ಲಖನೌ: ಭಾರತಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸಿಗನೂ ನೋಡಲೇಬೇಕಾದ ಸ್ಥಳ ತಾಜ್ ಮಹಲ್ (Taj Mahal) ಅಥವಾ ಕೆಂಪು ಕೋಟೆ (Red Fort) ಅಲ್ಲ ಎಂದು ಟ್ರಾವೆಲ್ ವ್ಲಾಗ್‌ಗಳಿಗೆ ಹೆಸರುವಾಸಿಯಾದ ಯೂಟ್ಯೂಬರ್ ಸೀನ್ ಹ್ಯಾಮಂಡ್ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.
ʼʼಎಲ್ಲರೂ ಆಗ್ರಾದಲ್ಲಿರುವ ತಾಜ್ ಮಹಲ್ ಬಗ್ಗೆ ಮಾತನಾಡುತ್ತಾರೆ. ಆದರೆ ಈ ಸ್ಥಳವು ಅದರ ಪಕ್ಕದಲ್ಲೇ ಇದೆ. ಇಲ್ಲಿಗೆ ಭೇಟಿ ನೀಡುವುದು ದುಬಾರಿಯಲ್ಲ. ಆದರೆ ಇದು ತಾಜ್ ಮಹಲ್ ಗಿಂತ ಸರಿಸುಮಾರು ನಾಲ್ಕು ಪಟ್ಟು ದೊಡ್ಡದಾಗಿದೆʼʼ ಎಂದು ಸೀನ್ ಹ್ಯಾಮಂಡ್ ವಿಡಿಯೊದಲ್ಲಿ ಹೇಳಿದ್ದಾರೆ.
ʼʼಆಗ್ರಾದಲ್ಲಿ ಭೇಟಿ ನೀಡಲೇಬೇಕಾದ ತಾಣವಿದು. ಇದು ದೆಹಲಿಯ ಕೆಂಪುಕೋಟೆಯಲ್ಲ. ಬದಲಿಗೆ ಆಗ್ರಾದ ಕೋಟೆʼʼ ಎಂದು ಅವರು ತಿಳಿಸಿದ್ದಾರೆ. ಸೀನ್ ಹ್ಯಾಮಂಡ್ ಪ್ರಸ್ತುತ ಭಾರತದಲ್ಲಿದ್ದು, ದೆಹಲಿಯ ಬೀದಿಗಳಲ್ಲಿ ಸುತ್ತಾಡುತ್ತಿದ್ದಾರೆ. ಭಾರತ ಪ್ರವಾಸದ ವಿಡಿಯೋವೊಂದರಲ್ಲಿ ಅವರು ದೆಹಲಿ ಅಥವಾ ಆಗ್ರಾಕ್ಕೆ ಪ್ರವಾಸ ಯೋಜನೆ ಮಾಡುತ್ತಿದ್ದರೆ ಜನರು ಖಂಡಿತವಾಗಿಯೂ ಪರಿಶೀಲಿಸಬೇಕಾದ ಒಂದು ಸ್ಥಳವಿದೆ ಎಂಬುದಾಗಿ ಅವರು ಆಗ್ರಾ ಕೋಟೆಯ ಬಗ್ಗೆ ಹೇಳಿದ್ದಾರೆ.
ಆಗ್ರಾ ಕೋಟೆಯಿಂದ ಪ್ರಭಾವಿತರಾಗಿರುವ ಸೀನ್, ಆಗ್ರಾ ಕೋಟೆಯ ಬಗ್ಗೆ ಸಂಗ್ರಹಿಸಿದ ಕೆಲವು ವಿವರಗಳನ್ನು ವಿಡಿಯೊದಲ್ಲಿ ವಿವರಿಸಿದ್ದಾರೆ. ʼʼಈ ಕೋಟೆಯು ಸಣ್ಣ ಗುಪ್ತ ಮಾರ್ಗಗಳನ್ನು ಹೊಂದಿದೆ. ಇದು 500 ವರ್ಷಗಳ ಹಿಂದೆ ನಿರ್ಮಿಸಲಾಗಿದ್ದರೂ ಅತ್ಯುತ್ತಮ ಸ್ಥಿತಿಯಲ್ಲಿದೆʼʼ ಎಂದು ಅವರು ಹೇಳಿದ್ದಾರೆ.
