Friday, 15th November 2024

Star Winter Care: ವಿಂಟರ್‌ ಸೀಸನ್‌ ಆರೈಕೆಗೆ ಸ್ಯಾಂಡಲ್‌ವುಡ್‌ ನಟಿ ಪಾವನಾ ನೀಡಿರುವ ಸಿಂಪಲ್‌ ಸಲಹೆಗಳಿವು

Star Winter Care

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಂಡಲ್‌ವುಡ್ ನಟಿ ಪಾವನಾ ವಿಂಟರ್‌ ಫ್ಯಾಷನ್‌ (Star Winter Care) ಔಟ್‌ಫಿಟ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ನೋಡಲು ಅತ್ಯಾಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಪಾವನಾ ಮೊದಲಿನಿಂದಲೂ ನ್ಯಾಚುರಲ್‌ ಸೌಂದರ್ಯ ಹೊಂದಿರುವ ನಟಿ. ತನ್ನ ಮೋಹಕ ಸೌಂದರ್ಯದಿಂದಲೇ ಎಲ್ಲರನ್ನೂ ಸೆಳೆಯುವ ಚೆಲುವೆ. ಈಗಾಗಲೇ ಸಾಕಷ್ಟು ಸಿನಿಮಾಗಳ ಮೂಲಕ ಸಿನಿ ಪ್ರಿಯರ ಮನಗೆದ್ದಿರುವ ಪಾವನಾ, ಆಗಾಗ್ಗೆ ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾಷೆನಬಲ್‌ ಫೋಟೋಗಳನ್ನು ಅಪ್‌ಡೇಟ್‌ ಮಾಡುತ್ತಿರುತ್ತಾರೆ. ಇದಕ್ಕೆ ಪೂರಕ ಎಂಬಂತೆ, ಇದೀಗ ಕಾಣಿಸಿಕೊಂಡ ಫುಲ್‌ಸ್ಲೀವ್‌ ಬ್ಲ್ಯೂ ಕ್ರಾಪ್‌ ಟಾಪ್‌ ಹಾಗೂ ಬಲೂನ್‌ ಪ್ಯಾಂಟ್‌ ಲುಕ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಹೀಗೆ ಅಂದವಾಗಿ ಕಾಣಿಸಲು ಈ ಸೀಸನ್‌ನಲ್ಲಿ ಆರೈಕೆ ಅತ್ಯಗತ್ಯ ಎನ್ನುತ್ತಾರೆ ಅವರು.

ಚಿತ್ರಗಳು: ಪಾವನಾ, ಸ್ಯಾಂಡಲ್‌ವುಡ್‌ ನಟಿ

ವಿಂಟರ್‌ನಲ್ಲಿ ನಟಿ ಪಾವನಾ ಆರೈಕೆ

ವಿಂಟರ್‌ ಸೀಸನ್‌ ಆರೈಕೆ ಕುರಿತಂತೆ ವಿಶ್ವವಾಣಿ ನ್ಯೂಸ್‌ ಮಾತನಾಡಿಸಿದಾಗ, ಓದುಗರಿಗೆ ಒಂದಿಷ್ಟು ಸಲಹೆಗಳನ್ನು ನೀಡಿದರು. ಚಳಿಗಾಲದಲ್ಲಿ ಫ್ಯಾಷನ್‌-ಬ್ಯೂಟಿಗಾಗಿ ಏನೆಲ್ಲಾ ಮಾಡಬೇಕು? ಮಾಡಬಾರದು? ಎಂಬುದನ್ನು ವಿವರಿಸಿದರು. ಈ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಬೆಚ್ಚಗಿನ ಕಂಫರ್ಟ್ ಫ್ಯಾಷನ್‌ಗೆ ಆದ್ಯತೆ ನೀಡಿ

ಈ ಚಳಿಗಾಲದಲ್ಲಿ ಆದಷ್ಟೂ ಬೆಚ್ಚಗಿಡುವ ಔಟ್‌ಫಿಟ್‌ಗೆ ಸೈ ಎನ್ನಿ. ಡ್ರೈ ಆಗುವಂತಹ ಸ್ಕಿನ್‌ ಎಕ್ಸ್‌ಪೋಸ್‌ ಮಾಡುವಂತಹ ಫ್ಯಾಷನ್‌ವೇರ್ಸ್‌ಗೆ ನೋ ಹೇಳಿ. ಲೇಯರ್‌ ಲುಕ್‌ಗೆ ಆದ್ಯತೆ ನೀಡಿ.

