತಮ್ಮ ‌ಮೂವರು ತಂಗಿಯರನ್ನು ನೆನೆದು ದುಃಖಿತರಾದರು. ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ ಅವರು ಮಸ್ತ್​ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇವರು ಯಕ್ಕಾಸಕ್ಕ ಹಾಡಿಗೆ ಕುಣಿದಿದ್ದಾರೆ. ಇವರ ಪರ್ಫಾರ್ಮೆನ್ಸ್ ನೋಡಿ ಎಲ್ಲಾ ಕಂಟೆಸ್ಟೆಂಟ್​ಗಳು ಮುಖ್ಯವಾಗಿ ಚಾರು ಹಾಗೂ ರಾಮಾಚಾರಿ ಫುಲ್ ಫಿದಾ ಆಗಿದ್ದಾರೆ.

ಇನ್ನು ಮನೆಯ ಸದಸ್ಯರಿಗೆ ಬಿಗ್ ಬಾಸ್ ಸರ್​ಪ್ರೈಸ್ ಕೊಟ್ಟಿದ್ದಾರೆ. ಎಲ್ಲ ಸದಸ್ಯರ ಬಾಲ್ಯದ ನೆನಪುಗಳನ್ನು ಮರುಕಳಿಸಿದ್ದಾರೆ. ಬಿಗ್​ಬಾಸ್, ಎಲ್ಲ ಸದಸ್ಯರ ಬಾಲ್ಯದ ಚಿತ್ರಗಳನ್ನು ತೋರಿಸಿ ಯಾರೆಂದು ಊಹಿಸುವಂತೆ ಇತರರಿಗೆ ಸೂಚಿಸಿದ್ದರು. ಎಲ್ಲರೂ ಖುಷಿಯಿಂದ ಟಾಸ್ಕ್​ನಲ್ಲಿ ಭಾಗಿಯಾಗಿದ್ದಾರೆ. ಸಾಕಷ್ಟು ತಮಾಷೆಯ ಹಾಗೂ ಭಾವುಕ ಸನ್ನಿವೇಶಗಳು ಕೂಡ ಇಲ್ಲಿ ನಡೆಯಿತು.

BBK 11: ಡಾಕ್ಟರ್ ನನ್ನ ಕೈ ಕಟ್ ಮಾಡಬೇಕು ಎಂದಿದ್ದರು: ಬಿಗ್ ಬಾಸ್ ಮನೆಯಲ್ಲಿ ಭಾವುಕರಾದ ತ್ರಿವಿಕ್ರಮ್