ನವದೆಹಲಿ: ಬಾಂಗ್ಲಾದೇಶ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ (IND vs SA) ಸರಣಿಗಳಲ್ಲಿ ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್, ಬ್ಯಾಟರ್ ಸಂಜು ಸ್ಯಾಮ್ಸನ್ ಅಸಾಧಾರಣ ಪ್ರದರ್ಶನ ತೋರಿದ್ದು, ಆರಂಭಿಕ ಆಟಗಾರನ ಸ್ಥಾನವನ್ನು ಬಹುತೇಕ ಗಟ್ಟಿ ಮಾಡಿಕೊಂಡಿದ್ದಾರೆ. ತಾನು ಆಡಿದ ಕಳೆದ ಐದು ಪಂದ್ಯಗಳಿಂದ ಅವರು ಮೂರು ಶತಕ ಸಿಡಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಕೊನೆಯ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಹಾಗೂ ಅಂತಿಮ ಪಂದ್ಯದಲ್ಲಿ ಶತಕ ಸಿಡಿಸಿರುವ ಸಂಜು ಸ್ಯಾಮ್ಸನ್ ಅವರನ್ನು ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಅಮೇರಿಕ ಜಂಟಿ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ ನಂತರ ಅಂತಾರಾಷ್ಟ್ರೀಯ ಟಿ20ಐ ಕ್ರಿಕೆಟ್‌ಗೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಸೇರಿದಂತೆ ಹಲವು ಕಿರಿಯ ಆಟಗಾರರಿಗೆ ಅವಕಾಶ ಸಿಕ್ಕಿದೆ.
IND vs SA: ಸ್ಪೋಟಕ ಶತಕಗಳನ್ನು ಸಿಡಿಸಿ ಇತಿಹಾಸ ಬರೆದ ಸಂಜು ಸ್ಯಾಮ್ಸನ್-ತಿಲಕ್ ವರ್ಮಾ!
ರೋಹಿತ್ ಶರ್ಮಾ ಟಿ20ಐ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (5 ಶತಕ) ಅವರೊಂದಿಗೆ ಅತಿ ಹೆಚ್ಚು ಶತಕ ಸಿಡಿಸಿದ ಜಂಟಿ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. ಹಿಟ್‌ಮ್ಯಾನ್ 159 ಪಂದ್ಯಗಳಿಂದ 5 ಶತಕ ಸಿಡಿಸಿದ್ದಾರೆ. ಇನ್ನು ವಿರಾಟ್ ಕೊಹ್ಲಿ 125 ಪಂದ್ಯ ಆಡಿದರೂ ಕೇವಲ ಒಂದು ಶತಕ ಬಾರಿಸಿದ್ದಾರೆ.
ಪ್ರಸಕ್ತ ಭಾರತ ಟಿ20 ತಂಡದ ನಾಯಕರಾಗಿರುವ ಸೂರ್ಯಕುಮಾರ್ ಯಾದವ್ 78 ಪಂದ್ಯಗಳಿಂದ 4 ಶತಕ, ಕನ್ನಡಿಗ ಕೆಎಲ್ ರಾಹುಲ್ 3 ಶತಕ ಸಿಡಿಸಲು 72 ಪಂದ್ಯ ತೆಗೆದುಕೊಂಡಿದ್ದಾರೆ. ಆದರೆ ಸಂಜು ಸ್ಯಾಮ್ಸನ್ ಕೇವಲ 37 ಪಂದ್ಯಗಳಿಂದ 3 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
IND vs SA: ಓಪನರ್ ಆಗಿ ಸಂಜು ಸ್ಯಾಮ್ಸನ್ ಮುಂದುವರಿಯುತ್ತಾರಾ? ಸೂರ್ಯಕುಮಾರ್ ಹೇಳಿದಿದ್ದು!
