Friday, 15th November 2024

Stray Dog Attack: ಎರಡು ವರ್ಷದ ಬಾಲಕಿ ಮೇಲೆ ಬೀದಿ ನಾಯಿ ದಾಳಿ; ಎಡಗಣ್ಣಿಗೆ ಗಂಭೀರ ಗಾಯ

Stray Dog Attack

ತುಮಕೂರು: ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಬೀದಿ ನಾಯಿ ದಾಳಿ (Stray Dog Attack) ಮಾಡಿದ ಪರಿಣಾಮ ಮಗುವಿನ ಎಡಗಣ್ಣಿಗೆ ಗಂಭೀರ ಗಾಯವಾಗಿದೆ. ಹನಿಜಾ ಕಾನಂ ಎಂಬ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಮಗುವಿನ ಕಣ್ಣು, ತಲೆ ಭಾಗಕ್ಕೆ ಬೀದಿ ನಾಯಿ ಕಚ್ಚಿದೆ.

ನಾಯಿ ದಾಳಿಯಿಂದ ಹೆಣ್ಣು ಮಗುವಿನ ಎಡಗಣ್ಣಿಗೆ ಗಂಭೀರವಾದ ಗಾಯವಾಗಿದ್ದು, ತಕ್ಷಣ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬೀದಿ ನಾಯಿಗಳ ಹಾವಳಿಗೆ ಹೆಗ್ಗೆರೆ ಗ್ರಾಮಸ್ಥರು ರೋಸಿ ಹೋಗಿದ್ದು, ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಈ ಸುದ್ದಿಯನ್ನೂ ಓದಿ | Cyber Crime: ಡಿಜಿಟಲ್‌ ಅರೆಸ್ಟ್‌ ಕೇಸ್‌; ನಿವೃತ್ತ ಇಂಜಿನಿಯರ್‌ಗೆ ಒಂದಲ್ಲ ಎರಡಲ್ಲ..ಬರೋಬ್ಬರಿ 10 ಕೋಟಿ ರೂ. ಪಂಗನಾಮ ಹಾಕಿದ ಖದೀಮರು

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವೃದ್ಧ; ಕಲಬುರಗಿಯಲ್ಲಿ ಹೀನ ಕೃತ್ಯ!

ಕಲಬುರಗಿ: 15 ವರ್ಷದ ಬಾಲಕಿಯ ಮೇಲೆ ವೃದ್ಧನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಪಟ್ಟಣದಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಮೇಲೆ ವೃದ್ಧ ಹೀನ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಗೋರಕ್ ನಾಥ ಚೌವ್ಹಾಣ (65) ಆರೋಪಿ. ಆರೋಪಿಯನ್ನು ಪೊಲೀಸರು ಬಂಧಿಸಿ, ಪೋಕ್ಸೊ ಕಾಯ್ದೆಯಡಿ ನರೋಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡುರಸ್ತೆಯಲ್ಲಿ ಟಿವಿ ರಿಪೋರ್ಟರ್‌ ಮೇಲೆ ಅಟ್ಯಾಕ್‌; ಬಿಟ್ಟು ಬಿಡಿ ಎಂದು ಕಾಲಿಗೆ ಬಿದ್ದ ಬಡಪಾಯಿ- ವಿಡಿಯೊ ವೈರಲ್

ಉತ್ತರಪ್ರದೇಶ: ಇತ್ತೀಚೆಗೆ ದರೋಡೆಕೋರನೊಬ್ಬ ತನ್ನ ವಿರುದ್ಧ ಸುದ್ದಿ ಪ್ರಕಟಿಸಿದ್ದಕ್ಕಾಗಿ ಸ್ಥಳೀಯ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ ಮಥುರಾದ ಗೋವರ್ಧನ್ ಬೈಪಾಸ್ ಬಳಿ ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಗೂಂಡನೊಬ್ಬ ಪತ್ರಕರ್ತ ವೀರ್ ನಾರಾಯಣ್ ಶರ್ಮಾ ಅವರಿಗೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅವರ ಬಳಿ ತನ್ನ ಪಾದಗಳನ್ನು ಮುಟ್ಟಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾನೆ. ಹಾಗೇ ಅವರನ್ನು ತಳ್ಳುತ್ತಾ, ಕಾಲಿನಿಂದ ಒದ್ದಿದ್ದಾನೆ. ಈ ರೀತಿಯಾಗಿ ಅವರ ಜೊತೆ ಕ್ರೂರವಾಗಿ ವರ್ತಿಸಿದ್ದಾನೆ. ಅಲ್ಲಿದ್ದವರು ಈ ಎಲ್ಲಾ ಘಟನೆಯನ್ನು ಮೂಕ ಪ್ರೇಕ್ಷಕರಂತೆ ನೋಡಿದ್ದಾರೆ. ಈ ಘಟನೆಯನ್ನು ಆರೋಪಿಯ ಸಹಚರರೊಬ್ಬರು ರೆಕಾರ್ಡ್ ಮಾಡಿದ್ದಾರೆ.

