ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025 Mega Auction) ಟೂರ್ನಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಶುಕ್ರವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಮೆಗಾ ಹರಾಜಿಗೆ 574 ಆಟಗಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೆಗಾ ಆಕ್ಷನ್ ನವಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ.
2025ರ ಐಪಿಎಲ್ ಮೆಗಾ ಹರಾಜಿಗೆ ಒಟ್ಟು 1574 ಆಟಗಾರರು (1165 ಭಾರತೀಯ ಆಟಗಾರರು, 409 ವಿದೇಶಿ ಆಟಗಾರರು) ತಮ್ಮ ಹೆಸರುಗಳನ್ನು ನೋಂದಾಯಿಸಿದ್ದರು. ಇದರಲ್ಲಿ 574 ಆಟಗಾರರನ್ನು ಮೆಗಾ ಹರಾಜಿಗೆ ಅಂತಿಮಗೊಳಿಸಲಾಗಿದೆ. 70 ವಿದೇಶಿ ಆಟಗಾರರು ಸೇರಿದಂತೆ ಎಲ್ಲಾ ಫ್ರಾಂಚೈಸಿಗಳು ಒಟ್ಟು 204 ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಬೇಕಾಗಿದೆ.
ಮೆಗಾ ಹರಾಜಿಗೆ ಅಂತಿಮಗೊಳಿಸಿರುವ 574 ಆಟಗಾರರ ಪಟ್ಟಿಯಲ್ಲಿ 366 ಭಾರತೀಯ ಆಟಗಾರರು ಹಾಗೂ 208 ವಿದೇಶಿ ಆಟಗಾರರು ಮತ್ತು ಮೂವರು ಅಸೋಸಿಯೇಷನ್ ರಾಷ್ಟ್ರಗಳ ಆಟಗಾರರಾಗಿದ್ದಾರೆ. ಹರಾಜು ಪಟ್ಟಿಯು ಅನುಭವಿ ಆಟಗಾರರು ಮತ್ತು ಭರವಸೆಯ ಹೊಸ ಪ್ರತಿಭೆಗಳ ಮಿಶ್ರಣವನ್ನು ಒಳಗೊಂಡಿದೆ. ಇದರಲ್ಲಿ 48 ಭಾರತೀಯ ಕ್ಯಾಪ್ಡ್ ಆಟಗಾರರು ಹಾಗೂ 193 ಕ್ಯಾಪ್ಡ್ ವಿದೇಶಿ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಮೆಗಾ ಹರಾಜಿನಲ್ಲಿ 318 ಭಾರತೀಯ ಅನ್‌ಕ್ಯಾಪ್ಡ್ ಹಾಗೂ 12 ಅನ್‌ಕ್ಯಾಪ್ಡ್ ಆಟಗಾರರು ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ.
IPL 2025 Auction: ಪಂತ್, ರಾಹುಲ್ ಸೇರಿ 23 ಆಟಗಾರರಿಗೆ 2 ಕೋಟಿ ಮೂಲಬೆಲೆ
ಮೆಗಾ ಹರಾಜಿನಲ್ಲಿರುವ ಸ್ಟಾರ್ ಆಟಗಾರರು
ಸೆಟ್-1
ಜೋಸ್ ಬಟ್ಲರ್ – 2 ಕೋಟಿ ರೂ. , ಶ್ರೇಯಸ್ ಅಯ್ಯರ್ – 2 ಕೋಟಿ ರೂ. , ರಿಷಭ್ ಪಂತ್ – 2 ಕೋಟಿ ರೂ. , ಕಗಿಸೊ ರಬಾಡ – 2 ಕೋಟಿ ರೂ. , ಅರ್ಷದೀಪ್ ಸಿಂಗ್ – 2 ಕೋಟಿ ರೂ. , ಮಿಚೆಲ್ ಸ್ಟಾರ್ಕ್ – 2 ಕೋಟಿ ರೂ.
