ವೀಕೆಂಡ್ ವಿತ್ ಮೋಹನ್
ಮೋಹನ್ ವಿಶ್ವ
ಭಾರತಕ್ಕೆ ಬಂದ ಬ್ರಿಟಿಷರು ಮೊದಲು ಮಾಡಿದ ಕೆಲಸವೆಂದರೆ, ಇಲ್ಲಿನ ಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡಿ, ಅದನ್ನು ನಾಶ ಮಾಡುವ ದೂರದೃಷ್ಟಿಯ ಯೋಜನೆಯನ್ನು ರೂಪಿಸಿ, ತಾವು ದೇಶ ಬಿಟ್ಟು ಹೋದ ನಂತರವೂ ತಮ್ಮ ಯೋಜನೆಗಳು ದೀರ್ಘ ಕಾಲದವರೆಗೂ ಆಳವಾಗಿ ಸಮಾಜದಲ್ಲಿ ಬೇರೂರುವಂತೆ ಮಾಡಿದ್ದು. ಪ್ರತಿ ೨೫ ಕಿಲೋಮೀಟರಿಗೆ ಬದಲಾಗುವ ಭಾರತದ ಸಂಸ್ಕೃತಿಗೆ ದೊಡ್ಡ ಪೆಟ್ಟು ಕೊಡಲು, ಬ್ರಿಟಿಷರು ಮೊದಲು ಭಾರತದ ಶಿಕ್ಷಣ ವ್ಯವಸ್ಥೆಗೆ ಕೈ ಹಾಕಿದರು.
ನಂತರ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಬ್ರಿಟಿಷ್ ಮಾದರಿಯ ಕಾನೂನುಗಳನ್ನು ಜಾರಿಗೆ ತಂದರು, ಬ್ರಿಟಿಷರು ದೇಶ ಬಿಟ್ಟ ೭೭ ವರ್ಷಗಳ ನಂತರವೂ ಅವರ ಶಿಕ್ಷಣ ಮತ್ತು ಕಾನೂನುಗಳು ಭಾರತದಲ್ಲಿ ಜಾರಿಯಲ್ಲಿದೆ. ಅವರು ಬಿಟ್ಟು ಹೋದ ಗುಲಾಮಿ ಕುರುಹು ಗಳನ್ನು ತೆಗೆದುಹಾಕುವ ಕೆಲಸ ಮಾಡಿದರೆ ವಿರೋಧ ಪಕ್ಷಗಳು ರಾಜಕೀಯ ಮಾಡುತ್ತವೆ, ಸಾವಿರಾರು ವರ್ಷಗಳ ಹಿಂದೆ ಭಾರತದಲ್ಲಿ ಚಾಲ್ತಿಯಲ್ಲಿದ್ದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಿದರೆ, ಬ್ರಾಹ್ಮಣ್ಯದ ಹೇರಿಕೆಯೆಂಬ ರಾಜಕೀಯ ಶುರುವಾಗುತ್ತದೆ.
ಬಿಹಾರದ ನಳಂದ ವಿಶ್ವವಿದ್ಯಾಲದಲ್ಲಿ ವ್ಯಾಸಂಗ ಮಾಡಲು ವಿದೇಶಿ ವಿದ್ಯಾರ್ಥಿಗಳು ಸಾವಿರ ವರ್ಷಗಳ ಹಿಂದೆ ಭಾರತಕ್ಕೆ ಬರುತ್ತಿದ್ದರು. ಬ್ರಿಟಿಷರು ತಮ್ಮ ‘ಈ ಇಂಡಿಯಾ ಕಂಪೆನಿ’ ಮೂಲಕ ಸೇವೆಯ ಹೆಸರಿನಲ್ಲಿ ಕ್ರಿಶ್ಚಿಯನ್ ಮಿಷನರಿಗಳನ್ನು ಬಳಸಿಕೊಂಡು ಮತಾಂತರ
ಮಾಡಿದ್ದರು. ಬಾಬಾಸಾಹೇಬರಿಗೆ ತಮ್ಮ ಬಾಲ್ಯದಲ್ಲಿ ಹಿಂದೂ ಧರ್ಮದಲ್ಲಿ ಅನುಭವಿಸಿದ ತಾರತಮ್ಯದ ಬಗ್ಗೆ ಬಹಳ ನೋವಿತ್ತು. ಹಿಂದೂ ಧರ್ಮದಲ್ಲಿ ತಮ್ಮವರಿಗಾಗಿದ್ದ ಅವಮಾನದ ಬಗ್ಗೆ ಕೊನೆಯವರೆಗೂ ಬಾಬಾಸಾಹೇಬರು ಹೇಳಿದ್ದಾರೆ.
