Saturday, 16th November 2024

Bengaluru News: ಬರಿಗಾಲಿನ ಕಾರ್ಯಕರ್ತ ಖ್ಯಾತಿಯ ಅಜಯ್ ಒಲಿಗೆ ಸಾಕ್ರ ಆಸ್ಪತ್ರೆಯಿಂದ ಸನ್ಮಾನ

Bengaluru News

ಬೆಂಗಳೂರು: ಸಾಮಾಜಿಕ ಜಾಗೃತಿ, ಶಿಕ್ಷಣ ಮತ್ತು ಮಕ್ಕಳ ಕಲ್ಯಾಣಕ್ಕೆ ನೀಡಿದ ಅಪಾರ ಕೊಡುಗೆ ನೀಡಿದ, ʼಘನಶ್ಯಾಮ್ ಒಲಿ ಚೈಲ್ಡ್ ವೆಲ್‌ಫೇರ್‌ ಸೊಸೈಟಿʼಯ ಸ್ಥಾಪಕ ಅಜಯ್ ಒಲಿ ಅವರಿಗೆ ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ (Bengaluru News) ಸಾಕ್ರ ವರ್ಲ್ಡ್‌ ಆಸ್ಪತ್ರೆಯು ಗೌರವಿಸಿ, ಸನ್ಮಾನಿಸಿದೆ.

ಸಲಹೆಗಾರ ಮತ್ತು ಬರಿಗಾಲಿನ ಕಾರ್ಯಕರ್ತ ಎಂದೇ ಖ್ಯಾತಿ ಪಡೆದಿರುವ ಅಜಯ್ ಒಲಿ ಕಳೆದ ಹತ್ತು ವರ್ಷಗಳಿಂದ ಭಾರತದಾದ್ಯಂತ ಬಾಲಕಾರ್ಮಿಕ ಮತ್ತು ಭಿಕ್ಷಾಟನೆ ಪಿಡುಗುಗಳನ್ನು ನಿರ್ಮೂಲನೆ ಮಾಡಲು ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸ್ವ-ಧನಸಹಾಯ ಯೋಜನೆಗಳಾದ ʼಉನ್ಮುಕ್ತಿ, ಎಜುಕೇಶನ್ ಆನ್ ವೀಲ್ಸ್ʼ ಮತ್ತು ʼಮೇರಿ ಸಹೇಲಿʼ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಉನ್ನತಿಗಾಗಿ ಸಮರ್ಪಿತವಾಗಿವೆ. ಅವರ ನಿರಂತರ ಸಮರ್ಪಣೆಯು ಸಮಾಜದಲ್ಲಿ ಮಕ್ಕಳ ಕಲ್ಯಾಣ, ಜಾಗೃತಿ ಮತ್ತು ಶಿಕ್ಷಣವನ್ನು ಉತ್ತೇಜಿಸಿದೆ. ಅದೇ ರೀತಿ ಅಸಾಧಾರಣ ಪ್ರಯತ್ನಗಳಿಗಾಗಿ ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ʼರಾಷ್ಟ್ರೀಯ ಯುವ ಪ್ರಶಸ್ತಿʼ ಗಳಿಸಿದೆ. ಇದಲ್ಲದೆ, ಅವರು ತಮ್ಮ ವ್ಯಾಪಕ ಮತ್ತು ಗಮನಾರ್ಹ ಮಾನವೀಯ ಚಟುವಟಿಕೆಗಳಿಗಾಗಿ ʼಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ʼ ಮತ್ತು ʼಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ʼ ನಲ್ಲಿ ದಾಖಲೆಗಳನ್ನು ಹೊಂದಿದ್ದಾರೆ.

ಈ ಸುದ್ದಿಯನ್ನೂ ಓದಿ | Good news: ಟಿವಿ ರಿಪೇರಿ ತರಬೇತಿಗಾಗಿ ಅರ್ಜಿ ಆಹ್ವಾನ

ಅವರ ಉಪಕ್ರಮಗಳು 17,000 ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ಮತ್ತು ಆಶ್ರಯ ನೀಡುವ ಮೂಲಕ ಸಹಾಯ ಮಾಡಿವೆ. ಅವರ ದಣಿವರಿಯದ ಪ್ರಯತ್ನಗಳ ಮೂಲಕ 35 ಬರಿಗಾಲಿನ ಜಾಗೃತಿ ನಡಿಗೆಗಳನ್ನು ನಡೆಸಲು ಕಾರಣವಾಗಿವೆ. ಇಲ್ಲಿಯವರೆಗೆ ಅವರು 1 ಲಕ್ಷ ಕಿಲೋಮೀಟರ್ ನಡೆದು 4.5 ಲಕ್ಷ ಜನರನ್ನು ಸಂಪರ್ಕಿಸಿದ್ದಾರೆ. ʼಎಜುಕೇಶನ್ ಆನ್ ವೀಲ್ಸ್ʼ ಎಂಬ ಅವರ ಅಭಿಯಾನವು ಪ್ರಸ್ತುತ 16 ರಾಜ್ಯಗಳಲ್ಲಿ ನಡೆಯುತ್ತದೆ. 7,000 ಕಿಲೋಮೀಟರ್ ಪ್ರಯಾಣ ಮತ್ತು 600 ಕಿಲೋಮೀಟರ್ ಬರಿಗಾಲಿನ ನಡಿಗೆಯ ಮೂಲಕ 75,000 ಯುವಕರನ್ನು ಸಮಾಜ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಲಿ ಅವರು ಸಲಹೆಗಾರರಾಗಿದ್ದು, ಅಗತ್ಯವಿರುವವರಿಗೆ ಮಾನಸಿಕ ಆರೋಗ್ಯ ಮತ್ತು ಪ್ರೇರಣಾದಾಯಕ ಸಮಾಲೋಚನೆಯನ್ನು ನೀಡುತ್ತಾರೆ.

ಸಿಎಸ್ಆರ್ ಉಪಕ್ರಮದ ಭಾಗವಾಗಿ ದೀನದಲಿತ ಮಕ್ಕಳ ಕಲ್ಯಾಣವನ್ನು ಕೇಂದ್ರೀಕರಿಸಿ 2025ರ ವೇಳೆಗೆ 10 ಶಾಲೆಗಳೊಂದಿಗೆ ಸಹಭಾಗಿತ್ವ ಮಾಡಿಕೊಳ್ಳುವ ಬದ್ಧತೆಯನ್ನು ಸಾಕ್ರ ಆಸ್ಪತ್ರೆಯು ಘೋಷಿಸಿದೆ. ಇದು ಮಕ್ಕಳ ಪೋಷಣೆ, ಸುರಕ್ಷತೆ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿ ಹೊಂದಿದೆ. ಪ್ರಸ್ತುತ, ಈ ಕಾರ್ಯಕ್ರಮವನ್ನು 3 ಶಾಲೆಗಳಲ್ಲಿ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ 7 ಶಾಲೆಗಳಿಗೆ ವಿಸ್ತರಿಸುವ ಯೋಜನೆಯೊಂದಿಗೆ, ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಕಡೆಗೆ ಗಮನ ಹರಿಸಲಿದೆ.

ಬೆಂಗಳೂರಿನ ಸಾಕ್ರ ವರ್ಲ್ಡ್ ಹಾಸ್ಪಿಟಲ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಯುಚಿ ನಗಾನೊ ಈ ಸಂದರ್ಭದಲ್ಲಿ ಮಾತನಾಡಿ, ʼಬಡ ಮಕ್ಕಳ ಜೀವನ ಸುಧಾರಿಸಲು ಮತ್ತು ಸಮಾಜಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಲು ಮುಂದಿನ ಪೀಳಿಗೆಯನ್ನು ಪ್ರೋತ್ಸಾಹಿಸಲು ಅಜಯ್ ಒಲಿ ಅವರ ದಣಿವರಿಯದ ಪ್ರಯತ್ನಗಳಿಗಾಗಿ ಅವರನ್ನು ಅಭಿನಂದಿಸಲು ಹೆಮ್ಮೆಯಾಗುತ್ತಿದೆʼ ಎಂದು ಹೇಳಿದರು.

