Saturday, 16th November 2024

Sheer Dupatta Fashion: ಎಥ್ನಿಕ್ ವೇರ್‌ಗಳಿಗೆ ಜತೆಯಾದ ಡಿಸೈನರ್ ಶೀರ್ ದುಪಟ್ಟಾ!

Sheer Dupatta Fashion

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಡಿಸೈನರ್ ಎಥ್ನಿಕ್‌ವೇರ್‌ಗಳಿಗೆ ಇದೀಗ ಡಿಸೈನರ್ ಶೀರ್ ದುಪಟ್ಟಾಗಳು (Sheer Dupatta Fashion) ಸಾಥ್ ನೀಡುತ್ತಿವೆ. ಧರಿಸುವ ಉಡುಗೆಯ ರಂಗನ್ನು ಹೈಲೈಟ್ ಮಾಡುತ್ತಿವೆ. ಹೌದು, ನೋಡಿದರೆ ಧರಿಸಬೇಕೆನಿಸುವ ದುಪಟ್ಟಾಗಳಿವು. ತೆರೆಯಂತೆ ಮರೆಮಾಚಿದರೂ ಮಿನುಗುವ ವಿನ್ಯಾಸ, ಡಾರ್ಕ್ ಹಾಗೂ ಲೈಟ್ ಕಲರ್ಫುಲ್ ಶೇಡ್ಸ್‌ನಲ್ಲೂ ಎದ್ದು ಕಾಣುವ ಡಿಸೈನ್‌ಗಳು. ಇವೇ ಪಾರದರ್ಶಕ ಡಿಸೈನರ್ ಶೀರ್ ದುಪಟ್ಟಾಗಳು ಎನ್ನುತ್ತಾರೆ ಡಿಸೈನರ್ ರಾಶಿ ಹಾಗೂ ಛಾಯಾ.

ಚಿತ್ರಗಳು: ಪಿಕ್ಸೆಲ್

ಶೀರ್ ದುಪಟ್ಟಾ ಟ್ರೆಂಡಿಯಾದ ಕಥೆ

ಈ ಹಿಂದೆ ಕೇವಲ ಗ್ರ್ಯಾಂಡ್ ಹಾಗೂ ಬ್ರೈಡಲ್ವೇರ್‌ಗೆ ಸೀಮಿತವಾಗಿದ್ದ ಡಿಸೈನರ್ ಪಾರದರ್ಶಕ ದುಪಟ್ಟಾಗಳು, ಇಂದು ಸಾಮಾನ್ಯ ಉಡುಪಿನ ಜತೆಗೂ ಕಾಣಿಸತೊಡಗಿವೆ. ಮೊದಮೊದಲಿಗೆ ರ‍್ಯಾಂಪ್‌ಗಳಲ್ಲಿ ಹಿಟ್ ಆದ ಈ ಡಿಸೈನರ್ ಶೀರ್ ದುಪಟ್ಟಾಗಳು ಹೆಚ್ಚು ವಿಜೃಂಭಿಸಿದ್ದು, ಬಾಲಿವುಡ್‌ನ ಸಿನಿಮಾಗಳಲ್ಲಿ ಹಾಗೂ ಸೆಲೆಬ್ರೆಟಿಗಳ ಬ್ರೈಡಲ್ ಕಲೆಕ್ಷನ್‌ಗಳಲ್ಲಿ ಎಂಬುದು ಸೆಲೆಬ್ರೆಟಿ ಡಿಸೈನರ್ ಜೆನ್ ಅಭಿಪ್ರಾಯ.

ಅಂದಹಾಗೆ, ಸಾಮಾನ್ಯ ದುಪಟ್ಟಾಗಳಿಗೂ ಈ ದುಪಟ್ಟಾಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಮೊದಮೊದಲು ನಾರ್ತ್ ಇಂಡಿಯಾ ಲೆಹೆಂಗಾಗಳ ಜತೆ ಪ್ರಚಲಿತವಿದ್ದ, ಈ ಶೈಲಿಯ ಶೀರ್ ದುಪಟ್ಟಾಗಳು ಬರಬರುತ್ತಾ ಸೌತ್ ಇಂಡಿಯಾ ಉಡುಗೆಗಳಿಗೂ ಜತೆಯಾದವು ಎನ್ನುತ್ತಾರೆ ಡಿಸೈನರ್ ದಿಯಾ.

