ಹೊಸದಿಲ್ಲಿ: ಕೊರೊನಾದ ನಂತರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಹೈಬ್ರಿಡ್ ಸೆಟ್ಟಿಂಗ್‍ಗಳನ್ನು ನೀಡುತ್ತಿವೆ. ಅದರಂತೆ ಉದ್ಯೋಗಿಗಳಿಗೆ ವಿನಂತಿಸಿದಾಗಲೆಲ್ಲ ಅವರಿಗೆ ಮನೆಯಲ್ಲೇ ಇದ್ದು ಕೆಲಸ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಹಲವರು ಡಬ್ಲ್ಯುಎಫ್‍ಎಚ್ (WFH) ಮಾದರಿಗಳ ಬಗ್ಗೆ ಕಾಮೆಂಟ್ ಮಾಡುವ ಹಲವು ರೀಲ್‍ಗಳು ಮತ್ತು ಮೀಮ್‍ಗಳನ್ನು ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಯಬಿಡುತ್ತಿದ್ದಾರೆ. ಅದರಂತೆ ಇತ್ತೀಚಿನ ಪುಟ್ಟ ಹುಡುಗಿಯೊಬ್ಬಳು ಮ್ಯಾನೇಜರ್ ಎಂದು ನಟಿಸಿ ಉದ್ಯೋಗಿಯ ಕರೆಗೆ ಪ್ರತಿಕ್ರಿಯೆ ನೀಡುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ‘ಮ್ಯಾನೇಜರ್’ ಆರ್ಯ ಎಂಬ ಪುಟ್ಟ ಹುಡುಗಿ ಲ್ಯಾಪ್‍ಟಾಪ್ ಮುಂದೆ ಕುಳಿತುಕೊಂಡು ಉದ್ಯೋಗಿಯಿಂದ ಬಂದ ಡಬ್ಲ್ಯುಎಫ್‍ಎಚ್ ವಿನಂತಿಯನ್ನು ನೋಡಿದ್ದಾಳೆ. ಕಚೇರಿ ಸ್ಥಳವು ತಮ್ಮ ನಿವಾಸದಿಂದ ತುಂಬಾ ದೂರದಲ್ಲಿರುವುದರಿಂದ ಪ್ರಯಾಣಿಸಲು ಕಷ್ಟವಾಗುತ್ತಿದೆ ಎಂದು ಉದ್ಯೋಗಿ ಹೇಳಿದ್ದಾರೆ. ಅದಕ್ಕೆ ಅವಳು ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಿ ಕೊನೆಗೆ ಕಚೇರಿಯನ್ನು ತಲುಪಲು ಪರ್ಯಾಯ ಸಾರಿಗೆ ಆಯ್ಕೆಗಳನ್ನು ನೀಡಿದ್ದಾಳೆ. ಆದರೆ ಎಲ್ಲವೂ ತುಂಬಾ ತಮಾಷೆಯಾಗಿ ಕಂಡುಬಂದಿದೆ.