ಬೆಂಗಳೂರಿನ ಸಾಕ್ರ ವರ್ಲ್ಡ್ ಆಸ್ಪತ್ರೆಯ ಉಪ ವ್ಯವಸ್ಥಾಪಕ ನಿರ್ದೇಶಕ ನವೋಯಾ ಮಾಟ್ಸುಮಿ ಮಾತನಾಡಿ, ʼಬಡತನದ ಅಂಚಿನಲ್ಲಿರುವ ಕುಟುಂಬದ ಮಕ್ಕಳ ಬೆಳವಣಿಗೆ ಮತ್ತು ಯೋಗಕ್ಷೇಮಕ್ಕಾಗಿ ಸರ್ಕಾರಿ ಶಾಲೆಗಳ ಮಾಡಿರುವ ಸಾಕ್ರ ಆಸ್ಪತ್ರೆಯ ಸಹಭಾಗಿತ್ವಕ್ಕೆ ಎರಡು ವರ್ಷ ಪೂರ್ಣಗೊಂಡಿದೆʼ ಎಂದು ಹೇಳಿದರು.

ಬೆಂಗಳೂರಿನ ಸಾಕ್ರ ವರ್ಲ್ಡ್ ಆಸ್ಪತ್ರೆಯ ಗ್ರೂಪ್ ಚೀಫ್ ಆಪರೇಟಿಂಗ್ ಆಫೀಸರ್ ಲವ್ಕೇಶ್ ಫಾಸು ಮಾತನಾಡಿ, ಸಮಾಜಕ್ಕೆ ಧನಾತ್ಮಕವಾಗಿ ಕೊಡುಗೆ ನೀಡುವ ಸಾಮರ್ಥ್ಯವಿರುವ ಮತ್ತು ಉತ್ತಮ ಪ್ರಜೆಗಳಾಗಿ ಬೆಳೆಯುವ ಅವಕಾಶ ಹೊಂದಿರುವ ಮಕ್ಕಳಿಗೆ ಎಲ್ಲಾ ಅವಕಾಶಗಳನ್ನು ನೀಡುವುದು ನಮ್ಮ ಕರ್ತವ್ಯ. ಸಿಎಸ್ಆರ್ ಕಾರ್ಯಕ್ರಮಗಳು ಮಕ್ಕಳ ನೈರ್ಮಲ್ಯ, ಆರೋಗ್ಯ ಜಾಗೃತಿ ಮತ್ತು ಶಿಕ್ಷಣಕ್ಕೆ ಬೆಂಬಲದ ಅಮೂಲ್ಯ ಸಂಕೇತವಾಗಿದೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ | Bengaluru Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಬೆಂಗಳೂರಿನ ಸಾಕ್ರ ವರ್ಲ್ಡ್ ಆಸ್ಪತ್ರೆಯ ಹ್ಯೂಮನ್ ಕ್ಯಾಪಿಟಲ್ ಮ್ಯಾನೇಜ್ಮೆಂಟ್‌ ಜನರಲ್ ಮ್ಯಾನೇಜರ್ ನೀತಾ ವೇಗಸ್ ಮಾತನಾಡಿ, ಸಂಕಲ್ಪ ಉಪಕ್ರಮವು ಕೇವಲ ಶಿಕ್ಷಣವನ್ನು ಬೆಂಬಲಿಸುವುದಲ್ಲ, ಆರೋಗ್ಯ, ಸುರಕ್ಷತೆ ಮತ್ತು ನೈರ್ಮಲ್ಯವನ್ನು ಬೆಂಬಲಿಸುವುದು ಕೂಡ ಈ ಕಾಲದ ಅಗತ್ಯ ಎಂದು ತಿಳಿಸಿದ್ದಾರೆ.