Saturday, 16th November 2024

Shubman Gill injury: ಗಿಲ್‌ ಹೆಬ್ಬೆರಳಿಗೆ ಗಾಯ; ಮೊದಲ ಪಂದ್ಯಕ್ಕೆ ಅನುಮಾನ

ಪರ್ತ್‌: ನವೆಂಬರ್‌ 22 ರಿಂದ ಪರ್ತ್‌ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತವೊಂದು ಎದುರಾಗಿದೆ. ಅಭ್ಯಾಸದ ವೇಳೆ ಸ್ಟಾರ್‌ ಬ್ಯಾಟರ್‌ ಕೆ.ಎಲ್‌ ರಾಹುಲ್‌ ಗಾಯಗೊಂಡಿರುವ ಬೆನ್ನಲ್ಲೇ ಇದೀಗ ಶುಭಮನ್‌ ಗಿಲ್‌(Shubman Gill injury) ಕೂಡ ಬೆರಳಿನ ಗಾಯಕ್ಕೆ(Gill suffers thumb injury) ತುತ್ತಾಗಿ ಮೊದಲ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ರಾಹುಲ್‌ ಕೂಡ ಆರಂಭಿಕ ಪಂದ್ಯ ಆಡುವುದು ಅನುಮಾನ ಎನ್ನಲಾಗಿದೆ.

ರಾಹುಲ್‌ ಶುಕ್ರವಾರ ಭಾರತ ʼಎʼ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್‌ ನಡೆಸುತ್ತಿದ್ದ ವೇಳೆ ಪ್ರಸಿದ್ಧ್‌ ಕೃಷ್ಣ ಅವರ ಬೌನ್ಸರ್‌ ಎಸೆತದಲ್ಲಿ ಮೊಣಕೈಗೆ ಗಾಯ ಮಾಡಿಕೊಂಡಿದ್ದರು. ಶನಿವಾರ ಗಿಲ್‌ ಕೂಡ ಅಭ್ಯಾಸದ ವೇಳೆ ಬೆರಳಿಗೆ ಗಾಯ ಮಾಡಿಕೊಂಡಿದ್ದು ಅವರನ್ನು ಸ್ಕ್ಯಾನಿಂಗ್‌ಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಪಂದ್ಯಕ್ಕೂ ಮುನ್ನವೇ ಸ್ಟಾರ್‌ ಆಟಗಾರರರು ಗಾಯಕ್ಕೀಡಾಗುತ್ತಿರುವುದು ತಂಡಕ್ಕೆ ಆತಂಕ ಸೃಷ್ಟಿಸಿದೆ. ಕೊಹ್ಲಿ ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅಭ್ಯಾಸ ಪಂದ್ಯದಲ್ಲಿ ಕಣಕ್ಕಿಳಿದಿದ್ದರು.

ವರದಿಗಳ ಪ್ರಕಾರ, WACA ನಲ್ಲಿ ಭಾರತದ ಎರಡನೇ ದಿನದ ಅಭ್ಯಾಸ ಪಂದ್ಯದ ವೇಳೆ ಸ್ಲಿಪ್‌ನಲ್ಲಿ ಕ್ಯಾಚ್ ಹಿಡಿಯುವಾಗ ಚೆಂಡು ಹೆಬ್ಬೆರಳಿಗೆ ಬಡಿದು ಗಾಯ ಮಾಡಿಕೊಂಡರು ಎಂದು ತಿಳಿದುಬಂದಿದೆ. ಎರಡನೇ ಮಗುವಿನ ನಿರೀಕ್ಷೆಯ ಕಾರಣದಿಂದ ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದ್ದ ರೋಹಿತ್‌ ಶರ್ಮ ಇದೀಗ 2ನೇ ಮಗುವಿನ ಜನನವಾದ ಕಾರಣ ಆಸೀಸ್‌ಗೆ ಪ್ರವಾಸ ಕೈಗೊಂಡು ಮೊದಲ ಪಂದ್ಯ ಆಡಲಿದ್ದಾರೆ ಎನ್ನಲಾಗಿದೆ. ರೋಹಿತ್‌ ಆಗಮಿಸಿದರೆ ತಂಡ ಬಲಿಷ್ಠಗೊಳ್ಳಲಿದೆ.

ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಜಸ್‌ಪ್ರೀತ್‌ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್‌, ಅಭಿಮನ್ಯು ಈಶ್ವರನ್‌, ಶುಭ್‌ಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಸರ್ಫರಾಜ್‌ ಖಾನ್‌, ಧೃವ್‌ ಜುರೆಲ್‌, ಆರ್.ಅಶ್ವಿನ್‌, ರವೀಂದ್ರ ಜಡೇಜಾ, ಮೊಹಮ್ಮದ್‌ ಸಿರಾಜ್‌, ಆಕಾಶ್‌ದೀಪ್‌, ಪ್ರಸಿದ್ಧ್‌ ಕೃಷ್ಣ, ಹರ್ಷಿತ್‌ ರಾಣಾ, ನಿತೀಶ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌.