ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಕಸ್ಟಮರ್ ಕೇರ್ ನಂಬರ್ಗೆ ನಿನ್ನೆ ಬಾಂಬ್ ಬೆದರಿಕೆ(Bomb Threat) ಬಂದಿದ್ದು, ಈ ಸಂದರ್ಭದಲ್ಲಿ ಕರೆ ಮಾಡಿದ ದುಷ್ಕರ್ಮಿ “ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಸಿಇಒ” ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿದ್ದು, ಸೆಂಟ್ರಲ್ ಬ್ಯಾಂಕ್ ಅನ್ನು ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ತಿಳಿಸಿದ್ದಾರೆ. ಅವರು ನಿಷೇಧಿತ ಗುಂಪಿನ “ಸಿಇಒ” ಎಂದು ಹೇಳಿಕೊಂಡಿದ್ದಾರೆ ಮತ್ತು ಬೆದರಿಕೆಯನ್ನು ನೀಡುವ ಮೊದಲು ಫೋನ್ನಲ್ಲಿ ಹಾಡನ್ನು ಕೂಡ ಹಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕರೆ ಮಾಡಿದವರ ಪತ್ತೆಗೆ ಯತ್ನಿಸುತ್ತಿದ್ದಾರೆ. ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಗುಂಪು 2008ರಲ್ಲಿ ಮುಂಬೈ ದಾಳಿಯನ್ನು ನಡೆಸಿತ್ತು. ಇದು ಭಾರತದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗಳಲ್ಲಿ ಒಂದಾಗಿದೆ.
Maharashtra | A case for a hoax call has been registered after the customer care department of the Reserve Bank of India received a threat call: Mumbai Police
— ANI (@ANI) November 17, 2024
ಕಳೆದ ಎರಡು ತಿಂಗಳಿನಿಂದ ನೂರಾರು ವಿಮಾನಗಳಿಗೆ, ಹೊಟೇಲ್ಗಳು, ಶಾಲೆಗಳಿಗೆ ಇಂತಹದ್ದೇ ಬೆದರಿಕೆ ಕರೆಗಳು ಬರುತ್ತಲೇ ಇವೆ. ಕಳೆದ ವಾರ ಪ್ರಧಾನಿ ಮಂತ್ರಿ ಕಚೇರಿ (PMO), ಉನ್ನತ ಸರ್ಕಾರಿ ಅಧಿಕಾರಿಗಳು ಹಾಗೂ ದೇಶದ ವಿವಿಧ ವಿಮಾನ ಮತ್ತು ರೈಲುಗಳನ್ನು ಗುರಿಯಾಗಿಟ್ಟುಕೊಂಡು ನಕಲಿ ಬಾಂಬ್ ಬೆದರಿಕೆ ಹಾಕಿ ಸುಮಾರು 100 ಇಮೇಲ್ಗಳನ್ನು ಕಳುಹಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬನನ್ನು ಅರೆಸ್ಟ್ ಮಾಡಲಾಗಿತ್ತು. ಮಹಾರಾಷ್ಟ್ರದ ಮಾವೋವಾದಿ ಪೀಡಿತ ಜಿಲ್ಲೆಯಾದ ಗೊಂಡಿಯಾದ 35 ವರ್ಷದ ಜಗದೀಶ್ ಯುಕೇಯ್ ಎಂಬಾತನನ್ನು ನಾಗ್ಪುರ ಪೊಲೀಸರು ಬಂಧಿಸಿದ್ದರು.
