Sunday, 17th November 2024

Hari Parak Column: ಸಿಗರೇಟ್‌ ಬಿಟ್ಟೆ ಅಂದಿದ್ದು on a lighter note

ತುಂಟರಗಾಳಿ

ಸಿನಿಗನ್ನಡ

“ನಮ್ ಸಿನಿಮಾ ನಟರು ಏನ್ ಮಾಡ್ತಾ ಇದ್ದಾರೆ?”- ರಾಜ್ಯದಲ್ಲಿ ಏನಾದರೂ ತೊಂದರೆ ಆದ ಕೂಡಲೇ ಇಂಥದೊಂದು ಪ್ರಶ್ನೆ ನಮ್ಮ
ಜನಗಳ ಬಾಯಲ್ಲಿ ಬರೋದು ಕಾಮನ್. ಇದೇನೂ ಹೊಸದಲ್ಲ ಬಿಡಿ. ಹೀಗೆ ಕೇಳೋ ಕಾಯಿಲೆ, ರಾಜ್ಯದಲ್ಲಿ ಬರ, ಪ್ರವಾಹ, ಕಾವೇರಿ ಸಮಸ್ಯೆ
ಏನೇ ಬಂದರೂ ಅವುಗಳ ಜತೆಗೇ ಬರುತ್ತೆ. ಕರೋನಾ ಕಾಲದಲ್ಲೂ ಬಂದಿತ್ತು. ಕನ್ನಡದ ನಟರು ತಮ್ಮ ಸಿನಿಮಾಗಳಲ್ಲಿ ವಿಲನ್‌ಗಳನ್ನು ಹೊಡೆ
ದೋಡಿಸಿದಂತೆ ಎಲ್ಲ ಸಮಸ್ಯೆಗಳನ್ನೂ ಒಂದೇ ಸಲಕ್ಕೆ ಓಡಿಸಬೇಕು, ಸಂತ್ರಸ್ತರಿಗೆ ನೆರವಾಗಬೇಕು, ಪರಿಹಾರ ಕೊಡ ಬೇಕು ಎಂಬೆಲ್ಲ ಪ್ರಲಾಪಗಳು ಶುರು ವಾಗುತ್ತವೆ. ಒಟ್ನಲ್ಲಿ ನಮ್ಮ ಜನರಿಗೆ, ಪಾಪ ಈ ಸಿನಿಮಾ ನಟರು ಸುಲಭಕ್ಕೆ ಸಿಗುವ ಮಿಕಗಳಾಗಿಬಿಡುತ್ತಾರೆ. “ಈ
ನಟರು ನಮಗೇನೂ ಮಾಡಿಲ್ಲ” ಎಂದು ಮುಲುಗುವ ಈ ಜನ, ತಾವು ಅವರನ್ನು ಉದ್ಧಾರ ಮಾಡಿದ್ದೇವೆ, ಹಣ ಕೊಟ್ಟು ಅವರ ಸಿನಿಮಾಗಳನ್ನು
ನೋಡಿದ್ದೇವೆ, ಹಾಗಾಗಿ ಅವರು ತಮಗೆ ನೆರವಾಗಬೇಕು ಎಂಬ ಧೋರಣೆಯಲ್ಲಿ ಮಾತಾಡುತ್ತಾರೆ.