ಸೆಟ್-2
ಯುಜ್ವೇಂದ್ರ ಚಹಲ್ – 2 ಕೋಟಿ ರೂ, ಲಿಯಾಮ್ ಲಿವಿಂಗ್‌ಸ್ಟೋನ್ – 2 ಕೋಟಿ ರೂ., ಡೇವಿಡ್ ಮಿಲ್ಲರ್ – 2 ಕೋಟಿ ರೂ. , ಕೆ ಎಲ್ ರಾಹುಲ್ – 2 ಕೋಟಿ ರೂ. , ಮೊಹಮ್ಮದ್ ಶಮಿ – 2 ಕೋಟಿ ರೂ. ,ಮೊಹಮ್ಮದ್ ಸಿರಾಜ್ – 2 ಕೋಟಿ ರೂ.
🚨 NEWS 🚨
— IndianPremierLeague (@IPL) November 15, 2024
TATA IPL 2025 Player Auction List Announced!
All the Details 🔽 #TATAIPLhttps://t.co/QcyvCnE0JM
ಆಟಗಾರರ ಮೂಲ ಬೆಲೆಯ ವಿವರ
ಮೀಸಲು ಬೆಲೆಯ ಪಟ್ಟಿಯಲ್ಲಿ 80 ಆಟಗಾರರು ಮೂಲ ಬೆಲೆ 2 ಕೋಟಿ ರೂ. ಗಳಿಂದ ಬಿಡ್ ವಾರ್ ಆರಂಭವಾಗಲಿದ್ದು, ಫ್ರಾಂಚೈಸಿಗಳ ಬೇಡಿಕೆಗೆ ತಕ್ಕಂತೆ ಗರಿಷ್ಠ ಮೊತ್ತವನ್ನು ಜೇಬಿಗಳಿಸಿಕೊಳ್ಳಲಿದ್ದಾರೆ. ಇನ್ನು 27 ಆಟಗಾರರು 1.5 ಕೋಟಿ ರೂ. ಮೂಲ ಬೆಲೆಯನ್ನು ಹೊಂದಿದ್ದಾರೆ. 18 ಆಟಗಾರರು ಮೂಲ ಬೆಲೆ 1.25 ಕೋಟಿ ರೂ., 23 ಆಟಗಾರರು ಒಂದು ಕೋಟಿ ರೂ. ಮೂಲ ಬೆಲೆಯನ್ನು ಹೊಂದಿದ್ದಾರೆ. 320 ಆಟಗಾರರು 30 ಲಕ್ಷ ರೂ. ಮೂಲ ಬೆಲೆಯನ್ನು ಹೊಂದಿದ್ದಾರೆ. ಇನ್ನು ಪ್ರತಿಭಾವಂತ ಆಟಗಾರರನ್ನು ಆಯಾ ಫ್ರಾಂಚೈಸಿಗಳು ತಮ್ಮ ಅನಕೂಲಕ್ಕೆ ತಕ್ಕಂತೆ ತಮ್ಮಲ್ಲಿ ಉಳಿಸಿಕೊಳ್ಳಬಹುದು.
IPL 2025 Retention: ರಿಟೇನ್‌ನಲ್ಲಿ ಗರಿಷ್ಠ ಮೊತ್ತ ಪಡೆದ ಟಾಪ್ 10 ಆಟಗಾರರು
ಮುಂಬರುವ ಐಪಿಎಲ್ ಟೂರ್ನಿಯ ನಿಮಿತ್ತ ಅತ್ಯಂತ ಬಲಿಷ್ಠ ತಂಡವನ್ನು ಕಟ್ಟುವ ಸಲುವಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಅನುಭವಿ ಹಾಗೂ ಪ್ರತಿಭಾವಂತ ಆಟಗಾರರನ್ನು ಖರೀದಿಸಲು ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಿವೆ. ಇದರಲ್ಲಿ 70 ವಿದೇಶಿ ಆಟಗಾರರು ಕೂಡ ಎಲ್ಲಾ ಫ್ರಾಂಚೈಸಿಗಳಿಗೆ ಸೇರ್ಪಡೆಯಾಗಲಿದ್ದಾರೆ.