-ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಂಟರ್ ಸೀಸನ್‌ನಲ್ಲಿ ನಿಮ್ಮ ಮನೆಯ ಮುದ್ದಿನ ನಾಯಿಮರಿಗಳಿಗೂ ಆಕರ್ಷಕ ವಿಂಟರ್‌ವೇರ್‌ಗಳು (Pet Winterwear Fashion) ಬಿಡುಗಡೆಯಾಗಿವೆ. ಮನೆಯ ಸದಸ್ಯನಂತಿರುವ ಮುದ್ದು ನಾಯಿ ಮರಿಗಳಿಗೂ ಪಫರ್ ಜಾಕೆಟ್, ರಿವರ್ಸಿಬಲ್ ಡಾಗ್ ಜಾಕೆಟ್, ಪೆಟ್ ಸ್ವೆಟ್ ಶರ್ಟ್, ಕ್ವಿಲ್ಟೆಡ್ ಡಾಗ್ ಜಾಕೆಟ್, ನಿಟ್ ಡಾಗ್ ಸ್ವೆಟಡ್ಸ್, ವಿಂಟರ್ ಸ್ನಗ್ಮಲರ್ಸ್ ಡಾಗ್ ಜಾಕೆಡ್, ಡಾಗ್ ಸ್ವೆಟರ್, ಡಾಗ್ ಹೂಡಿ, ರೆಡ್ ಹಾಗೂ ಬ್ಲಾಕ್ ಸ್ಟ್ರೈಪ್ಸ್ ಬೆಲ್ಟ್ ಸೇರಿದಂತೆ ನಾನಾ ಬಗೆಯ ವಿಂಟರ್‌ವೇರ್ಸ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ. ಇನ್ನು, ಆಯಾ ನಾಯಿಗಳ ಬ್ರೀಡ್‌ಗೆ ತಕ್ಕಂತೆ ಅಥವಾ ಅವುಗಳ ಆಕಾರ, ಎತ್ತರಕ್ಕೆ ತಕ್ಕಂತೆ ಈ ವಿಂಟರ್‌ವೇರ್‌ಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಪೆಟ್ ಶಾಪ್‌ಗಳಲ್ಲಿ ಈಗಾಗಲೇ ದೊರೆಯುತ್ತಿವೆ. . ಅವುಗಳಲ್ಲಿ ಶ್ವಾನಗಳನ್ನು ಬೆಚ್ಚಗಿಡುವಂತಹ 3 ಶೈಲಿಯ ವಿಂಟರ್‌ವೇರ್ಸ್ ಅತಿ ಹೆಚ್ಚು ಬೇಡಿಕೆ ಹೆಚ್ಚಿಸಿಕೊಂಡಿವೆ ಎನ್ನುತ್ತಾರೆ ಪೆಟ್ ಲವರ್ ದೀಪಾ ನಾಯರ್.
ಡಾಗ್ ರಿವರ್ಸಿಬಲ್ ಜಾಕೆಟ್ಸ್
ನಾಯಿ ಮರಿಗಳಿಗೂ ಬಗೆಬಗೆಯ ಜಾಕೆಟ್ಗಳು ಬಂದಿವೆ. ಅವುಗಳಲ್ಲಿ ಎರಡೂ ಕಡೆಯೂ ಬಳಸಬಹುದಾದ ರಿವರ್ಸಿಬಲ್ ಜಾಕೆಟ್‌ಗಳು ಈ ಸೀಸನ್‌ನಲ್ಲಿ ಅತಿ ಹೆಚ್ಚು ವಿನ್ಯಾಸದಲ್ಲಿ ಬಂದಿವೆ ಎನ್ನುತ್ತಾರೆ ಪೆಟ್ ಶಾಪ್‌ನ ಮ್ಯಾನೇಜರ್ ರಾಕಿ. ಅವರ ಪ್ರಕಾರ, ಅವುಗಳಲ್ಲಿ ವೈಬ್ರೆಂಟ್ ಕಲರ್‌ನವು ಟ್ರೆಂಡಿಯಾಗಿವೆಯಂತೆ.
ಡಾಗ್ ಕೋಟ್ಸ್
ಇನ್ನು, ಶ್ವಾನಗಳ ಕೋಟ್‌ಗಳು ಈ ಸೀಸನ್‌ನಲ್ಲಿ ನಾನಾ ಕಲರ್ ಹಾಗೂ ವಿನ್ಯಾಸಗಳಲ್ಲಿ ಎಂಟ್ರಿ ನೀಡಿವೆ. ಸಾಮಾನ್ಯ ಕ್ಲಾತ್ ಫ್ಯಾಬ್ರಿಕ್‌ನಿಂದಿಡಿದು ಉಲ್ಲನ್, ಪಫರ್ ಕೋಟ್, ಅಲ್ಟ್ರಾ ವೆದರ್ ಪ್ರೂಫ್ ಕೋಟ್ ಹೆಸರಲ್ಲಿ ಆನ್‌ಲೈನ್ ಶಾಪ್‌ಗಳಲ್ಲಿ ದೊರೆಯುತ್ತಿವೆ.
ಬೆಚ್ಚಗಿಡುವ ಡಾಗ್ ಸ್ವೆಟರ್
ಮುದ್ದು ಶ್ವಾನಗಳನ್ನು ಬೆಚ್ಚಗಿಡುವ ಸ್ವೆಟರ್‌ಗಳು ಕೂಡ ಈ ಸೀಸನ್‌ನಲ್ಲಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಗುಡ್ಡ ಗಾಡು ಪ್ರದೇಶಗಳಲ್ಲಿ ವಾಸಿಸುವಂತಹ ಜನರು ತಮ್ಮ ಮುದ್ದಿನ ಶ್ವಾನವನ್ನು ಬೆಚ್ಚಗಿಡಲು ಈ ಶೈಲಿಯ ಡಾಗ್ ಸ್ವೆಟರ್‌ಗಳನ್ನು ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಮಾರಾಟಗಾರರಾದ ರಾಹುಲ್
ಈ ಸುದ್ದಿಯನ್ನೂ ಓದಿ | Fixed Deposit: ಎಸ್‌ಬಿಐ ಎಫ್‌ಡಿ; 7 ವರ್ಷಗಳವರೆಗೆ 7 ಲಕ್ಷ ರೂ. ಹೂಡಿಕೆ ಮಾಡಿದರೆ ಸಿಗುವ ಬಡ್ಡಿ ಎಷ್ಟು?
ಮುದ್ದಿನ ನಾಯಿ ಮರಿಗೆ ವಿಂಟರ್‌ವೇರ್ಸ್ ಆಯ್ಕೆ ಹೇಗೆ?
- ವಿಂಟರ್‌ವೇರ್ಸ್ ಈ ಸೀಸನ್ ಟ್ರೆಂಡ್‌ನಲ್ಲಿ ಇದೆಯೇ ಎಂಬುದನ್ನು ಗಮನಿಸಿ.
- ಸರಿಯಾದ ಸೈಝ್‌ನದ್ದನ್ನು ಆಯ್ಕೆ ಮಾಡಿ.
- ಈ ವಿಂಟರ್‌ವೇರ್ಸ್ ವಾಶ್ ಮಾಡಬಹುದಾ ಎಂಬುದನ್ನು ತಿಳಿದುಕೊಳ್ಳಿ.
- ನಾಯಿಯ ಜಾತಿ ಹಾಗೂ ಆಕಾರಕ್ಕೆ ತಕ್ಕಂತೆ ವಿಂಟರ್‌ವೇರ್ಸ್ ಆಯ್ಕೆ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)