ಶೀರ್ ದುಪಟ್ಟಾ ಫ್ಯಾಬ್ರಿಕ್

ಪ್ರಮುಖವಾಗಿ ಶೀರ್‌ನಲ್ಲಿ ಬಳಸುವ ದುಪಟ್ಟಾಗಳು ನೆಟ್ಟೆಡ್, ಅರ್ಗಾನ್ಜಾ, ವಾಯ್ಲಿ, ಗೇಜ್, ಶಿಫಾನ್ . ಟ್ಯುಲ್ ಹಾಗೂ ನೈಲಾನ್ ನೆಟ್‌ನದ್ದಾಗಿರುತ್ತದೆ. ಅವುಗಳ ಮೆಟೀರಿಯಲ್ ಆಧಾರದ ಮೇಲೆ ಅವುಗಳ ವಿನ್ಯಾಸ ನಿರ್ಧರಿತವಾಗಿರುತ್ತದೆ. ಕೆಲವೊಂದು ಪಾರದರ್ಶಕವಾಗಿದ್ದರೂ ಮೆಟಿರೀಯಲ್ ವಿಭಿನ್ನವಾಗಿರುತ್ತದೆ. ಕೆಲವು ಶೈನಿಂಗ್ ಮೆಟೀರಿಯಲ್‌ನಲ್ಲಿಯೂ ವಿನ್ಯಾಸಗೊಂಡಿರುತ್ತವೆ.

ಶೀರ್ ಬ್ರೈಡಲ್ ದುಪಟ್ಟಾ

ಅತ್ಯಾಕರ್ಷಕ ಶೀರ್ ಫ್ಯಾಬ್ರಿಕ್‌ನ ಬ್ರೈಡಲ್ ದುಪಟ್ಟಾಗಳಿಗಂತೂ ಎಲ್ಲಿಲ್ಲದ ಬೇಡಿಕೆ. ಇವು ಡಿಸೈನರ್‌ಗಳ ಕೈ ಚಳಕದಿಂದಾಗಿ ನೋಡಲು ಅತ್ಯಾಕರ್ಷಕವಾಗಿರುತ್ತವೆ. ಒಂದೊಂದು ಎಂಬ್ರಾಯ್ಡರಿ ಹಾಗೂ ಬುಟ್ಟಾ ಹಾಗೂ ಸ್ಟೂನ್ ವರ್ಕ್‌ಗಳು ಕೂಡ ಸೂಕ್ಷ್ಮ ಕಲಾತ್ಮಕ ಕುಸರಿ ಹ್ಯಾಂಡ್ ಮೇಡ್‌ನದ್ದಾಗಿರುತ್ತವೆ. ಹಾಗಾಗಿ ಇವುಗಳ ಬೆಲೆ ಕೂಡ ದುಬಾರಿ ಎನ್ನುತ್ತಾರೆ ಡಿಸೈನರ್ ರಕ್ಷಕ್ ವರ್ಮಾ.

ಕುರ್ತಾ-ಸಲ್ವಾರ್‌ಗಳಿಗೆ ಸಾಥ್

ಇಂದು ಕುರ್ತಾ ಸಲ್ವಾರ್‌ಗಳಿಗೂ ಕೂಡ ಡಿಸೈನರ್ ಶೀರ್ ಸಲ್ವಾರ್‌ಗಳು ಗ್ರ್ಯಾಂಡ್ ಲುಕ್ ನೀಡುತ್ತಿವೆ. ಇವು ಇತ್ತೀಚಿನ ದಿನಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.

ಈ ಸುದ್ದಿಯನ್ನೂ ಓದಿ | Star Winter Care: ವಿಂಟರ್‌ ಸೀಸನ್‌ ಆರೈಕೆಗೆ ಸ್ಯಾಂಡಲ್‌ವುಡ್‌ ನಟಿ ಪಾವನಾ ನೀಡಿರುವ ಸಿಂಪಲ್‌ ಸಲಹೆಗಳಿವು

ಶೀರ್ ದುಪಟ್ಟಾ ಸ್ಟೈಲಿಂಗ್ ಟಿಪ್ಸ್

  • ಉದ್ದವಾಗಿರುವವರು ಆದಷ್ಟೂ ಲಾಂಗ್ ಶೀರ್ ದುಪಟ್ಟಾ ಆರಿಸಿಕೊಳ್ಳಬೇಕು.
  • ಕುಳ್ಳಗಿರುವವರು ಸ್ಮಾಲ್ ಡಿಸೈನರ್ ಶೀರ್ ದುಪಟ್ಟಾಗಳನ್ನು ಆಯ್ಕೆ ಮಾಡಬಹುದು.
  • ಯಾವುದೇ ಶೀರ್ ದುಪಟ್ಟಾಗಳ ಕಲರ್ಸ್ ಚೂಸ್ ಮಾಡುವ ಮುನ್ನ ಅವುಗಳ ಶೇಡ್ ಹಾಗೂ ಧರಿಸುವ ಡಿಸೈನವೇರ್‌ಗಳಿಗೆ ಮ್ಯಾಚ್ ಆಗುತ್ತವೆಯೇ ಎಂಬುದನ್ನು ನೋಡಿಕೊಳ್ಳಬೇಕು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)