Saturday, 21st September 2024

ಡಿ.1 ರಂದು ಶಿವಸೇನೆಗೆ ನಟಿ ಊರ್ಮಿಳಾ ಸೇರ್ಪಡೆ

ಮುಂಬಯಿ: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಡಿ.1 ರಂದು ಶಿವಸೇನೆಗೆ ಸೇರಲಿದ್ದಾರೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಆಪ್ತ ಹರ್ಷಲ್ ಪ್ರಧಾನ್ ತಿಳಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ಮುಂಬಯಿ ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಊರ್ಮಿಳಾ ಸೋತಿದ್ದರು. ನಂತರ ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದ ಬೇಸತ್ತಿದ್ದ ಊರ್ಮಿಳಾ ಪಕ್ಷ ತೊರೆದಿದ್ದರು.

ಊರ್ಮಿಳಾ ಹೆಸರನ್ನು ರಾಜ್ಯಪಾಲರ ಕೋಟಾದಿಂದ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಲು ಶಿವಸೇನೆ ಗವರ್ನರ್ ಬಿ ಎಸ್ ಕೊಶ್ಯರಿಗೆ ಕಳುಹಿಸಲಾಗಿದೆ.