ವೀರ ಸಾವರ್ಕರ್ ದಲಿತರಿಗಾಗಿ ಸ್ಥಾಪಿಸಿದ ‘ಪತಿತ ಪಾವನ ಮಂದಿರ’ದ ಬಗ್ಗೆ ಬಾಬಾಸಾಹೇಬರಿಗೆ ಹೆಮ್ಮೆ ಇತ್ತು, ಹಿಂದೂ ಧರ್ಮದ ಬಗ್ಗೆ ಬಾಬಾಸಾಹೇಬರಿಗೆ ಬೇಸರವಿದ್ದದ್ದು ನಿಜ,ಹಾಗಂತ ಅವರಿಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ಮೇಲೆ ಒಲವಿರಲಿಲ್ಲ. ಬಾಬಾಸಾಹೇಬರು
ಮತಾಂತರವಾಗಲು ನಿರ್ಧರಿಸಿದಾಗ, ಅನೇಕರು ತಮ್ಮ ಧರ್ಮಕ್ಕೆ ಬರುವಂತೆ ಆಹ್ವಾನಿಸಿದ್ದರು.
ಕ್ರಿಶ್ಚಿಯನ್ ಮತಕ್ಕೆ ಮತಾಂತರವಾಗಿ ಮತ್ತೊಮ್ಮೆ ಭಾರತವನ್ನು ‘ಈ ಇಂಡಿಯಾ ಕಂಪನಿ’ ಮಾಡುವುದು ಅವರಿಗೆ ಇಷ್ಟವಿರಲಿಲ್ಲ.
ಮುಸಲ್ಮಾನರ ರಾಷ್ಟ್ರೀಯತೆಯ ಮೇಲೆ ಅಂಬೇಡ್ಕರರಿಗೆ ನಂಬಿಕೆ ಇರಲಿಲ್ಲ, ಮುಸಲ್ಮಾನರಿಗೆ ದೇಶಕ್ಕಿಂತಲೂ ತಮ್ಮ
ಧರ್ಮವೇ ಮುಖ್ಯವಾಗಿದ್ದಂತಹ ವಿಷಯ ಬಾಬಾಸಾಹೇಬರಿಗೆ ತಿಳಿದಿತ್ತು.
೧೯೪೭ ರಲ್ಲಿ ಅಖಂಡ ಭಾರತ ವಿಭಜನೆ ಯಾದಾಗ ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಪೂರ್ಣವಾಗಿ ಜನಸಂಖ್ಯಾ ವಿನಿಮಯವಾಗ ಬೇಕೆಂದು ಅಂಬೇಡ್ಕರರು ಹೇಳಿದ್ದರು. ಹಿಂದೂ ಧರ್ಮದಲ್ಲಿ ತಮಗಾದಂತಹ ಅನ್ಯಾಯಗಳ ಬಗ್ಗೆ ಬಹಳಷ್ಟು ನೊಂದಿದ್ದರೂ ಸಹ ಬಾಬಾಸಾಹೇಬರು ಮುಸಲ್ಮಾನ್ ಧರ್ಮಕ್ಕೆ ಮತಾಂತರವಾಗಲಿಲ್ಲ. ಹೈದರಾಬಾದಿನ ನಿಜಾಮ ಮುಸ್ಲಿಂ ಮತಕ್ಕೆ ಮತಾಂತರವಾಗಲು ಬಾಬಾಸಾಹೇಬರಿಗೆ ದೊಡ್ಡ ಮೊತ್ತದ ಹಣದ ಆಮಿಷವನ್ನು ಒಡ್ಡಿದ್ದ. ಇಸ್ಲಾಂ ಧರ್ಮದಲ್ಲಿನ ಅನಿಷ್ಟ ಪದ್ಧತಿಗಳ ಬಗ್ಗೆ ಬಾಬಾಸಾಹೇಬರು ನಿಷ್ಟೂರವಾಗಿ ಹೇಳಿದ್ದರು, ಹೆಣ್ಣು ಮಕ್ಕಳು ಬುರ್ಖಾ ಧರಿಸಿದರೆ ಹಲವು ರೋಗಗಳಿಗೆ ತುತ್ತಾಗುತ್ತಾರೆಂದು ಹೇಳಿದ್ದರು.
ಬಾಬಾಸಾಹೇಬರ ಸಂವಿಧಾನವನ್ನು ಮುನ್ನೆಲೆಗೆ ತಂದು ಮಾತನಾಡುವ ಕಾಂಗ್ರೆಸ್ಸಿನ ನಾಯಕರು ಅವರ ತತ್ವಗಳ ವಿರುದ್ಧವಾಗಿ ಹಿಜಾಬ್ ಧರಿಸುವುದನ್ನು ಸಮರ್ಥಿಸಿಕೊಳ್ಳುತ್ತಾರೆ. ಗಾಂಧಿಯವರ ಪ್ರಕಾರ ಮುಸಲ್ಮಾನರಷ್ಟು ಬಲಿಷ್ಠರಿನ್ನೊಬ್ಬರಿರಲಿಲ್ಲ, ಇದು ತಿಳಿದಿದ್ದರೂ ಸಹ ಅವರು ಹಿಂದುಗಳಿಗೆ ನೀಡುತ್ತಿದ್ದ ಸಂದೇಶವೆಂದರೆ ‘ಸತ್ತರೂ ಪರವಾಗಿಲ್ಲ ಆದರೆ ಕೊಲ್ಲಬೇಡಿ’.ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ
ಸಿಗಬೇಕೆಂದು ಹೇಳುತ್ತಿದ್ದಂತಹ ಗಾಂಽಯವರಿಗೆ ಜಗಳ ಇಷ್ಟವಿರಲಿಲ್ಲ. ಮುಸಲ್ಮಾನರು ಎಷ್ಟೇ ತೊಂದರೆ ನೀಡಿದರೂ ಹಿಂದೂಗಳು ಹಿಂಸೆಯ ಮಾರ್ಗ ಹಿಡಿಯಬಾರದೆಂಬುದು ಗಾಂಧಿಯವರ ವಾದವಾಗಿತ್ತು. ದೂರದ ಟರ್ಕಿಯಲ್ಲಿನ ಖಿಲಾಫತ್ ಆಂದೋಲನ ಭಾರತಕ್ಕೆ ಕಾಲಿಟ್ಟಾಗ ಬೆಂಬಲ ಸೂಚಿಸಿದವರೆಲ್ಲರಿಗೂ ಈ ವಿಷಯ ತಿಳಿದಿದ್ದರೂ ಸಹ ಮುಸಲ್ಮಾನರ ಮಾನಸಿಕತೆಯ ಅರಿವು ಯಾರಿಗೂ ಅರ್ಥ ಆಗದಿಲ್ಲದಿರುವುದು ಬಾಬಾಸಾಹೇಬರಿಗೆ ಆಶ್ಚರ್ಯವಾದದ್ದು ನಿಜ.
ಮುಸಲ್ಮಾನರಿಂದ ದೂರವಿದ್ದ ‘ಬರ್ನಾಡ್ ಶಾ’ ಮುಸಲ್ಮಾನರ ಅಸಹನೆಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು, ಆದರೆ ಹತ್ತಿರದಲ್ಲಿದ್ದ ಗಾಂಽಯವರಿಗೆ ಅದರ ಅರಿವಿರದಿದ್ದದ್ದು ಆಶ್ಚರ್ಯ. ತಮ್ಮ ಧರ್ಮದವರ ರಕ್ಷಣೆಯ ಕಾಳಜಿ ಮುಸಲ್ಮಾನರಲ್ಲಿ ಅದೆಷ್ಟಿತ್ತೆಂದರೆ ಇತರ ವಿಷಯಗಳ ಬಗ್ಗೆ ಅವರ ದೃಷ್ಟಿ ಪೂರಾ ಕಲುಷಿತಗೊಂಡಿತ್ತು. ಸಮಾಜದಲ್ಲಿನ ಇತರ ಧರ್ಮದ ಜನರ ಆಚಾರ, ವಿಚಾರಗಳ ಬಗ್ಗೆ ಅವರಿಗೆ ಲಕ್ಷ್ಯವೇ ಇರಲಿಲ್ಲ.