ವಿಡಿಯೊದಲ್ಲಿ ʼʼಉದ್ಯೋಗಿಯೊಬ್ಬರು ಹಾಯ್ ಮ್ಯಾನೇಜರ್, ನಾಳೆಯಿಂದ ನಾನು ಮನೆಯಿಂದ ಕೆಲಸ ಮಾಡಬಹುದೇ? ಕಚೇರಿ ನನ್ನ ಮನೆಯಿಂದ ತುಂಬಾ ದೂರದಲ್ಲಿದೆ ” ಎಂದು ಹೇಳಿದ್ದಾರೆ. ಇದನ್ನು ಕೇಳಿದ ನಂತರ, ಮ್ಯಾನೇಜರ್‌ನಂತೆ ನಟಿಸಿದ ಪುಟ್ಟ ಹುಡುಗಿ, ಮನೆಯಿಂದ ಕೆಲಸಕ್ಕೆ ಲಾಗಿನ್ ಆಗಲು ಉದ್ಯೋಗಿಯ ವಿನಂತಿಯನ್ನು ನೇರವಾಗಿ ನಿರಾಕರಿಸದೇ ಬದಲಾಗಿ ಮನೆ ತುಂಬಾ ದೂರದಲ್ಲಿದ್ದರೂ ಕಾರು ಅಥವಾ ಬೈಕ್ ತೆಗೆದುಕೊಳ್ಳಲು ಉದ್ಯೋಗಿಗೆ ಸಲಹೆ ನೀಡಿದ್ದಾಳೆ. ಉದ್ಯೋಗಿಯು ತನ್ನ ಬಳಿ ಕಾರು ಇಲ್ಲ ಮತ್ತು ಬೈಕು ಸವಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ಹೀಗಾಗಿ ಮನೆಯಿಂದಲೇ ಕೆಲಸ ಮಾಡಬಹುದೇ ಎಂದು ಮತ್ತೊಮ್ಮೆ ವಿನಂತಿಸಿದ್ದಾರೆ. ಆಗ ಅವಳು ಅವರ ಬಳಿ “ನಿಮ್ಮ ಬಳಿ ಕನಿಷ್ಠ ಸ್ಕೇಟಿಂಗ್ ಬೋರ್ಡ್ ಇದೆಯೇ?” ಎಂದು ಕೇಳಿದ್ದಾಳೆ. ಇದಕ್ಕೆ ಅವರು “ನಾನು ಸ್ಕೇಟಿಂಗ್‌ಗೆ ಹೆದರುತ್ತೇನೆ” ಎಂದು ಉತ್ತರಿಸಿದ್ದಾರೆ.
ಇಲ್ಲಿನ ಕೆಲವು ಸನ್ನಿವೇಶಗಳು ಜನರನ್ನು ನಗುವಂತೆ ಮಾಡಿದೆ. ಆದರೆ ನಂತರ, ಹುಡುಗಿ ಅವರಿಗೆ ನೀಡಿದ ಒಂದು ಸಲಹೆ ನೆಟ್ಟಿಗರನ್ನು ಮೂಕರನ್ನಾಗಿ ಮಾಡಿದೆ ಮತ್ತು ಜೋರಾಗಿ ನಗುವಂತೆ ಮಾಡಿತು. ಅದೇನೆಂದರೆ ಪುಟ್ಟ ಮ್ಯಾನೇಜರ್ ಉದ್ಯೋಗಿಗೆ, “ಒಂದು ಕೆಲಸ ಮಾಡಿ, ಸಿದ್ಧರಾಗಿ ನಿಮ್ಮ ಮನೆಯ ಮೇಲೆ ಕುಳಿತುಕೊಳ್ಳಿ. ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ”, ಎಂದು ಅವಳು ಇಂಗ್ಲಿಷ್‍ನಲ್ಲಿ ಪಂಚ್ ಡೈಲಾಗ್ ಹೇಳಿದ್ದಾಳೆ. ಆಗ ಉದ್ಯೋಗಿ ಬೇಸರದಿಂದ “ಪ್ರತಿದಿನ ಸರ್…” ಎಂದು ಕೇಳಿದ್ದಾರೆ.
ಇದನ್ನೂ ಓದಿ: ಬೈಕ್ ಮೇಲೆ ಒಂದೇ ಕುಟುಂಬದ 8 ಮಂದಿಯ ಜಾಲಿರೈಡ್! ಟ್ರಾಫಿಕ್ ಪೊಲೀಸ್ ಕೈಗೆ ಸಿಕ್ಕಿಬಿದ್ದಾಗ ಆಗಿದ್ದೇನು?
ಈ ವಿಡಿಯೊ ವೈರಲ್ ಆಗಿದ್ದು, ಇನ್‌ಸ್ಟಾಗ್ರಾಂ 2 ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ. ಈ ನವೆಂಬರ್ ಆರಂಭದಲ್ಲಿ ಅಪ್‌ಲೋಡ್ ಮಾಡಲಾದ ಇದು ಈಗಾಗಲೇ ಶೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ 60 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.