ಈತ ನಕಲಿ ಮೇಲ್ ಐಡಿ ಸೃಷ್ಟಿಸಿ ಪ್ರಧಾನಿ ಕಚೇರಿ ಹಾಗೂ ಹಲವು ಕಡೆ ಹುಸಿ ಬಾಂಬ್ ಬೆದರಿಕೆ ಹಾಕಿದ್ದ. ಸುಮಾರು 100 ಕ್ಕೂ ಹೆಚ್ಚು ಬಾರಿ ಮೇಲ್ ಕಳುಹಿಸಿದ್ದ ಎಂಬುದು ತಿಳಿದು ಬಂದಿದೆ. ಆತ ಅತಂಕ್ವಾದ್-ಏಕ್ ತುಫಾನಿ ರಾಕ್ಷಸ್ ಎಂಬ ಪುಸ್ತಕವನ್ನು ಬರೆದಿದ್ದು ಅದನ್ನು ಪ್ರಕಟಿಸುವಂತೆ ಮೊದಲು ಪ್ರಧಾನಿ ಕಚೇರಿಗೆ ಮೇಲ್ ಕಳುಹಿಸುತ್ತಿದ್ದ. ಹಲವು ಬಾರಿ ಅದೇ ವಿಷಯಕ್ಕೆ ಸಂಬಂಧಿಸಿ ಮೇಲ್ ಮಾಡಿದ್ದ. ಆದರೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬರದೆ ಇದ್ದಾಗ ಹತಾಶನಾಗಿ ಹುಸಿ ಬೆದರಿಕೆ ಹಾಕಲು ಶುರು ಮಾಡಿದ ಎಂದು ತನಿಖೆಯಲ್ಲಿ ಬಹಿರಂಗಗೊಂಡಿದೆ.
ನಾಗ್ಪುರದ ಹೆಚ್ಚುವರಿ ಸಿಪಿ, ಸಂಜಯ್ ಪಾಟೀಲ್ ಪ್ರಕಾರ ಮಾತನಾಡಿ ಯುಕೇಯ್ ಬರೆದ ಪುಸ್ತಕವು ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿದ್ದು, ಆನ್ಲೈನ್ನಲ್ಲಿ ಸುಲಭವಾಗಿ ಲಭ್ಯವಿರುವ ಭಯೋತ್ಪಾದಕ ಸಿದ್ಧಾಂತಗಳ ಮೂಲ ಸಂಕಲನವಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ ಕೂಡ ಈತ ಹಲವು ಮೇಲ್ ಕಳುಹಿಸಿದ್ದು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಯವುದೇ ಕೇಸ್ ದಾಖಲಾಗಿರಲಿಲ್ಲ. ಈಗ ಆತನ ಸಂಪೂರ್ಣ ವಿಚಾರಣೆ ನಡೆಸಲಾಗುತ್ತಿದೆ.
ಆತ ಇತ್ತೀಚೆಗೆ ಕಳುಹಿಸಿದ್ದ ಮೇಲ್ನಲ್ಲಿ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಎಚ್ಚರಿಸಿದ್ದ. ಅಮೆರಿಕದಿಂದ ಬಂದ ಸಂದೇಶದ ರೀತಿಯಲ್ಲಿ ಬಿಂಬಿಸಲು ಅಮೆರಿಕ ಇಂಗ್ಲೀಷ್ ಬಳಕೆ ಮಾಡಿದ್ದ. ಇದೀಗ ಪೊಲೀಸ್ ತನಿಖೆ ನಡೆಯುತ್ತಿದ್ದು, ಆತ ಬಳಸಿದ ವೆಬ್ ಸೈಟ್ ಹಾಗೂ ಡಿಜಿಟಲ್ ಉಪಕರಣಗಳು ಸೇರಿ ಆತನ ಸಂಪೂರ್ಣ ಮೊಬೈಲ್ ಹಿಸ್ಟರಿಯನ್ನು ತೆಗಿಸಲಾಗಿದೆ. “ನಾವು ಅವರ ಕರೆ ವಿವರಗಳ ದಾಖಲೆಗಳು ಮತ್ತು ಲ್ಯಾಪ್ಟಾಪ್ಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ. ಅಲ್ಲದೇ ಆತನ ಬ್ಯಾಂಕ್ ಖಾತೆಗಳು ಮತ್ತು ಪರಿಶೀಲಿಸಲಾಗುತ್ತಿದೆ”ಪೊಲೀಸ್ ಕಮಿಷನರ್ ರವೀಂದರ್ ಸಿಂಗಲ್ ಎಂದು ಹೇಳಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ಇಮೇಲ್ ಆರೋಪಿ ಇಮೇಲ್ ಕಳುಹಿಸಿದ್ದ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Bomb threat : ವಿಮಾನಗಳ ಮೇಲೆ ಬಾಂಬ್ ಬೆದರಿಕೆ ನಿಯಂತ್ರಣಕ್ಕೆ ಕೃತಕ ಬುದ್ಧಿಮತ್ತೆ ಬಳಕೆ