ಮುಸಲ್ಮಾನರಿಗೆ ತಾವುಗಳು ಅಲ್ಪಸಂಖ್ಯಾತರಾಗಿ ಉಳಿದು, ಅದರ ನೆರಳಿನಲ್ಲಿ ತಮಗೆ ಬೇಕಿರುವ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕೆಂಬುದಷ್ಟೇ ಮೂಲ ಧ್ಯೇಯ. ಹಿಂದೂಗಳು ಬಹುಸಂಖ್ಯಾತರಾಗಿದ್ದರಿಂದ ಸಂವಿಧಾನ ರಚನೆಯ ಸಂದರ್ಭದಲ್ಲಿ ರಾಜಕೀಯವಾಗಿ ಮುಸಲ್ಮಾನರಿಗೆ ಪ್ರತ್ಯೇಕ
ಮತದಾರ ಕ್ಷೇತ್ರಕ್ಕಾಗಿ ಬೇಡಿಕೆಯೊಡ್ಡಿ ಸಂವಿಧಾನದಲ್ಲಿ ಸೇರಿಸುವುದು ಅವರ ಉದ್ದೇಶವಾಗಿತ್ತು. ಈ ಮೂಲಕ ಕೇಂದ್ರ ಮತ್ತು ರಾಜ್ಯದಲ್ಲಿ ರಾಜಕೀಯವಾಗಿ ಹೆಚ್ಚಿನ ಪ್ರಾತಿನಿಧ್ಯ ಪಡೆಯುವುದು ಬಹುತೇಕ ಮುಸ್ಲಿಂ ನಾಯಕರ ಉದ್ದೇಶವಾಗಿತ್ತು.
೧೯೩೦ ರಲ್ಲಿ ಮುಸ್ಲಿಮರಿಗೆ ಮತ್ತೊಂದು ಮಾರ್ಗ ಸಿಕ್ಕಿತ್ತು, ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಹೊಸ ಪ್ರಾಂತ್ಯಗಳನ್ನು ರಚಿಸುವ ಯೋಜನೆಯಿತ್ತು. ಈ ಮೂಲಕ ಮುಸಲ್ಮಾನರು ಬಹುಸಂಖ್ಯಾತರಾಗಿರುವ ಜಾಗಗಳಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ಒತ್ತೆಯಾಗಿರಿಸಿ, ಬಹುಸಂಖ್ಯಾತ ಮುಸಲ್ಮಾನರರೊಂದಿಗೆ ವ್ಯವಹರಿಸಲು ಒತ್ತಡಕ್ಕೊಳಪಡಿಸುವುದು. ಇದೇ ಉದ್ದೇಶದಿಂದ ಮುಸಲ್ಮಾನರು
ಬಹುಸಂಖ್ಯಾತರಾಗಿರುವ ಪ್ರಾಂತ್ಯಗಳನ್ನು ಮಾಡಿಸಿಕೊಂಡು ಅವುಗಳನ್ನು ಶಕ್ತಿಶಾಲಿಯಾಗಿ ಮಾಡುವುದು.
