Saturday, 16th November 2024

Viral Video: ಪೊಲೀಸ್‌ಗೇ ಕರೆ ಮಾಡಿದ ಸೈಬರ್ ವಂಚಕ; ಮುಂದೇನಾಯ್ತು ನೋಡಿ!

Viral Video

ಪೊಲೀಸ್ ಅಧಿಕಾರಿಯೊಬ್ಬರಿಗೆ (Cyber Security Police) ವಂಚಕ ನಕಲಿ ಪೊಲೀಸ್ ( Fake Cop) ಕರೆ ಮಾಡಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ (Viral Video) ಆಗಿದೆ. ಇದು ಹಲವಾರು ಮಂದಿಯ ಕುತೂಹಲಕ್ಕೆ ಕಾರಣವಾಗಿತ್ತು. ಮುಂದೇನಾಯ್ತು ಎಂದು ಪ್ರಶ್ನಿಸಿ ಸಾಕಷ್ಟು ಮಂದಿ ಕಾಮೆಂಟ್ ಕೂಡ ಮಾಡಿದ್ದಾರೆ.

ಕೇರಳದ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಡಿಯೋ ಕರೆ ಮಾಡಿರುವ ನಕಲಿ ಪೊಲೀಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೆಮರಾದಲ್ಲಿ ಸ್ಥಳವನ್ನು ಬಹಿರಂಗಪಡಿಸಲು ತನ್ನ ಕೆಮರಾ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು. ಸಂಭಾಷಣೆಯು ಮುಂದುವರಿದಾಗ ಕೇರಳದ ಪೊಲೀಸ್ ಶೀಘ್ರದಲ್ಲೇ ತಮ್ಮ ಕೆಮರವನ್ನು ಸ್ವಿಚ್ ಆನ್ ಮಾಡಿದಾಗ ವಂಚಕನಿಗೆ ಆಘಾತವಾಗಿದೆ.

ಹೈದರಾಬಾದ್ ಪೊಲೀಸ್ ಹೆಡ್ ಕ್ವಾರ್ಟರ್ ನಿಂದ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ವ್ಯಕ್ತಿಯೊಬ್ಬರು ಕೇರಳ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾನೆ.

ಸೈಬರ್ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಪೊಲೀಸ್ ಅಧಿಕಾರಿಗೆ ಕರೆ ಮಾಡಿದ ನಕಲಿ ಪೊಲೀಸ್‌ನೊಂದಿಗೆ ನಡೆಸಿದ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿಶೂರ್ ನಗರ ಪೊಲೀಸರು ಇದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೇರಳ ಪೊಲೀಸ್ ಅಧಿಕಾರಿ ಕರೆ ಮಾಡಿದವನ ಸ್ಥಳ ಮತ್ತು ಇತರ ವಿವರಗಳನ್ನು ಸಂಗ್ರಹಿಸಿರುವ ಬಗ್ಗೆ ಪ್ರಸ್ತಾಪಿಸಿದಾಗ ನಕಲಿ ಪೊಲೀಸ್ ತಬ್ಬಿಬ್ಬಾಗಿದ್ದು, ಮೌನಕ್ಕೆ ಶರಣಾದ. ಈ ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ಸ್ಪಷ್ಟವಾಗಿಲ್ಲವಾದರೂ ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಕುತೂಹಲ ಕೆರಳಿಸಿದೆ.

ನಕಲಿ ಪೊಲೀಸ್‌ಗೆ ಸೈಬರ್ ತಂಡದ ತ್ವರಿತ ಪ್ರತಿಕ್ರಿಯೆಗೆ ಸಾಕಷ್ಟು ಮಂದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕೆಲವರು ಕೇರಳ ಪೊಲೀಸರನ್ನು ಶ್ಲಾಘಿಸಿದರೆ, ಇನ್ನು ಕೆಲವರು ಕಾಮೆಂಟ್‌ಗಳ ವಿಭಾಗದಲ್ಲಿ ‘ನಗು’ ಎಮೋಜಿಗಳನ್ನು ಬಿಟ್ಟು ನಕಲಿ ಪೊಲೀಸ್‌ನ ಪರಿಸ್ಥಿತಿಯ ಬಗ್ಗೆ ತಮಾಷೆ ಮಾಡಿದ್ದಾರೆ.

Viral News: ಸೇನಾ ಹೆಲಿಕಾಪ್ಟರ್‌ನಲ್ಲೇ ಯೋಧರ ಲವ್ವಿ-ಡವ್ವಿ! ಅರೆನಗ್ನಾವಸ್ಥೆಯಲ್ಲೇ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಜೋಡಿ- ಆಮೇಲೆ ನಡೆದಿದ್ದೇ ಬೇರೆ

ಇದೇ ರೀತಿಯ ರೀತಿಯ ಘಟನೆ ಫ್ಲೋರಿಡಾದಲ್ಲೂ ನಡೆದಿತ್ತು. ಸಂಚಾರದ ವೇಳೆ ಸಿಗ್ನಲ್ ಕೆಂಪಾಗಿದ್ದರೂ ನಕಲಿ ಪೊಲೀಸ್ ವೊಬ್ಬ ಮಿನುಗುವ ದೀಪವಿರುವ ವಾಹನದಲ್ಲಿ ಬಂದು ನಿಜವಾದ ಪೊಲೀಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದ. ಕರ್ತವ್ಯ ನಿರತ ಪೊಲೀಸರು ನಕಲಿ ಪೊಲೀಸ್ ವಿರುದ್ಧ ಕ್ರಮ ಕೈಗೊಂಡಿದ್ದರು. ಆರೋಪಿಯನ್ನು 35 ವರ್ಷದ ಫ್ರಾಂಕ್ ಮೈಕೆಲ್ ಡಿಜಿಯುಲಿಯೊ ಎಂದು ಗುರುತಿಸಲಾಗಿದೆ.