ಜೋಡಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ (Chaithra Kundapura) ದಿಢೀರ್ ಬಾತ್ ರೂಂನಲ್ಲಿ ಕುಸಿದು ಬಿದ್ದಿದ್ದಾರೆ. ಬಾತ್ ರೂಮ್ ಏರಿಯಾದಲ್ಲಿ ಒಬ್ಬರೇ ಇದ್ದಾಗ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೂಡಲೇ ಅವರ ನೆರವಿಗಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ. ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು.
ಗೌತಮಿ ಅವರು ಆ ಕೂಡಲೇ ಚೈತ್ರಾ ಮುಖಕ್ಕೆ ತಣ್ಣೀರಿನಿಂದ ವರೆಸಿದ್ದಾರೆ. ಆದರೂ ಚೈತ್ರಾ ಅವರು ಎದ್ದೇಳಲ್ಲಿಲ್ಲ. ಹೀಗಾಗಿ ಬಿಗ್ಬಾಸ್ ಚೈತ್ರಾ ಅವರನ್ನು ಕನ್ಫೆಕ್ಷನ್ ರೂಮಿಗೆ ಕರೆ ತನ್ನಿ ಎಂದು ಹೇಳಿದ್ದರು. ಬಳಿಕ ತ್ರಿವಿಕ್ರಮ್ ಅವರೇ ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್ ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಕೂಡ ಚೈತ್ರಾ ಕಣ್ಣು ಬಿಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಚೈತ್ರಾಗೆ ಏನಾಯ್ತು ಎಂದು ಮನೆಮಂದಿ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ಟಾಸ್ಕ್ ನಡೆಯುತ್ತಲೇ ಇರುತ್ತದೆ. ಹಾಗಾಗಿ ಎನರ್ಜಿ ಲೆವೆಲ್ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಚೈತ್ರಾ ಅವರು ಹೀಗೆ ಏಕಾಏಕಿ ಪ್ರಜ್ಞೆ ತಪ್ಪಿ ಬೀಳಲು ಕಾರಣ ಆಗಿದ್ದು ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಕಳಪೆ ಮತ್ತು ಉತ್ತಮ ಯಾರು ಎಂಬುದನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ಕಾಣಿಸಿಕೊಳ್ಳಲಿಲ್ಲ.
ಜೋಡಿ ಆಟಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಮತ್ತು ಶಿಶಿರ್ ನಡುವೆ ದೊಡ್ಡ ಜಗಳ ಆಗಿತ್ತು. ಆಗ ಚೈತ್ರಾ ಮೇಲೆ ಶಿಶಿರ್ ಅವರು ಸಿಕ್ಕಾಪಟ್ಟೆ ಕೂಗಾಡಿದ್ದರು. ಇವರನ್ನ ನಂಬ್ತೀವಲ್ಲ ನಾವು ನಮ್ಮ ಎಕ್ಕಡ ತಗೊಂಡು ನಾವೇ ಹೊಡೆದುಕೊಳ್ಬೇಕು. ಥೂ.. ಎಂದು ಶಿಶಿರ್ ತಮ್ಮ ಅಸಮಾಧಾನವನ್ನ ಹೊರಹಾಕಿದರು. 12 ವರ್ಷಗಳಿಂದ ನಟಿಸುತ್ತಾ ಬಂದಿರೋ ನಾವಲ್ಲ ಕಲಾವಿದರು. ಇಲ್ಲಿ ಇದ್ದಾರೆ ನೋಡಿ ನಿಜವಾದ ಆ್ಯಕ್ಟರ್ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ನಡೆದ ಬಳಿಕ ಚೈತ್ರಾ ಕುಂದಾಪುರ ಮನೆಯೊಳಗೆ ಆಕ್ಟಿವ್ ಆಗಿ ಇರಲಿಲ್ಲ. ಫುಲ್ ಡಲ್ ಆಗಿದ್ದರು. ಟಾಸ್ಕ್ನಲ್ಲಿ ಶಿಶಿರ್ ಜೊತೆಯಾಗಿ ಆಡಿದರೂ ಮೊದಲಿನಂತೆ ಇನ್ವಾಲ್ಮೆಂಟ್ ಕಾಣಿಸಲಿಲ್ಲ. ಕಾಲಿನಲ್ಲಿ ಬಾಕ್ಸ್ ಹಿಡಿದುಕೊಳ್ಳುವ ಟಾಸ್ಕ್ನಲ್ಲಿ ಈ ಜೋಡಿಯೇ ಮೊದಲು ಔಟ್ ಆಗಿ ಹೊರಬಂತು. ಈ ಎಲ್ಲ ವಿಚಾರದಿಂದ ತಲೆ ಸುತ್ತು ಬಂದಿದೆಯಾ ಗೊತ್ತಿಲ್ಲ.