ಆದರೆ ಒಂದು ವರ್ಷದಲ್ಲಿ ಹೆಚ್ಚೆಂದರೆ 200 ರುಪಾಯಿ ಕೊಟ್ಟು ಒಬ್ಬ ಸ್ಟಾರ್ ನಟನ ಸಿನಿಮಾ ನೋಡುವ ಇವರು, ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ
ಮಿನಿಮಮ್ ಎಂದರೂ ವರ್ಷಕ್ಕೆ 50 ಸಾವಿರ, 1 ಲಕ್ಷ ರುಪಾಯಿಯನ್ನು ತಮ್ಮಿಂದ ಪೀಕಿಸುವ ಸ್ಕೂಲ್ ಮ್ಯಾನೇಜ್‌ಮೆಂಟ್‌ನವರನ್ನು ಹೀಗೆ
ಕೇಳುವುದಿಲ್ಲ. ತಮ್ಮಿಂದಲೇ ಲಕ್ಷಾಂತರ ಹಣ ಪೀಕಿಸಿ ಆಸ್ಪತ್ರೆ ಕಟ್ಟಿಸಿದ ವನನ್ನಾಗಲೀ, ಸಮಾಜದ ಇನ್ಯಾವುದೇ ಉದ್ಯಮಿಯನ್ನಾಗಲೀ ಇವರು
ಕೇಳುವುದಿಲ್ಲ. ಮನೆ ಬಳಿಯ ಕಿರಾಣಿ ಅಂಗಡಿಗೂ ಇವರು ಸಾವಿರಾರು ರು. ಬ್ಯುಸಿನೆಸ್ ಕೊಟ್ಟರೂ ಅವನನ್ನೂ ಕೇಳುವುದಿಲ್ಲ. ಅವರೆಲ್ಲರೂ
ತಮ್ಮಿಂದಲೇ ಅಷ್ಟು ಶ್ರೀಮಂತರಾಗಿದ್ದರೂ ಅವರ ಗಳಿಕೆಯಲ್ಲಿ ತಮ್ಮ ಪಾಲಿದೆ ಎಂದು ಜನಗಳಿಗೆ ಅನ್ನಿಸೋದಿಲ್ಲ. ಅವರನ್ನು ಬಿಡಿ, ಸಿನಿಮಾ
ಮಾಡಿ ಕೋಟಿಗಟ್ಟಲೆ ಹಣ ಮಾಡುವ ನಿರ್ಮಾಪಕರನ್ನೂ ಇವರು ಕೇಳೋ ದಿಲ್ಲ. ಬದಲಾಗಿ ಅದರಲ್ಲಿ ಒಂದು ಪಾಲು ತೆಗೆದುಕೊಳ್ಳುವ ನಟರು
ಇವರಿಗೆ ‘ಬಲಿ-ಕಾ-ಬಕ್ರಾ’ ಆಗುತ್ತಾರೆ.

ವಿಚಿತ್ರ ಅಂದ್ರೆ, ಈ ಜನಗಳು ನಮಗೆ ಯಾಕೆ ಏನೂ ಮಾಡಿಲ್ಲ ಅಂತ ಕೇಳಬೇಕಾದ ಸರಕಾರಗಳನ್ನೇ ಕೇಳೋದಿಲ್ಲ. ಇವರಿಗೆ ಕೇಳಬೇಕಾದ ಒಂದೇ ಪ್ರಶ್ನೆ ಅಂದ್ರೆ- ಸಿನಿಮಾ ನಟರೇನು ಬಿಟ್ಟಿ ಬಿದ್ದಿದ್ದಾರಾ?

ಲೂಸ್‌ ಟಾಕ್:‌ ಅತೃಪ್ತ ರಾಜಕಾರಣಿ
ಮಿಸ್ಟರ್ ಪೊಲಿಟಿಶಿಯನ್, ಅವಕಾಶವಾದಿ ಥರ ನೀವ್ಯಾಕೆ ಪಕ್ಷಾಂತರಿ ತಳಿ ಆಗಿದ್ದು?

