ಜೋಹನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕನೇ ಟಿ20ಐ ಪಂದ್ಯದಲ್ಲಿ(IND vs SA) ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ (IND vs SA) ಸೆಂಚುರಿ ಬಾರಿಸಿದ ಬಳಿಕ ಕೇರಳ ಸಂಸದ ಶಶಿ ತರೂರ್ ಅವರ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಶಿ ತರೂರ್ ಅವರು 15 ವರ್ಷಗಳ ಹಿಂದೆ ಸಂಜು ಸ್ಯಾಮ್ಸನ್ ಅವರ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದರು.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಐ ಸರಣಿಯಲ್ಲಿ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಶುಭಮನ್ ಗಿಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ. ಎರಡು ಮತ್ತು ಮೂರನೇ ಪಂದ್ಯಗಳಲ್ಲಿ ಡಕ್ಔಟ್ ಆಗಿದ್ದ ಸಂಜು, ಮೊದಲನೇ ಹಾಗೂ ಅಂತಿಮ ಪಂದ್ಯಗಳಲ್ಲಿ ತಲಾ ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಭಾರತ ತಂಡ ಟಿ20ಐ ಸರಣಿಯ ಗೆಲುವಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಅಂದ ಹಾಗೆ ಜೋಹನ್ಸ್ಬರ್ಗ್ನಲ್ಲಿ ಶುಕ್ರವಾರ ನಡೆದಿದ್ದ ನಾಲ್ಕನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಜೇಯ 107 ರನ್ಗಳನ್ನು ಗಳಿಸಿದ್ದರು ಹಾಗೂ ತಿಲಕ್ ವರ್ಮಾ ಅವರ ಜೊತೆ 210 ರನ್ಗಳ ಜೊತೆಯಾಟವನ್ನು ಆಡಿದ್ದರು. ತಿಲಕ್ ವರ್ಮಾ ಕೂಡ ತಮ್ಮ ಸ್ಪೋಟಕ ಬ್ಯಾಟಿಂಗ್ ನಡೆಸಿ ಅಜೇಯ 120 ರನ್ಗಳನ್ನು ಕಲೆ ಹಾಕಿದ್ದರು. ಆ ಮೂಲಕ ಭಾರತ ತಂಡ ತನ್ನ ಪಾಲಿನ 20 ಓವರ್ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 283 ರನ್ಗಳನ್ನು ಕಲೆ ಹಾಕಿತ್ತು. ಅಂತಿಮವಾಗಿ ಭಾರತ ತಂಡ 135 ರನ್ಗಳ ಗೆಲುವು ಪಡೆದಿತ್ತು ಹಾಗೂ ಚುಟುಕು ಸರಣಿಯಲ್ಲಿ 3-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು.
IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್-ತಿಲಕ್ ವರ್ಮಾ!
ಕಾಂಗ್ರೆಸ್ನ ಕೇರಳದ ಸಂಸದ ಶಶಿ ತರೂರ್ ಅವರು ಸಂಜು ಸ್ಯಾಮ್ಸನ್ಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅಂಡರ್-19 ಭಾರತ ತಂಡದಲ್ಲಿ ಆಡಿದ್ದ ಸಂದರ್ಭದಲ್ಲಿ ಶಶಿ ತರೂರ್ ಅವರು, ಸಂಜು ಸ್ಯಾಮ್ಸನ್ ಬಗ್ಗೆ ಒಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ 15 ವರ್ಷಗಳ ಬಳಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಂಜು ಸ್ಯಾಮ್ಸನ್ ಬಗ್ಗೆ ಶಶಿ ತರೂರ್ ಮಾಡಿದ್ದ ಟ್ವೀಟ್ ಇಲ್ಲಿದೆ
Always wonderful to be able to say “i told you so” fifteen years later! @IamSanjuSamson @GautamGambhir @bcci @rajasthanroyals https://t.co/Do6f481aK1
— Shashi Tharoor (@ShashiTharoor) November 16, 2024
“ಕೇರಳ ರಣಜಿ ಟ್ರೋಫಿ ತಂಡದಲ್ಲಿ ಇಬ್ಬರು ಟಿವಿಎಂ ಹುಡುಗರನ್ನು ನೋಡಿ, ರೋಹನ್ ಪ್ರೇಮ್ ಹಾಗೂ 15ರ ಪ್ರಾಯದ ಸಂಜು ಸ್ಯಾಮ್ಸನ್ (ಮುಂದಿನ ಎಂಎಸ್ ಧೋನಿ),” ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು.
ಇದೀಗ ದಕ್ಷಿಣ ಆಫ್ರಿಕಾ ವಿರುದ್ದದ ಟಿ20ಐ ಸರಣಿಯಲ್ಲಿ ಎರಡು ಶತಕಗಳನ್ನು ಸಿಡಿಸಿದ ಬಳಕಿಕ ಶಶಿ ತರೂರ್ ಸಂಜು ಸ್ಯಾಮ್ಸನ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ ಹಾಗೂ ಮತ್ತೊಂದು ಟ್ವೀಟ್ ಮಾಡಿ, ಕಳೆದ 15 ವರ್ಷಗಳ ಹಿಂದೆ ಮಾಡಿದ್ದ ತನ್ನ ಭವಿಷ್ಯ ನಿಜವಾಗುವತ್ತಾ ಸಾಗುತ್ತಿದೆ ಎಂದು ಹೇಳಿದ್ದಾರೆ.
“15 ವರ್ಷಗಳ ಹಿಂದೆ ನಾನು ಹೇಳಿದ್ದ ಮಾತು ಈಗ ನೆನಪಾಗುತ್ತಿದೆ. ನಾನು ಈ ರೀತಿ ಹೇಳಿರುವುದು ನಿಜಕ್ಕೂ ಅದ್ಭುತವಾಗಿದೆ,” ಎಂದು ಶಶಿ ತರೂರ್ ತಿಳಿಸಿದ್ದಾರೆ.
IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಟಾಪ್ 5 ದಾಖಲೆ ಮುರಿದ ಸಂಜು ಸ್ಯಾಮ್ಸನ್-ತಿಲಕ್ ವರ್ಮಾ!
2024ರಲ್ಲಿ ಸಂಜು ಸ್ಯಾಮ್ಸನ್ ಅಂಕಿಅಂಶಗಳು
ಸಂಜು ಸ್ಯಾಮ್ಸನ್ ಅವರು ಈ ಹಿಂದೆ ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಅವಕಾಶ ಪಡೆಯಲು ಸಾಕಷ್ಟು ಹೆಣಗಾಡುತ್ತಿದ್ದರು. ಆದರೆ, ಬಾಂಗ್ಲಾದೇಶ ವಿರುದ್ಧದ ಟಿ20ಐ ಸರಣಿಯ ಮೂರನೇ ಪಂದ್ಯದಲ್ಲಿ ಶತಕ ಸಿಡಿಸಿ ಎಲ್ಲರ ಗಮನ ಸೆಳೆದಿದ್ದರು. ಇದೇ ಲಯವನ್ನು ದಕ್ಷಿಣ ಆಫ್ರಿಕಾ ವಿರುದ್ದದ ಟಿ20ಐ ಸರಣಿಯಲ್ಲಿಯೂ ಮುಂದುವರಿಸಿ ಎರಡು ಶತಕಗಳನ್ನು ಪೂರ್ಣಗೊಳಿಸಿದ್ದಾರೆ. ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅವರು ಮೂರು ಟಿ20ಐ ಶತಕಗಳನ್ನು ಸಿಡಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬರೆದಿದ್ದಾರೆ.