ಯುವ ಆಟಗಾರರು ಮುಕ್ತವಾಗಿ ಆಡಿದ್ದಾರೆ: ಅಜಯ್ ಜಡೇಜಾ
“ಟೀಮ್ ಇಂಡಿಯಾದ ದಿಗ್ಗಜರು ಟಿ20ಐ ಕ್ರಿಕೆಟ್‌ನಲ್ಲಿ 4-5 ಶತಕ ಸಿಡಿಸಲು 150 ಪಂದ್ಯಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಸಂಜು ಸ್ಯಾಮ್ಸನ್ ಅಲ್ಪ ಅವಧಿಯಲ್ಲೇ ಈ ಸಾಧನೆ ಮಾಡಿದ್ದಾರೆ. ಇದು ಯುವ ಆಟಗಾರರು ಆಡುವ ಮನಸ್ಥಿತಿಯನ್ನು ತೋರಿಸುತ್ತದೆ. ಅವರು ಪಂದ್ಯದ ಮೊದಲ ಎಸೆತದಿಂದಲೂ ನಿರ್ಭೀತಿಯಿಂದ ಚೆಂಡನ್ನು ಬೌಂಡರಿ ಗೆರೆ ದಾಟಿಸಲು ಬಯಸುತ್ತಾರೆ,” ಎಂದು ಅಜಯ್ ಜಡೇಜಾ ಹೊಗಳಿದ್ದಾರೆ.
ಸಂಜು ಸ್ಯಾಮ್ಸನ್ ವಿಭಿನ್ನ ರೀತಿಯ ಆಟಗಾರ
“ಸಂಜು ಸ್ಯಾಮ್ಸನ್ ಅವರು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಲು ಬಯಸುತ್ತಿದ್ದರು. ಅವರು ಈಗ ವಿಭಿನ್ನ ಆಟಗಾರನಾಗಿ ರೂಪಗೊಂಡಿದ್ದಾರೆ. ಅವರು ನಿಜಕ್ಕೂ ಅದ್ಭುತ ಆಟಗಾರ ಆದರೆ, ಸ್ಥಿರ ಬ್ಯಾಟಿಂಗ್ ಪ್ರದರ್ಶನ ತೋರಲು ವಿಫಲರಾಗಿದ್ದರು. ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಅವರು ಬ್ಯಾಕ್ ಟು ಬ್ಯಾಕ್ ಡಕೌಟ್ ಆಗಿದ್ದರು. ಆದರೆ ಅವರ ಪ್ರದರ್ಶನ ಅದ್ಭುತವಾಗಿದೆ,” ಎಂದು ಅಜಯ್ ಜಡೇಜಾ ಹೇಳಿದ್ದಾರೆ.
9⃣ 🤝 7⃣2⃣
— BCCI (@BCCI) November 15, 2024
Sanju Samson 🤝 Tilak Varma
𝗜𝗻 𝗙𝗿𝗮𝗺𝗲: The ONLY two Indians to score 2⃣ successive T20I 💯s 👏 👏
Live ▶️ https://t.co/b22K7t8KwL#TeamIndia | #SAvIND pic.twitter.com/lvm31r6s5c
ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಟಿ20ಐ ಸರಣಿಯ ಆರಂಭಿಕ ಪಂದ್ಯದಿಂದಲೂ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲೂ ಇನಿಂಗ್ಸ್ ಆರಂಭಿಸಿ ಎರಡು ಶತಕ ಸೇರಿದಂತೆ 194.59ರ ಸ್ಟ್ರೈಕ್ ರೇಟ್‌ನಲ್ಲಿ 216 ರನ್ ಸಿಡಿಸಿದ್ದರು. ಆ ಮೂಲಕ ತಿಲಕ್ ವರ್ಮಾ (280 ರನ್, 2 ಶತಕ) ಬಳಿಕ ಗರಿಷ್ಠ ರನ್ ಗಳಿಸಿದ ಎರಡನೇ ಬ್ಯಾಟ್ಸ್‌ಮನ್ ಆದರು.