ತ್ವಚೆಯನ್ನು ಆರೋಗ್ಯವಾಗಿರಿಸುವ ಆಯಿಲ್‌ ಮಸಾಜ್‌

ಈ ಸೀಸನ್‌ನಲ್ಲಿ ತ್ವಚೆ ಹಾಗೂ ಚರ್ಮ ಒಣಗಿದಂತಾಗುತ್ತದೆ. ಅದಕ್ಕಾಗಿ ವಾರಕ್ಕೆರಡು ಬಾರಿಯಾದರೂ ವಧನಕ್ಕೆ ಆಯಿಲ್‌ ಮಸಾಜ್‌ ಮಾಡಿ. ಇದರಿಂದ ರಕ್ತಸಂಚಾರ ಸುಗಮವಾಗಿ ಮುಖ ಸುಕೋಮಲವಾಗಿ ಕಾಣಿಸುತ್ತದೆ.

ಹೋಮ್‌ ಸಲೂನ್‌

ಕೆಮಿಕಲ್‌ಸಹಿತ ಆರೈಕೆ ಬದಲು ಮನೆಯಲ್ಲೆ ದೊರೆಯುವ ಕಡಲೆಹಿಟ್ಟು ಬಳಸಿ, ಫೇಸ್‌ವಾಶ್‌ ಮಾಡಿ. ತಿಂಗಳಿಗೊಮ್ಮೆ ಕ್ಲೀನ್‌ಅಪ್‌ ಮಾಡಿಕೊಳ್ಳಿ. ಇದರಿಂದ ಮುಖದ ಸೌಂದರ್ಯ ನಳನಳಿಸಿ, ನ್ಯಾಚುರಲ್‌ ಆಗಿ ಕಾಣಿಸುವಿರಿ. ಈ ಸೀಸನ್‌ನಲ್ಲಿ ಫ್ರೀ ಹೇರ್‌ಸ್ಟೈಲ್‌ ಬದಲು ಕೂದಲನ್ನು ಟೈ ಮಾಡಿ.

ಹೆವ್ವಿ ಮೇಕಪ್‌ಗೆ ನೋ ಹೇಳಿ

ಚಳಿಗಾಲದಲ್ಲಿ ಮುಖಕ್ಕೆ ಮೇಕಪ್‌ ಹಚ್ಚಿದರೂ ನೋಡಲು ನ್ಯಾಚುರಲ್‌ ಆಗಿ ಕಾಣಿಸುವುದಿಲ್ಲ. ಹಾಗಾಗಿ ಆದಷ್ಟೂ ಮೇಕಪ್‌ ಮಾಡಬೇಡಿ. ಸಿಂಪಲ್‌ ಮಾಯಿಶ್ಚರೈಸರ್‌, ಲಿಪ್‌ಸ್ಟಿಕ್‌, ಕಾಡಿಗೆ ಹಚ್ಚಿ. ಮೇಕಪ್‌ ಕಿಟ್‌ಗೆ ಇನ್ವೆಸ್ಟ್‌ ಮಾಡುವ ಬದಲು ಆದಷ್ಟೂ ಚರ್ಮದ ಆರೋಗ್ಯದೆಡೆಗೆ ಗಮನ ನೀಡಿ.

ಈ ಸುದ್ದಿಯನ್ನೂ ಓದಿ | Pet Winterwear Fashion: ಈ ಸೀಸನ್‌‌‌ನಲ್ಲಿ ಟ್ರೆಂಡಿಯಾದ 3 ಶೈಲಿಯ ಡಾಗ್‌ ವಿಂಟರ್‌ವೇರ್‌‌‌ಗಳಿವು!

ಪಾವನಾ ಸ್ಟೈಲಿಂಗ್‌ ಝಲಕ್‌

  • ಸಿಂಪಲ್‌ ಡ್ರೆಸ್ಸಿಂಗ್‌ ಮೊದಲ ಆಯ್ಕೆ.
  • ಮಿನಿಮಲ್‌ ಆಕ್ಸೆಸರೀಸ್‌ ಚಾಯ್ಸ್.
  • ಸೀರೆ ಅಂದ್ರೆ ಇಷ್ಟ!
  • ಚಳಿಗಾಲದಲ್ಲಿ ಮೇಕಪ್‌ ಮಾಡುವುದೇ ಇಲ್ಲ!

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)