ಈ ನಿಟ್ಟಿನಲ್ಲಿ ಅವರು ಪ್ರತ್ಯೇಕ ‘ಸಿಂಧ್’ ಮತ್ತು ‘ವಾಯುವ್ಯ’ ಪ್ರಾಂತ್ಯದಲ್ಲಿ ಜವಾಬ್ದಾರಿಯುತ ಸರಕಾರ ಸ್ಥಾಪಿಸುವುದಕ್ಕೆ ಬೇಡಿಕೆ ಇಟ್ಟಿದ್ದರು. ಇದರಿಂದಾಗಿ ಮುಸಲ್ಮಾನರಿಗೆ ನಾಲ್ಕು ಪ್ರಾಂತ್ಯಗಳ ಆಳ್ವಿಕೆ ಸಿಗುವಂತಾಗುತ್ತಿತ್ತು, ಈ ಪ್ರಾಂತ್ಯಗಳನ್ನು ಸದೃಢಗೊಳಿಸಲು ಕೇಂದ್ರವನ್ನು ದುರ್ಬಲಗೊಳಿಸುವ ಪ್ರಯತ್ನವೂ ನಡೆಯಿತು. ಇದರ ಮುಂದುವರೆದ ಭಾಗವಾಗಿ ಈ ಪ್ರಾಂತ್ಯಗಳಿಗೆ ವಿಶೇಷವಾದ ಅಧಿಕಾರ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದರು.
ಒಟ್ಟಾರೆ ಬ್ರಿಟಿಷ್ ಇಂಡಿಯಾ ಇದ್ದಾಗ ನಿರ್ಧರಿಸಿದ್ದ ಸ್ಥಾನಗಳ ಪೈಕಿ ಮೂರನೇ ಒಂದು ಭಾಗವನ್ನು ಮುಸಲ್ಮಾನರಿಗೆ ನೀಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು.ಇಂದಿನ ಕಾಲದಲ್ಲಿ ಜಾತ್ಯತೀತತೆಗೆ ಸಂಬಂಽಸಿದಂತೆ ಯೋಚಿಸುವಾಗ, ಅಂದಿನ ದಿನಗಳಲ್ಲಿ ಬಾಬಾಸಾಹೇಬರಿಗೆ ಈ ವಿಚಾರದ ಬಗ್ಗೆ ಇದ್ದ ಸ್ಪಷ್ಟತೆ ನಮಗೆ ಆಶ್ಚರ್ಯವವನ್ನುಂಟು ಮಾಡುತ್ತದೆ. ಸಂವಿಧಾನ ಸಮಿತಿಯಲ್ಲಿ ‘ಜಾತ್ಯತೀತತೆ’ ಕುರಿತು ಚರ್ಚೆ
ನಡೆಯುತ್ತಿದ್ದ ಸಂದರ್ಭದಲ್ಲಿ ಬಾಬಾಸಾಹೇಬರು ಹೀಗೆ ಹೇಳುತ್ತಾರೆ ‘ಜಾತ್ಯತೀತ ರಾಜ್ಯವೆಂದರೆ ಜನರ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸಬೇಕೆಂದಿಲ್ಲ ಎಂಬ ಅರ್ಥವಲ್ಲ, ಅದರ ಅರ್ಥವಿಷ್ಟೆ ‘ಯಾವುದೋ ಒಂದು ಮತವನ್ನು ಇತರರ ಮೇಲೆ ಹೇರಲು ಲೋಕಸಭೆಗೆ ಅವಕಾಶವಿಲ್ಲ, ಜಾತ್ಯತೀತತೆಯ ಅರ್ಥ ಯಾವುದೋ ಒಂದು ಮತವನ್ನು ಅಲ್ಲಗಳೆಯುವುದೆಂದಲ್ಲ.
ಸಂವಿಧಾನವನ್ನು ರಚಿಸುವಾಗ ಬಾಬಾಸಾಹೇಬರು ‘ಮತನಿರಪೇಕ್ಷತೆ’ ಎಂಬ ಪದದ ಅರ್ಥವನ್ನು ಸ್ಪಷ್ಟಪಡಿಸಬೇಕಾಯಿತು, ಬಾಬಾಸಾಹೇಬರು ‘ಮತನಿರಪೇಕ್ಷತೆ’ ಎಂದರೆ ಧರ್ಮದ ಧಿಕ್ಕಾರವಲ್ಲ, ಸರಕಾರವು ಮತದ ವಿಷಯದಲ್ಲಿ ಯಾರನ್ನೂ ತಲೆಯ ಮೇಲೆ ಕೂರಿಸಿಕೊಳ್ಳಬಾರದು ಅಥವಾ ತುಳಿಯಲು ಬಾರದು ಎಂಬುದನ್ನು ಹೇಳಿದ್ದರು. ಆದರೆ ಬಾಬಾಸಾಹೇಬರ ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷ ಮುಸಲ್ಮಾನರ ಮತಬ್ಯಾಂಕನ್ನು ಗಟ್ಟಿಗೊಳಿಸುವ ಸಲುವಾಗಿ ಹಲವು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಮುಸಲ್ಮಾನರಿಗೆ ಯೋಜನೆಗಳನ್ನು ನೀಡುತ್ತಾ ಬಂದಿದೆ.
ಕರ್ನಾಟಕದಲ್ಲಿ ಮುಸಲ್ಮಾನರಿಗೆ ಅಸಂವಿಧಾನಿಕವಾಗಿ ಶೇಕಡಾ ೪ರಷ್ಟು ಮೀಸಲಾತಿ ನೀಡಿತ್ತು ಮತ್ತು ಸರಕಾರದ ಗುತ್ತಿಗೆ ಆಧಾರಿತ ಕೆಲಸಗಳಲ್ಲಿ ಶೇಕಡಾ ೪ರಷ್ಟು ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡುವ ಪ್ರಸ್ತಾವನೆ ಕಳುಹಿಸಿದೆ.
ಸಂವಿಧಾನ ರಚನೆಯ ಸಂದರ್ಭದಲ್ಲಿ ಪಾಲ್ಗೊಂಡ್ದಿದ್ದವರಲ್ಲಿ ಹಲವರಿಗೆ ಹೆಚ್ಚಿನ ಚಿಂತೆ ಸ್ವಂತ ಭವಿಷ್ಯದ್ದು ಮತ್ತು ಸ್ವಲ್ಪ
ಮಾತ್ರ ದೇಶದ ಚಿಂತೆ ಎಂಬುದರ ಸ್ಪಷ್ಟ ಅರಿವು ಬಾಬಾಸಾಹೇಬರಿಗಿತ್ತು. ಹಾಗಾಗಿ ಬಾಬಾಸಾಹೇಬರು ಸಂವಿಧಾನ ರಚನೆಯ ಸಂದರ್ಭದಲ್ಲಿ ಬಳಸುವ ಪದಗಳ ಬಗ್ಗೆ ಬಹಳ ಎಚ್ಚರ ವಹಿಸಿದ್ದರು.
ಉದಾಹರಣೆಗೆ ಅಲ್ಪಸಂಖ್ಯಾತ’ ಎಂಬ ಪದವನ್ನು ತೆಗೆದುಕೊಂಡರೆ, ಈ ಶಬ್ದವನ್ನು ಬಳಸಿದ್ದೇ ಆದಲ್ಲಿ ಕೆಲವರು ತಮ್ಮ ಸ್ವಾರ್ಥಕ್ಕಾಗಿ
ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆಂಬುದು ಅವರಿಗೆ ತಿಳಿದಿತ್ತು. ಅದಕ್ಕಾಗಿ ಬಾಬಾಸಾಹೇಬರು ’ಅಲ್ಪಸಂಖ್ಯಾತ’ ಎಂಬ ಜಾಗದಲ್ಲಿ ‘ಸಮಾಜದ ಯಾವುದೇ ಭಾಗ’ ಎಂಬ ಪದವನ್ನು ಬಳಸಿದರು. ಬಾಬಾಸಾಹೇಬರ ಅಂದಿನ ದೂರದೃಷ್ಟಿಯನ್ನೊಮ್ಮೆ ಗಮನಿಸಿದರೆ, ಅವರು ಅಂದು ಹೇಳಿದ ಮಾತು ಇಂದು ನಿಜವಾಗಿದೆ. ಅವರು ಹೇಳಿದ ಹಾಗೆ ಸಂವಿಧಾನ ರಚನೆಯಾದ ಏಳು ದಶಕಗಳ ನಂತರವೂ
‘ಅಲ್ಪಸಂಖ್ಯಾತ’ರೆಂಬ ಪದಬಳಕೆಯಿಂದ ಕೆಲ ರಾಜಕೀಯ ಪಕ್ಷಗಳು ಮುಸಲ್ಮಾನರ ಓಲೈಕೆಗಾಗಿ ತಮ್ಮ ಸ್ವಾರ್ಥ ರಾಜಕೀಯ ಮಾಡುತ್ತಿವೆ. ದೇಶದಲ್ಲಿ ಸುಮಾರು ಶೇ.೧೨ ರಷ್ಟು ಜನಸಂಖ್ಯೆ ಹೊಂದಿರುವ ಮುಸಲ್ಮಾನರನ್ನು ಇಂದಿಗೂ ಅಲ್ಪಸಂಖ್ಯಾತರೆನ್ನುವ ಮೂಲಕ ಓಲೈಕೆಯ ರಾಜಕಾರಣ ನಡೆಯುತ್ತಿದೆ.
