Sunday, 17th November 2024

Navneet Rana : ಬಿಜೆಪಿ ಫೈರ್‌ ಬ್ರಾಂಡ್‌ ನವನೀತ್ ರಾಣಾ ಮೇಲೆ ಕುರ್ಚಿ ಎಸೆದು ಹಲ್ಲೆಗೆ ಯತ್ನ! ವಿಡಿಯೊ ಇದೆ

Navneet Rana

ಮುಂಬೈ: ಅಮರಾವತಿಯ ಮಾಜಿ ಸಂಸದೆ ಹಾಗೂ ಬಿಜೆಪಿ ನಾಯಕಿ (Bjp Leader) ನವನೀತ್ ರಾಣಾ ( Navneet Rana ) ಅವರು ಶನಿವಾರ ಅಮರಾವತಿಯ ದರ್ಯಾಪುರ ತಾಲೂಕಿನಲ್ಲಿ ಚುನಾವಣಾ ಪ್ರಚಾರ (Maharashtra Election) ನಡೆಸುತ್ತಿದ್ದ ಸಂದರ್ಭದಲ್ಲಿ ಗಲಾಟೆ ನಡೆದು ಕೆಲವು ಕಿಡಿಗೇಡಿಗಳು ಅವರ ಮೇಲೆ ಕುರ್ಚಿ ಎಸೆದು ದಾಂಧಲೆ ಎಬ್ಬಿಸಿದ್ದಾರೆ. ಇನ್ನು ನವನೀತ್‌ ರಾಣಾ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಅಮರಾವತಿಯ ಮಾಜಿ ಸಂಸದೆಯಾಗಿದ್ದ ನವನೀತ್ ರಾಣಾ ಮುಂಬರಲಿರುವ ಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿ ಅರುಣ್ ಬಂಡಿಲೆ ಪರ ಪ್ರಚಾರ ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಭೆ ನಡೆಯುತ್ತಿದ್ದಾಗ ಕೆಲವು ಜನ ಬಂದು ಗಲಾಟೆ ಪ್ರಾರಂಭಿಸಿದ್ದರು. ನಂತರ ಮಾಜಿ ಸಂಸದರ ಮೇಲೆ ಕುರ್ಚಿಗಳನ್ನು ಎಸೆದಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಅಕ್ಟೋಬರ್‌ನಲ್ಲಿ ನವನೀತ್ ರಾಣಾ ಅವರಿಗೆ ₹10 ಕೋಟಿ ನೀಡುವಂತೆ ಬೆದರಿಕೆ ಹಾಕಿ ಪತ್ರ ಬಂದಿತ್ತು. ಬೆದರಿಕೆ ಹಾಕಿ ಹಣದ ಬೇಡಿಕೆಯನ್ನು ಸಲ್ಲಿಸಿದ ಅಮೀರ್ ಎಂಬ ವ್ಯಕ್ತಿ ಸ್ಪೀಡ್ ಪೋಸ್ಟ್ ಮೂಲಕ ಪತ್ರವನ್ನು ಕಳುಹಿಸಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಣಾ ಅವರ ಆಪ್ತ ಕಾರ್ಯದರ್ಶಿ ವಿನೋದ್ ಗುಹೆ ಅವರು ಅಮರಾವತಿಯ ರಾಜಪೇತ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ಸಲ್ಲಿಸಿದ್ದರು. ಅವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಇದನ್ನೂ ಓದಿ: Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ

ಯಾರು ಈ ನವನೀತ್‌ ರಾಣಾ ?

ಸದ್ಯ ಬಿಜೆಪಿಯ ಫೈರ್‌ ಬ್ರಾಂಡ್ ನಾಯಕಿ ಎಂದೇ ಹೆಸರುವಾಸಿಯಾಗಿರುವ ನವನೀತ್‌ ರಾಣಾ ಮೊದಲು ಮಹಾರಾಷ್ಟ್ರದ ಅಮರಾವತಿ ಲೋಕಸಭಾ ಕ್ಷೇತ್ರದಲ್ಲಿ 2014ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(NCP) ಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. 2019ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ನಂತರ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು, ಆದರೆ ಸೋಲು ಕಂಡಿದ್ದರು.