Saturday, 16th November 2024

Hindu Janajagruti Samiti: ಹಿಂದೂ ಜನಜಾಗೃತಿ ಸಮಿತಿಯಿಂದ ‘ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ’ ಅಭಿಯಾನ

Hindu Janajagruti Samiti

ಬೆಂಗಳೂರು: ಕಾರ್ತಿಕ ಹುಣ್ಣಿಮೆಯ ಅಂಗವಾಗಿ ದೇವಸ್ಥಾನಗಳಲ್ಲಿ ಮತ್ತು ಮನೆಗಳಲ್ಲಿ ದೀಪವನ್ನು ಬೆಳಗಿಸಿ ಹಿಂದೂಗಳು ಸಂಭ್ರಮದಿಂದ ದೀಪೋತ್ಸವ ಆಚರಿಸಿದರು. ದೇಶಾದ್ಯಂತ ದೇವಸ್ಥಾನಗಳಲ್ಲಿ ಸಾಲುದೀಪಗಳನ್ನು ಬೆಳಗಿಸಲಾಯಿತು. ಈ ನಡುವೆ, ಹಿಂದೂ ಜನಜಾಗೃತಿ ಸಮಿತಿಯಿಂದ (Hindu Janajagruti Samiti) ಈ ವರ್ಷ ದೀಪೋತ್ಸವವನ್ನು ವಿಶೇಷವಾಗಿ ಹಿಂದೂ ರಾಷ್ಟ್ರದ ಸಂಕಲ್ಪದ ಉದ್ದೇಶದಿಂದ ‘ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ’ ಈ ಉಪಕ್ರಮದ ಮೂಲಕ ದೇಶಾದ್ಯಂತ ಜನಜಾಗೃತಿ ಮೂಡಿಸಲಾಯಿತು.

ಬೆಂಗಳೂರು ನಗರದ ಸುಂಕದಕಟ್ಟೆಯ ಸೊಲ್ಲಾಪುರದಮ್ಮ ದೇವಸ್ಥಾನ, ನಂದಿನಿ ಲೇಔಟ್‌ನ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ, ಯಲಹಂಕದ ವೀರಾಂಜನೇಯ ದೇವಸ್ಥಾನ, ಎಲೆಕ್ಟ್ರಾನಿಕ್ ಸಿಟಿ ಯಾರಂಡನಹಳ್ಳಿ ಸಾಯಿಬಾಬ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನದಲ್ಲಿ ಅಭಿಯಾನ ನಡೆಯಿತು. ಈ ವೇಳೆ ಹಲವಾರು ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ | Good news: ಟಿವಿ ರಿಪೇರಿ ತರಬೇತಿಗಾಗಿ ಅರ್ಜಿ ಆಹ್ವಾನ

ಕಾರ್ತಿಕ ಹುಣ್ಣಿಮೆಯ ದಿನದಂದು ಶ್ರೀ ಶಂಕರನು ತ್ರಿಪುರಾಸುರನನ್ನು ನಾಶ ಮಾಡಿದನು, ಆದಕಾರಣ ಇದಕ್ಕೆ ತ್ರಿಪುರಾರಿ ಹುಣ್ಣಿಮೆ ಎಂದೂ ಕರೆಯುತ್ತಾರೆ. ಈ ಅಸುರೀ ಶಕ್ತಿಯ ವಿರುದ್ಧ ಒಳ್ಳೆಯ ಶಕ್ತಿಯ ವಿಜಯದ ಪ್ರತೀಕವಾಗಿ ಭಾರತದ ಕೆಲವು ದೇವಸ್ಥಾನಗಳಲ್ಲಿ ಆಚರಿಸುತ್ತಾರೆ. ಪ್ರಸ್ತುತ ಸಮಾಜದಲ್ಲಿ ವ್ಯಾಪಿಸಿರುವ ದುಷ್ಟತನವನ್ನು ನಾಶಗೊಳಿಸಿ ಸಮಾಜ ಕಲ್ಯಾಣಕಾರಿ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿ, ಈ ಉದ್ದೇಶದಿಂದ ‘ಒಂದು ದೀಪ ಹಿಂದೂ ರಾಷ್ಟ್ರಕ್ಕಾಗಿ’ ಈ ಉಪಕ್ರಮದಿಂದ ಸಮಾಜದಲ್ಲಿ ಜನಜಾಗೃತಿ ಮಾಡಿಸಲಾಯಿತು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.