ವರದಿಗಳ ಪ್ರಕಾರ, ಆರೋಪಿಯನ್ನು ಭುರಾ ಪೆಹಲ್ವಾನ್ ಎಂದು ಗುರುತಿಸಲಾಗಿದ್ದು, ಗೋವರ್ಧನ್ ಪೊಲೀಸ್ ಠಾಣೆಯ ಮುಖ್ಯ ಅಧಿಕಾರಿಗೆ ಹತ್ತಿರದವನಾಗಿದ್ದಾನೆ ಎನ್ನಲಾಗಿದೆ. ಭುರಾ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿತ್ತು. ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪವೂ ಆತನ ಮೇಲಿತ್ತು.

ಪತ್ರಕರ್ತ ವೀರ್ ನಾರಾಯಣ್ ಮೂರು ತಿಂಗಳ ಹಿಂದೆ ಭುರಾ ಪೆಹಲ್ವಾನ್ ವಿರುದ್ಧ ಪತ್ರಿಕೆಯಲ್ಲಿ ಸುದ್ದಿಯನ್ನು ಪ್ರಕಟಿಸಿದ್ದರು. ಇದರಿಂದ ಕೋಪಗೊಂಡ ಗೂಂಡಾ ಭುರಾ ತನ್ನ ವಿರುದ್ಧ ಸುದ್ದಿಗಳನ್ನು ಪ್ರಕಟಿಸಿದ್ದಕ್ಕಾಗಿ ಪತ್ರಕರ್ತರ  ಮೂಗನ್ನು ನೆಲದ ಮೇಲೆ ಉಜ್ಜುವಂತೆ ಒತ್ತಾಯಿಸಿದ್ದಾನೆ. ಘಟನೆಯ ನಂತರ, ಪತ್ರಕರ್ತ ವೀರ್ ನಾರಾಯಣ್ ಭುರಾ ಪೆಹಲ್ವಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ಪ್ರಕಾರ ಗೋವರ್ಧಾ ಪೊಲೀಸ್ ಠಾಣೆಯ ಮುಖ್ಯಸ್ಥ ವಿನೋದ್ ಬಾಬು ಮಿಶ್ರಾ ಪ್ರಕರಣವನ್ನು ವಜಾಗೊಳಿಸಲು ಪ್ರಯತ್ನಿಸಿದ್ದಾರೆ.  ಆದರೆ ಪತ್ರಕರ್ತರ ಒತ್ತಡದ ನಂತರ ಅಂತಿಮವಾಗಿ ಭುರಾ ವಿರುದ್ಧ ಕ್ರಮ  ಕೈಗೊಳ್ಳಲಾಗಿದೆ.  

ಇದನ್ನೂ ಓದಿ:ಬೆಂಗಳೂರು ಏರ್‌ಪೋರ್ಟ್‌ ನೋಡಿ ಫುಲ್‌ ಫಿದಾ ಆದ ಜಪಾನಿ ಯುಟ್ಯೂಬರ್! ಭಾರೀ ವೈರಲ್‌ ಆಗ್ತಿದೆ ಆಕೆಯ ವಿಡಿಯೊ

ನಂತರ ಪೊಲೀಸರು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಭುರಾನನ್ನು ಬಂಧಿಸಿದ್ದಾರೆ. ಪೊಲೀಸರು ಆತನ ಮೇಲೆ ಸಣ್ಣ ಆರೋಪಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.  ಇದರಿಂದಾಗಿ ಭುರಾನನ್ನು ಜಾಮೀನಿನ ಮೇಲೆ ಸುಲಭವಾಗಿ ಬಿಡುಗಡೆ ಮಾಡಲಾಗಿದೆ ಎಂಬುದಾಗಿ ವರದಿಯಾಗಿದೆ.