ಈ ಕೋಟೆಯಿಂದ ತಾಜ್ ಮಹಲ್ ಅನ್ನು ನೋಡಬಹುದು ಎಂಡಿರುವ ಅವರು ತಮ್ಮ ಕೆಮರಾ ಲೆನ್ಸ್ ಮೂಲಕ ಜನರಿಗೆ ಅದನ್ನು ತೋರಿಸಿದ್ದಾರೆ. ಆಗ್ರಾ ಮತ್ತು ಅದರ ಪ್ರವಾಸಿ ಆಕರ್ಷಣೆಗಳ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವ ಅವರು, ʼʼತಾಜ್ ಮಹಲ್ ಆಗ್ರಾದಲ್ಲಿದೆ. ತಾಜ್ ಅನ್ನು ನೋಡಲು ಹಲವಾರು ಪ್ರವಾಸಿಗರು ಬಂದು ಹೋಗುತ್ತಾರೆ. ಆಗ್ರಾದಲ್ಲಿ ಅನ್ವೇಷಿಸಲು ಯೋಗ್ಯವಾದ ಹಲವಾರು ಪ್ರವಾಸಿ ತಾಣಗಳಿವೆ. ಇದರಲ್ಲಿ ಆಗ್ರಾ ಕೋಟೆಯು ಒಂದುʼʼ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೊ ಸಾಕಷ್ಟು ವೈರಲ್ ಆಗಿದ್ದು, ಸಾವಿರಾರು ಮೆಚ್ಚುಗೆಗಳು ಬಂದಿವೆ. ಆಗ್ರಾ ಸುಂದರವಾಗಿದ್ದು, ಭೇಟಿ ನೀಡಲು ಯೋಗ್ಯವಾಗಿದೆ ಎಂಬ ಅವರ ಅಭಿಪ್ರಾಯವನ್ನು ಹಲವಾರು ಜನರು ಒಪ್ಪಿಕೊಂಡಿದ್ದಾರೆ.
ಕಾಮೆಂಟ್‌ನಲ್ಲಿ ಒಬ್ಬರು ಆಗ್ರಾ ಕೋಟೆ ಅದ್ಭುತವಾಗಿದೆ ಎಂದು ಒಬ್ಬರು ಬರೆದಿದ್ದರೆ ಕೆಂಪು ಕೋಟೆ ಅದ್ಭುತವಾಗಿದೆ. ನಾನು 2017ರಲ್ಲಿ ಅಲ್ಲಿಗೆ ಹೋಗಿದ್ದೆ. ತಾಜ್ ಮಹಲ್ ಗೆ ಶೀಘ್ರದಲ್ಲೇ ಮತ್ತೊಮ್ಮೆ ಬರಲು ಬಯಸುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.
ಇನ್ನೊಬರು ತಾಜ್ ಮಹಲ್ ಅನ್ನು ಅತಿಯಾಗಿ ವರ್ಣಿಸಲಾಗಿದೆ. ದಯವಿಟ್ಟು ಭಾರತದಲ್ಲಿರುವ ಮಾನವ ನಿರ್ಮಿತ ಶ್ರೇಷ್ಠ ದೃಶ್ಯಗಳು ಹಲವಾರು ಇವೆ. ಇದರಲ್ಲಿ ಎಲ್ಲೋರಾ ಗುಹೆ, ಮಹಾರಾಷ್ಟ್ರದ ಕೈಲಾಸ ದೇವಾಲಯ ಕೂಡ ಸೇರಿವೆ ಎಂದು ಹೇಳಿದ್ದಾರೆ. ಮತ್ತೊಬ್ಬರು ತಂಜಾವೂರು ದೊಡ್ಡ ದೇವಸ್ಥಾನಕ್ಕೂ ಒಮ್ಮೆ ಭೇಟಿ ಕೊಡಿ ಎಂದು ತಿಳಿಸಿದ್ದಾರೆ.