  • ಏನ್ ಮಾಡೋಕಾಗುತ್ತೆ, ಎಲ್ರೂ ಹಂಗೇನೇ. ಒಂದು ಪಕ್ಷ, ಅವರ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ಇನ್ನೊಂದ್ ಪಕ್ಷಕ್ಕೆ ಹೋಗ್ತಾರೆ.
  • ಅಲ್ಲಾ, ನಿಮ್ಮ ಪಕ್ಷದಲ್ಲಿ ನಿಮ್ಮವರನ್ನೇ ಬಯ್ಕೊಂಡ್ ಓಡಾಡ್ತಾ ಇದ್ದವರಿಗೆ ಟಿಕೆಟ್ ಕೊಡ್ತಾರೆ. ನಿಮಗೆ ಕೊಡಲ್ಲ ಅಂದ್ರೆ ಅದಕ್ಕೆ ಕಾರಣ
    ಇರುತ್ತಲ್ವಾ?
  • ಅದ್ ಹಂಗೇ. ಬಕೆಟ್ ಹಿಡಿದವರಿಗೆ ಟಿಕೆಟ್ ಕೊಡಲಿಲ್ಲ. ಆದರೆ, ಪಕ್ಷಕ್ಕೆ ಡ್ಯಾಮೇಜ್ ಮಾಡಿದವರ ಇಮೇಜ್ ಚೆನ್ನಾಗಿದೆಯಂತೆ.
  • ವಯಸ್ಸಾದವರಿಗೆ ಚುನಾವಣೆಯಲ್ಲಿ ಮಣೆ ಹಾಕಲ್ಲ ಅಂತ ನಿಮ್ಮ ಪಕ್ಷದವರು ಹೇಳಿದ್ದಾರಂತಲ್ಲ?
  • ಅಯ್ಯೋ, ಚುನಾವಣೆಗೆ ಬಿಡಿ, ನೆಟ್ಟಗೆ ಅವರ ಕಾಲ ಮೇಲೆ ನಿಂತ್ಕೊಳ್ಳೋಕೇ ಆಗದಿದ್ದವರಿಗೆ ಟಿಕೆಟ್ ಕೊಟ್ಟಿದ್ದಾರೆ. ಇದು ಚುನಾವಣೆ
    ಅಲ್ಲ ಚಿತಾವಣೆ.
  • ಆದ್ರೂ ಈ ವಯಸ್ಸಲ್ಲೂ ಇನ್ನೊಂದ್ ಪಕ್ಷಕ್ಕೆ ಹೋಗಿ ಏನ್ ಸಾಧನೆ ಮಾಡ್ತೀರಾ?
  • ವಯಸ್ಸಾಗಿದೆ ಅಷ್ಟೇ ಆಯಾಸ ಆಗಿಲ್ಲ. ಆಯಸ್ಸು ಇನ್ನೂ ಗಟ್ಟಿ ಇದೆ. ಓಲ್ಡ ಈಸ್ ಬೋಲ್ಡ್‌ ಅನ್ನೋದು ರಾಜಕೀಯದಲ್ಲಿ ಫೇಮಸ್ ಮಾತು.
  • ಅದ್ಸರಿ, ಅತೃಪ್ತ ಶಾಸಕರೇ..
  • ರೀ, ನನ್ನನ್ನ ಅತೃಪ್ತ ಶಾಸಕ ಅಂತೆ ಕರೀಬೇಡ್ರೀ. ನಂದೂ ಸಿ.ಡಿ. ಎಲ್ಲಾ ರಿಲೀಸ್ ಆಗಿದೆ. ನಾನು ಅತೃಪ್ತ ಅಲ್ಲ, ಸಂತೃಪ್ತ