ಬಾಬಾಸಾಹೇಬರು ಮತಾಂತರಗೊಳ್ಳುವುದಾಗಿ ಹೇಳಿದ ನಂತರ ಅವರ ಮುಂದಿನ ಧರ್ಮದ ಬಗ್ಗೆ ಹಲವು ಊಹಾಪೋಹಗಳು ಸೃಷ್ಟಿಯಾದವು. ಹಿಂದೂ ಮಹಾಸಭಾ ನಾಯಕರು ಅವರ ಮನವೊಲಿಸುವ ಕೆಲಸ ಮಾಡಿದ್ದರು,ಅತ್ತ ಸಿಖ್ ನಾಯಕರೂ ಸಹ ತಮ್ಮ ಧರ್ಮಕ್ಕೆ ಬರುವಂತೆ ಅಹ್ವಾನ ನೀಡಿದ್ದರು. ಬಾಬಾಸಾಹೇಬರಿಗೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವ ಉದ್ದೇಶವೇ ಇರಲಿಲ್ಲ,
ಅಲ್ಲಿರುವ ಅಸಮಾನತೆಯ ಬಗ್ಗೆ ನೇರವಾಗಿ ಹೇಳಿದ್ದರು. ಅಸ್ಪೃಶ್ಯರು ಮತಾಂತರಗೊಂಡು ಈ ಮತಗಳನ್ನು ಸೇರಿದ ಮೇಲೂ,ಅವರಿಗೆ ಮೊದಲಿನ ರೀತಿಯ ವ್ಯವಹಾರವೇ ಸಿಗುತ್ತಿತ್ತು. ಮತಾಂತರಗೊಂಡು ಕ್ರೈಸ್ತರಾದರೆ ಬ್ರಾಹ್ಮಣ ಕ್ರೈಸ್ತ, ಮರಾಠ ಕ್ರೈಸ್ತ, ಲಿಂಗಾಯಿತ ಕ್ರೈಸ್ತ ಹೀಗೆ ಆ
ಸಮಾಜವು ಜಾತಿಗಳಲ್ಲಿ ಒಡೆದಿದೆ ಎಂದು ಹೇಳಿದ್ದರು. ಬಾಬಾಸಾಹೇಬರು ಮತಾಂತರಗೊಳ್ಳುವೆನೆಂದು ಹೇಳಿದ ಕೆಲವೇ ದಿನಗಳಲ್ಲಿ ಮೈಸೂರು ಸರಕಾರವು ದಸರಾ ಸಂದರ್ಭದಲ್ಲಿ ನಡೆಯುವಂತಹ ಮಹಾರಾಜರ ವಿಶೇಷ ದರ್ಬಾರಿನಲ್ಲಿ ಅಸ್ಪೃಶ್ಯರಿಗೂ ಪಾಲ್ಗೊಳ್ಳುವ ಅವಕಾಶವಿದೆಯೆಂಬ ರಾಜಾಜ್ಞೆಯನ್ನು ಘೋಷಿಸಿತು. ಮೈಸೂರು ರಾಜ್ಯದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಘಟನೆಯಾಯಿತು. ಅದೇ ಸಂದರ್ಭದಲ್ಲಿ ತಿರುವಾಂಕೂರು ಸರಕಾರವು ತನ್ನ ಅಽಕಾರದ ವ್ಯಾಪ್ತಿಯಲ್ಲಿರುವ ಸುಮಾರು ೧೬೦೦ ಮಂದಿರಗಳಲ್ಲಿ ಅಸ್ಪೃಶ್ಯರಿಗೆ ಮುಕ್ತ ಪ್ರವೇಶ ನೀಡಲು ನಿರಾಧಾರಿಸಿರುವುದಾಗಿ ಹೇಳಿತ್ತು. ಹಿಂದೂ ಧರ್ಮದಲ್ಲಿರುವ ಜಾತಿ ವ್ಯವಸ್ಥೆಗಳ ಬಗ್ಗೆ ಅಣಕಿಸುವವರು, ಮುಸ್ಲಿಂ ಧರ್ಮದಲ್ಲಿನ ಜಾತಿ ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಬೇಕು. ಮುಸಲ್ಮಾನರಲ್ಲಿ ಪಠಾಣ್, ರಿಜ್ವಿ, ಶೇಕ್, ಸಿದ್ದಿಕ್ಕಿ, ಖಾನ್, ಮಿರ್ಜಾ ಎಂಬ ಸಾಮಾನ್ಯ ವರ್ಗವಿದೆ. ಅನ್ಸಾರಿ, ಬೆಹ್ನ, ಚಿಕ್ವಾ, ದುನಿಯಾ, ದರಜಿ, ಗುನಿಯಾ, ಮನ್ಸೂರಿ, ಇರಿಸಿ ಎಂಬ ಇತರ ಹಿಂದುಳಿದ ವರ್ಗಗಳಿವೆ. ಭಟಯಾರ, ಫಕೀರ್, ಶಾ, ಲಾಲ್ ಬೇಗಿ, ರಂಕಿ, ರಂಗ್ರೇಜ, ಮೋಚಿ, ಮುಖೇರಿ,
ಬಿಷ್ಟಿ ಎಂಬ ದಲಿತ ಮುಸ್ಲಿಂ ವರ್ಗಗಳಿವೆ. ಮುಸ್ಲಿಂ ಮತದಲ್ಲೂ ಮೇಲ್ವರ್ಗ ಮತ್ತು ಕೆಳವರ್ಗವೆಂಬ ಬೇಧಭಾವವಿದೆ, ಮೇಲ್ವರ್ಗದ ಮುಸಲ್ಮಾನರು ಅಷ್ಟುಸುಲಭವಾಗಿ ಕೆಳವರ್ಗದ ಮುಸಲ್ಮಾನರೊಂದಿಗೆ ಸಂಬಂಧ ಬೆಳೆಸುವುದಿಲ್ಲ.
ಬಾಬಾಸಾಹೇಬರು ಕೊನೆಯದಾಗಿ ಬೌಧ್ಧ ಧರ್ಮಕ್ಕೆ ಮತಾಂತರವಾದರು, ಅವರು ಮತಾಂತರಗೊಂಡ ನಂತರ ಸಾವರ್ಕರ್ ಏನು ಹೇಳುತ್ತಾರೆ ಗೊತ್ತೇ? ‘ಅಂಬೇಡ್ಕರರು ಮತಾಂತರವಾಗಿದ್ದುದು ಹಿಂದೂ ಧರ್ಮವು ವಿಶ್ವಾಸ ಪೂರ್ವಕ ಕೈಗೊಂಡಿರುವ ಒಂದು ಭಾರಿ ನೆಗೆತ. ಬೌದ್ಧ
ಅಂಬೇಡ್ಕರರು ಹಿಂದೂ ಅಂಬೇಡ್ಕರರಲ್ಲದೆ ಮತ್ತೇನು? ಅಂಬೇಡ್ಕರರದ್ದು ಒಂದು ಅವೈದಿಕ, ಆದರೆ ಹಿಂದುತ್ವದ ಪರಿವಿಧಿಗೆ ಒಳಪಡುವ ಭಾರತೀಯ ಮತವನ್ನೇ ಸ್ವೀಕರಿಸಿzರೆ’ ಎಂದಿದ್ದರು.