ಜೋಹನ್ಸ್ಬರ್ಗ್: ದಕ್ಷಿಣ ಆಫ್ರಿಕಾ ವಿರುದ್ಧ ನಾಲ್ಕು ಪಂದ್ಯಗಳ ಟಿ20ಐ (IND vs SA) ಸರಣಿಯನ್ನು ಗೆಲ್ಲುವ ಮೂಲಕ ಭಾರತ ತಂಡ, ಪಾಕಿಸ್ತಾನ ತಂಡದ ಸಾರ್ವಕಾಲಿಕ ಟಿ20ಐ ದಾಖಲೆಯನ್ನು ಮುರಿದಿದೆ. ಭಾರತ ತಂಡ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಪಂದ್ಯಗಳ ಗೆಲುವಿನ ಸರಾಸರಿಯನ್ನು ಹೊಂದಿದೆ.
ಶುಕ್ರವಾರ ಇಲ್ಲಿನ ದಿ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದಿದ್ದ ನಾಲ್ಕನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್ (109) ಹಾಗೂ ತಿಲಕ್ ವರ್ಮಾ (120) ಅವರ ಶತಕಗಳ ಬಲದಿಂದ ತನ್ನ ಪಾಲಿನ 20 ಓವರ್ಗಳಿಗೆ ಒಂದು ವಿಕೆಟ್ ನಷ್ಟಕ್ಕೆ 283 ರನ್ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 284 ರನ್ಗಳ ಗುರಿಯನ್ನು ನೀಡಿತ್ತು.
IND vs SA Match Highlights: ಸಂಜು-ತಿಲಕ್ ಶತಕಗಳ ಅಬ್ಬರ, ಟಿ20ಐ ಸರಣಿ ಗೆದ್ದ ಭಾರತ!
ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ 148 ರನ್ಗಳಿಗೆ ಆಲ್ಔಟ್ ಆಯಿತು. ಆ ಮೂಲಕ 135 ರನ್ಗಳಿಂದ ಭಾರತ ತಂಡ ಗೆಲುವು ಪಡೆದಿತ್ತು. ಈ ಗೆಲುವಿನೊಂದಿಗೆ ಭಾರತ ತಂಡ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಟಿ20ಐ ಕ್ರಿಕೆಟ್ನಲ್ಲಿ ಹೆಚ್ಚಿನ ಗೆಲುವಿನ ಸರಾಸರಿಯನ್ನು ಹೊಂದುವ ಮೂಲಕ ಪಾಕಿಸ್ತಾನ ತಂಡದ ದಾಖಲೆಯನ್ನು ಮುರಿದಿದೆ.
2024ರ ಕ್ಯಾಲೆಂಡರ್ ವರ್ಷದಲ್ಲಿ ಭಾರತ ತಂಡ 92.7 ರ ಗೆಲುವಿನ ಸರಾಸರಿಯನ್ನು ಹೊಂದಿದೆ. ಪಾಕಿಸ್ತಾನ ತಂಡ 2021ರಲ್ಲಿ 76.9ರ ಗೆಲುವಿನ ಸರಾಸರಿಯನ್ನು ಹೊಂದಿತ್ತು. ಇದೀಗ ಭಾರತ ತಂಡ ಈ ದಾಖಲೆಯನ್ನು ಮುರಿದಿದೆ. 2021ರಲ್ಲಿ ಪಾಕಿಸ್ತಾನ ತಂಡ ಆಡಿದ್ದ 29 ಪಂದ್ಯಗಳ ಪೈಕಿ 20ರಲ್ಲಿ ಗೆಲುವು ಪಡೆದಿದೆ. ಇನ್ನು 2024ರಲ್ಲಿ ಭಾರತ ತಂಡ ಆಡಿದ್ದ 26 ಪಂದ್ಯಗಳ ಪೈಕಿ 24ರಲ್ಲಿ ಜಯ ಸಾಧಿಸಿದೆ. ಕ್ಯಾಲೆಂಡರ್ ವರ್ಷದಲ್ಲಿ ಭಾರತ ತಂಡದ ಶ್ರೇಷ್ಠ ಸಾಧನೆ ಇದಾಗಿದೆ. ಇದಕ್ಕೂ ಮುನ್ನ 2022ರಲ್ಲಿ ಆಡಿದ್ದ 40 ಪಂದ್ಯಗಳಲ್ಲಿ 28ರಲ್ಲಿ ಗೆಲುವು ಪಡೆದಿತ್ತು.
Sanju Samson: ಮಹಿಳೆಯ ಕೆನ್ನೆಗೆ ಸಿಕ್ಸರ್ ಬಾರಿಸಿದ ಸಂಜು ಸ್ಯಾಮ್ಸನ್; ಇಲ್ಲಿದೆ ವಿಡಿಯೊ
ಭಾರತ ತಂಡ ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ. ಅದರಲ್ಲಿಯೂ ಯುವ ತಂಡ ಶ್ರೇಷ್ಠ ಪ್ರದರ್ಶನವನ್ನು ತೋರಿದೆ. ಈ ವರ್ಷ ಭಾರತ ತಂಡ ಸೋತಿರುವುದು ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ. ಜಿಂಬಾಬ್ವೆ ವಿರುದ್ದ ಒಂದು ಪಂದ್ಯ ಸೋತಿದ್ದರೆ, ಇನ್ನೊಂದು ಪಂದ್ಯ ದಕ್ಷಿಣ ಆಫ್ರಿಕಾ ವಿರುದ್ದ ಇತ್ತೀಚೆಗೆ ಸೋತಿತ್ತು. ಈ ಎರಡು ಪಂದ್ಯಗಳನ್ನು ಸೋತಿದ್ದು ಬಿಟ್ಟರೆ ಇನ್ನುಳಿದ ಎಲ್ಲಾ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆಲುವು ಪಡೆದಿದೆ. ಆ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ.