ಮುಂಬಯಿ: ನವೆಂಬರ್ 22ರಂದು ಪರ್ತ್‌ನಲ್ಲಿ(IND vs AUS) ಆರಂಭವಾಗಲಿರುವ ಬಾರ್ಡರ್-ಗಾವಸ್ಕರ್ ಟ್ರೋಫಿ(border-gavaskar trophy) ಸರಣಿಯ ಮೊದಲ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. 2ನೇ ಮಗುವಿಗೆ ತಂದೆಯಾದ ಕಾರಣ ರೋಹಿತ್ ಮೊದಲ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ವರದಿಯಾದ ಪ್ರಕಾರ ರೋಹಿತ್ ಸರಣಿಯ ಆರಂಭಿಕ ಪಂದ್ಯದ ಅಲಭ್ಯತೆಯ ಬಗ್ಗೆ ಬಿಸಿಸಿಐ ಮತ್ತು ಆಯ್ಕೆಗಾರರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಶನಿವಾರದಂದು ರೋಹಿತ್ ತಮ್ಮ ಸಾಮಾಜಿಕ ಜಾಲತಾಣದಲಿ ಪೋಸ್ಟ್ ಹಾಕುವ ಮೂಲಕ ಎರಡನೇ ಮಗು ಜನಿಸಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದರು. ರೋಹಿತ್ ಭಾರತ ತಂಡದೊಂದಿಗೆ ಆಸೀಸ್‌ಗೆ ಪ್ರಯಾಣಿಸದಿದ್ದರೂ ಕೂಡ ಮುಂಬೈನಲ್ಲೇ ಇದ್ದುಕೊಂಡು ಅಭ್ಯಾಸ ನಡೆಸಿದ್ದರು. ಮಗು ಜನನದ ಬಳಿಕ ಅವರು ಆಸೀಸ್‌ಗೆ ಪ್ರಯಾಣಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ದ್ವಿತೀಯ ಪಂದ್ಯದ ವೇಳೆ ತಂಡ ಸೇರಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ Ranji Trophy: ಕರ್ನಾಟಕ-ಉತ್ತರ ಪ್ರದೇಶ ಪಂದ್ಯ ಡ್ರಾ, ಕನ್ನಡಿಗರಿಗೆ ಮೂರು ಅಂಕ!
ರಾಹುಲ್-ಗಿಲ್ ಅನುಮಾನ
ಕೆ.ಎಲ್ ರಾಹುಲ್ ಹಾಗೂ ಶುಭಮಾನ್ ಗಿಲ್‌ಗೆ ಗಾಯದ ಸಮಸ್ಯೆ ಎದುರಾಗಿದೆ. ಉಭಯ ಆಟಗಾರರು ಭಾರತ ಎ ಎದುರಿನ ಅಭ್ಯಾಸ ಪಂದ್ಯವನ್ನಾಡುವ ವೇಳೆ ಗಾಯಗೊಂಡಿದ್ದರು. ಮೂಲಗಳ ಪ್ರಕಾರ ಇಬ್ಬರು ಆಟಗಾರರು ಮೊದಲ ಪಂದ್ಯಕ್ಕೆ ಅಲಭ್ಯರಾಗುವುದು ಖಚಿತ ಎನ್ನಲಾಗಿದೆ. ರೋಹಿತ್ ಕೂಡ ಅಲಭ್ಯರಾದರೆ ಭಾರತ ಮೊದಲ ಪಂದ್ಯಕ್ಕೆ ಮೂವರು ಅನುಭವಿ ಆಟಗಾರರನ್ನು ಕಳೆದುಕೊಳ್ಳಲಿದೆ. ಮೂವರ ಬದಲಿಗೆ ಯಾರೆಲ್ಲ ಕಣಕ್ಕಿಳಿಯಬಹುದು ಎಂಬ ಕುತೂಹಲ ಸಹಜ. ವಿರಾಟ್ ಕೊಹ್ಲಿ ಕೂಡ ಗಾಯದ ಭೀತಿ ಎದುರಿಸುತ್ತಿದ್ದಾರೆ.
ಅವರ ಹೆಬ್ಬೆರಳು ಮುರಿತಕ್ಕೊಳಗಾಗಿದೆ. ವೈದ್ಯಕೀಯ ತಂಡದಿಂದ ಚಿಕಿತ್ಸೆ ಪಡೆದ ನಂತರ ಸ್ಕ್ಯಾನಿಂಗ್‌ಗೆ ಒಳಗಾದರು. ಸ್ಕ್ಯಾನಿಂಗ್‌ನಲ್ಲಿ ಹೆಬ್ಬೆರಳು ಮುರಿದಿರುವುದು ಗೊತ್ತಾಗಿದೆ. ಕೆ.ಎಲ್.ರಾಹುಲ್‌ಗೆ ಶುಕ್ರವಾರ ಮೊಣಕೈಗೆ ಚೆಂಡು ಬಡಿದು ಅಭ್ಯಾಸ ಮುಂದುವರಿಸಲು ಸಾಧ್ಯವಾಗಿರಲಿಲ್ಲ.
ಅಭಿಮನ್ಯು ಈಶ್ವರನ್ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಜತೆಗೆ ಇನಿಂಗ್ಸ್ ಆರಂಭಿಸಿದ ಅನುಭವ ಹೊಂದಿಲ್ಲ. ಸರ್ಫರಾಜ್ ಖಾನ್, ಜುರೇಲ್‌ಗೂ ಆಸ್ಟ್ರೇಲಿಯಾ ಪಿಚ್‌ನಲ್ಲಿ ಆಡಿದ ಅನುಭವ ಇಲ್ಲ. ಒಟ್ಟಾರೆ ಭಾರತಕ್ಕೆ ಗಾಯದ್ದೇ ಚಿಂತೆಯಾಗಿದೆ. ರೋಹಿತ್ ಅಲಭ್ಯರಾದರೆ ತಂಡವನ್ನು ಜಸ್‌ಪ್ರೀತ್ ಬುಮ್ರಾ ಮುನ್ನಡೆಸಲಿದ್ದಾರೆ. ಅನುಭವಿ ಆಟಗಾರರ ಅಲಭ್ಯತೆಯಲ್ಲಿಯೂ ಬುಮ್ರಾ ಮೊದಲ ಪಂದ್ಯದಲ್ಲಿ ಗೆಲುವು ಕಂಡರೆ ಅವರು ಭಾರತದ ಮುಂದಿನ ನಾಯಕನಾಗುವುದರಲ್ಲಿ ಯಾವುದೇ ಅನುಮಾನ ಬೇಡ.