ಜೆರುಸಲೆಮ್ : ಇಸ್ರೇಲ್ ಹಾಗೂ ಹೆಜ್ಬುಲ್ಲಾ(Israel-Hezbollah war) ನಡುವಿನ ಕದನ ತಾರಕ್ಕೇರಿದೆ. ಈ ನಡುವೆ ಉತ್ತರ ಇಸ್ರೇಲ್ನ ಸಿಸೇರಿಯಾ ಪಟ್ಟಣದಲ್ಲಿರುವ ಇಸ್ರೇಲಿ (Israel PM) ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಮನೆಯ ಮೇಲೆ ಶನಿವಾರ ಫ್ಲಾಶ್ ಬಾಂಬ್ ದಾಳಿ (flash bomb attack ) ನಡೆದಿದೆ ಎಂದು ತಿಳಿದು ಬಂದಿದೆ.
ಕೈಸ್ರಾದಲ್ಲಿರುವ ಅವರ ನಿವಾಸದ ಬಳಿ ಎರಡು ರಾಕೆಟ್ಗಳು ಬಿದ್ದಿವೆ. ದೇಶದ ಭದ್ರತಾ ಸಂಸ್ಥೆ ಈ ಘಟನೆಯನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿದೆ. ಬಾಂಬ್ ಬಿದ್ದ ಸಮಯದಲ್ಲಿ ನೆತನ್ಯಾಹು ಅಥವಾ ಅವರ ಕುಟುಂಬದವರು ನಿವಾಸದಲ್ಲಿರಲಿಲ್ಲ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಇಸ್ರೇಲ್ನ ಉನ್ನತ ಮಟ್ಟದ ಅಧಿಕಾರಿಗಳು ಹೇಳಿದ್ದಾರೆ.
Two Flares were fired earlier tonight at a Guard Shack outside the Home of Israeli Prime Minister Benjamin Netanyahu, in the Northern Town of Caesarea, the same Home that a Hezbollah Drone struck in October. Both Israeli Police and Shin Bet are Investigating. pic.twitter.com/0BfYEaN4Bq
— OSINTdefender (@sentdefender) November 16, 2024
ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಹಿಂಸಾಚಾರ ಹೆಚ್ಚಳವಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ, ಇಂತಹ ಕೃತ್ಯ ಮುಂದುವರಿದರೆ ಸುಮ್ಮನಿರೋದಿಲ್ಲ ವಿರುದ್ಧ ವಿರೋಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಸ್ರೇಲಿ ಅಧ್ಯಕ್ಷ ಐಸಾಕ್ ಹೆರ್ಜೋಗ್ ಅವರು ‘ನಾನು ಈಗ ಶಿನ್ ಬೆಟ್ನ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ ಮತ್ತು ಘಟನೆಗೆ ಕಾರಣರಾದವರನ್ನು ತ್ವರಿತವಾಗಿ ತನಿಖೆ ಮಾಡುವ ಮತ್ತು ಅದಕ್ಕೆ ತಕ್ಕ ಪಾಠ ಕಲಿಸುವ ತುರ್ತು ಅಗತ್ಯವನ್ನು ವ್ಯಕ್ತಪಡಿಸಿದ್ದೇನೆ ಎಂದು ಹೆರ್ಜೋಗ್ ತಿಳಿಸಿದ್ದಾರೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ರಕ್ಷಣಾ ಸಚಿವ ಘಟನೆಯ ಬಗ್ಗೆ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: Randhir Jaiswal: ಇಸ್ರೇಲ್ನಲ್ಲಿರುವ ಭಾರತೀಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ; ವಿದೇಶಾಂಗ ಸಚಿವಾಲಯ
ಈ ಘಟನೆಗೂ ಮುನ್ನ ಕಳೆದ ತಿಂಗಳು ಅಕ್ಟೋಬರ್ 19 ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಮನೆಯ ಮೇಲೆ ಮೊದಲ ಬಾರಿಗೆ ದಾಳಿ ನಡೆಸಲಾಗಿತ್ತು, ಹೆಜ್ಬುಲ್ಲಾ ನಡೆಸಿದ ಈ ವಿಫಲ ದಾಳಿ ವಿರುದ್ಧ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದಕ್ಕೆ ತಕ್ಕ ಉತ್ತರ ಕೊಟ್ಟೇ ಕೊಡುತ್ತೇವೆ ಎಂದು ವಾರ್ನಿಂಗ್ ನೀಡಿದ್ದರು.