  • (ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್
ತನ್ನ ಆಡಳಿತದಲ್ಲಿ ಪ್ರಜೆಗಳನ್ನ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಂಡ ಒಬ್ಬ ಅತಿಕೆಟ್ಟ ರಾಜ ಮತ್ತು ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ ಇನ್ನೊಬ್ಬ ರಾಜ ಇಬ್ಬರೂ ಸತ್ತು ದೇವಲೋಕದ ದಾರಿ ಹಿಡಿದರು. ಇನ್ನೇನು ಸ್ವರ್ಗ, ನರಕ ಎರಡೂ ಹತ್ತಿರ ಬಂದವು.
ಮೊದಲು ಇಬ್ಬರೂ ಸ್ವರ್ಗದ ಬಾಗಿಲಲ್ಲಿ ಹೋಗಿ ನಿಂತರು. ಅಲ್ಲಿ ನಿಂತಿದ್ದ ಕಾವಲುಗಾರ ಖೇಮು ಇಬ್ಬರನ್ನೂ ತಡೆದು ನಿಲ್ಲಿಸಿ ಚೆಕ್ ಮಾಡೋಕೆ
ಶುರುಮಾಡಿದ. ಮೊದಲು ಕೆಟ್ಟ ರಾಜನ ಸರದಿ ಬಂತು. ಕಾವಲುಗಾರ ಖೇಮು ಅವನ ಹಿಸ್ಟರಿ ತೆಗೆದು ನೋಡಿದ. ಅವನನ್ನು ನೋಡಿ ಮುಗುಳ್ನಕ್ಕು, “ಬನ್ನಿ ಸ್ವಾಮಿ, ನಿಮಗೆ ಸ್ವರ್ಗದ ಬಾಗಿಲು ತೆರೆದಿದೆ” ಎಂದು ಅವನಿಗೆ ಚಿನ್ನದ ಕಿರೀಟ ತೊಡಿಸಿ, ತಣ್ಣನೆಯ ಪಾನೀಯ ಕೊಟ್ಟು ಒಳಗೆ ಕರೆದುಕೊಂಡ. ಇದನ್ನೆಲ್ಲಾ ನೋಡುತ್ತಿದ್ದ ಒಳ್ಳೆಯ ರಾಜ, ‘ಅಂಥ ಕೆಟ್ಟವನಿಗೇ ಇಷ್ಟು ಮರ್ಯಾದೆ ಸಿಕ್ಕಮೇಲೆ, ನನಗೆ ಇನ್ನೆಷ್ಟು ಸಿಗಬೇಡ’
ಎಂದುಕೊಂಡು ಖುಷಿಯಿಂದ ಮುಂದೆ ಹೋದ. ಇವನನ್ನು ತಡೆದು ನಿಲ್ಲಿಸಿದ ಖೇಮು ಇವನ ಹಿಸ್ಟರಿ ತೆಗೆದು ನೋಡಿದ. ನಂತರ ತಲೆಯೆತ್ತಿ ಇವ
ನನ್ನು ನೋಡಿದವನೇ ಮುಖ ಸಿಂಡರಿಸಿ ಕೊಂಡು, “ನಿನಗಿಲ್ಲಿ ಜಾಗವಿಲ್ಲ, ನೀನು ನರಕಕ್ಕೆ ಹೋಗಬಹುದು” ಅಂದ. ಈ ರಾಜನಿಗೆ ಆಶ್ಚರ್ಯ ಮತ್ತು ಸಿಟ್ಟು ಎರಡೂ ಒಟ್ಟಿಗೇ ಬಂತು. ಅದೇ ಸಿಟ್ಟಿ ನಲ್ಲಿ, “ಇದ್ಯಾವ ನ್ಯಾಯ? ಪ್ರಜೆಗಳಿಗೆ ಎಷ್ಟೆ ಕಿರುಕುಳ ಕೊಟ್ಟ ಅವನಿಗೆ ಅಷ್ಟೊಂದು ಮರ್ಯಾದೆ, ಗೌರವ; ನಾನು ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಂಡವನು.

ನನಗ್ಯಾಕೆ ಇಂಥಾ ಅನ್ಯಾಯ? ದೇವಲೋಕದಲ್ಲೂ ಈ ರೀತಿ ಮೋಸವೇ?” ಅಂತ ಕಾವಲುಗಾರ ಖೇಮುವನ್ನು ಕೇಳಿದ. ಅದಕ್ಕೆ ಖೇಮು
ಹೇಳಿದ, “ನೋಡಪ್ಪಾ, ಇದ ರಲ್ಲಿ ಮೋಸ ಏನಿಲ್ಲ, ನಿನ್ನ ಆಡಳಿತದಲ್ಲಿ ಪ್ರಜೆಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರು. ಆದರೆ ಅವನ ಆಡಳಿತದಲ್ಲಿ ಪ್ರತಿ ಕ್ಷಣವೂ ‘ದೇವರೇ ನಮ್ಮನ್ನ ಕಾಪಾಡು’ ಅಂತ ಬೇಡಿಕೊಳ್ತಾ ಇದ್ರು. ಅದಕ್ಕೇ ದೇವರಿಗೆ ಆ ರಾಜನೇ ಹೆಚ್ಚು ಇಷ್ಟ. ಕಳಕಳಿ, ಉದ್ದೇಶ, ಪ್ರಯತ್ನ ಮುಖ್ಯ ಅಲ್ಲ, ರಿಸಲ್ಟ ಮಾತ್ರ ಮುಖ್ಯ. ಗೊತ್ತಾಯ್ತಾ?”.


ಲೈನ್ ಮ್ಯಾನ್

ದೀಪಾವಳಿ ಸ್ಪೆಷಲ್

  • Eco friendly ಪಟಾಕಿ ಹೊಡೀರಿ ಅಂದ್ರೆ, Echo friendly ಪಟಾಕಿ ಹೊಡೆದು ಹಬ್ಬ ಮುಗಿಸ್ತಾರೆ ನಮ್ ಜನ.
    ನಡುರಾತ್ರಿ ಜ್ಞಾನೋದಯ ನಿಮ್ಮ ಕನಸುಗಳನ್ನು Archive ಮಾಡಬೇಡಿ, Archive ಮಾಡಿ ನಮ್ಮವರಿಗೆ ಟಿಕೆಟ್ ಕೊಡದಿದ್ರೆ
    ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ ಅನ್ನೋದು ಯಾವ ಮಠದ ಸ್ವಾಮೀಜಿ?
  • ‘ಮುತ್ತಿಗೆ ಮಠ’
    ಇಂದಿನ ರಾಜಕಾರಣದಲ್ಲಿ ಟಿಕೆಟ್ ಸಿಗೋಕೆ ಬರೀ ಸಜ್ಜನ ಆಗಿದ್ರೆ ಆಗಲ್ಲ
  • ಅವ್ರ್ ‘ಯಾವ್ ಜನ’ ಅನ್ನೋದೂ ಮುಖ್ಯ ಆಗುತ್ತೆ.
    ರಾಜಕೀಯ ರಹಸ್ಯ
  • ‘ಎಕ್ಸ್’ ಸಿಎಂಗಳಾದ ಮೇಲೂ‌ ಅವರಿಗೆ ‘ಝೆಡ್’ ಸೆಕ್ಯುರಿಟಿ ಕೊಟ್ರೂ ನಮ್ ಜನ ‘ವೈ?’ ಅಂತ ಕೇಳಲ್ಲ.

  • ಅಮೃತ ಕುಡಿದೂ ಸಾಯೋ ಕೆಪ್ಯಾಸಿಟಿ ಇರೋದು ಯಾರಿಗೆ?
  • ಸೌತ್ ಆಫ್ರಿಕಾ ಕ್ರಿಕೆಟ್ ಟೀಮ್‌ನ ಪ್ಲೇಯರ್‌ಗಳಿಗೆ
    ಕುಡುಕರ ಪರ ಹೋರಾಟಕ್ಕೆ ಬೇಕಿರೋದು
  • ‘ಸ್ಪಿರಿಟ್’
    ನೀರಿನಲ್ಲಿ ಮುಳುಗುತ್ತಿರುವ ಜನರನ್ನು ದಡ ಸೇರಿಸಲು ಹರಸಾಹಸ ಮಾಡುವ ಅಂಬಿಗ
  • ‘ಹುಟ್ಟು’ ಹೋರಾಟಗಾರ
    ನಾನು ಬೀಡಿ ಸೇದೋದು ಬಿಟ್ಟಿದೀನಿ ಅಂತ ಸುಳ್ಳು ಹೇಳುವವರದು
  • ‘ಬೀಡಿ’ ನಾಟಕ
    ಸಿಗರೇಟ್ ಬಿಟ್ಟೆ ಅಂತ ಹೇಳಿದ್ಯ ಮತ್ತೆ ಸೇದ್ತಾ ಇದ್ದೀಯಾ?
  • Sorry I said it on a ‘lighter’ note

ಇದನ್ನೂ ಓದಿ: #Harihara