ಮುಂಬೈ : ಬಾಲಿವುಡ್ ನಟಿ ಸ್ವರಾ ಭಾಸ್ಕರ್ (Swara Bhasker) ಅವರು ಶನಿವಾರ ತನ್ನ ಪತಿ ಫಹಾದ್ ಅಹ್ಮದ್ (Fahad Ahmad ) ಅವರೊಂದಿಗೆ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಇಸ್ಲಾಮಿಕ್ ವ್ಯಕ್ತಿ ಮೌಲಾನಾ ಸಜ್ಜದ್ ನೊಮಾನಿ (Maulana Sajjad Nomani) ಅವರನ್ನು ಭೇಟಿಯಾಗಿದ್ದಾರೆ. ನಟಿಯ ಈ ಭೇಟಿಯ ಬಗ್ಗೆ ಸಾಕಷ್ಟು ಟೀಕೆಗಳು ಎದುರಾಗುತ್ತಿವೆ. ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಶಾಲಾ-ಕಾಲೇಜುಗಳಿಗೆ ಕಳುಹಿಸುವುದು ‘ಹರಾಮ್’ ಎಂದು ಮೌಲಾನಾ ಸಜ್ಜದ್ ನೊಮಾನಿ ಹೇಳಿದ್ದರು. ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ಎನ್‌ಸಿಪಿ (ಶರದ್ ಪವಾರ್) ಪಕ್ಷದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ (Maharashtra Election) ಸ್ಪರ್ಧಿಸುತ್ತಿರುವ ತನ್ನ ಪತಿ ಫಹಾದ್ ಅವರೊಂದಿಗೆ ಸ್ವರಾ ಮೌಲಾನಾ ಅವರನ್ನು ಶನಿವಾರ ಅವರ ಕಚೇರಿಯಲ್ಲಿ ಭೇಟಿಯಾದರು. “ಮೌಲಾನಾ ಸಜ್ಜದ್ ನೊಮಾನಿ ಅವರು ನಮಗೆ ಸಾಕಷ್ಟು ಆಶೀರ್ವಾದಗಳನ್ನು ನೀಡಿದ್ದಾರೆ ಎಂದು ಫಹಾದ್ ಮೌಲಾನಾ ಜತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
जनाब हज़रत मौलाना सज्जाद नौमानी साहब की ख़िदमत में हाज़िर हुए और उन्होंने हमे खूब दुआओं से नवाज़ा pic.twitter.com/5P7S3OIaJj
— Fahad Ahmad (@FahadZirarAhmad) November 16, 2024
ಫೋಟೋದಲ್ಲಿ ಸ್ವರಾ ಸಲ್ವಾರ್ ಸೂಟ್ ಧರಿಸಿ ತನ್ನ ತಲೆಯನ್ನು ದುಪಟ್ಟಾದಿಂದ ಮುಚ್ಚಿಕೊಂಡಿದ್ದಾರೆ. ಒಂದು ಕಡೆ ಮಹಿಳೆಯ ಹಕ್ಕನ್ನು ಪ್ರತಿಪಾದಿಸುವ ಸ್ವರಾ ಹಾಗೂ ಇನ್ನೊಂದೆಡೆ ಸದಾ ಮಹಿಳೆಯರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುವ ಮೌಲಾನ ಅವರ ಫೋಟೋ ನೋಡಿದ ನೆಟ್ಟಿಗರಿಂದ ನಾನಾ ರೀತಿಯ ಟೀಕೆಗಳು ಬರುತ್ತಿವೆ.
ಮುಂಬರಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಶರದ್ ಪವಾರ್ ಎನ್‌ಸಿಪಿಯಿಂದ ಸ್ವರಾ ಭಾಸ್ಕರ್ ಪತಿ ಫಹಾದ್ ಅಹ್ಮದ್ ಸ್ಪರ್ಧೆ ಮಾಡುತ್ತಿದ್ದಾರೆ. ಪತಿಯ ಚುನಾವಣೆಯ ಪ್ರಚಾರವನ್ನು ಬೆಂಬಲಿಸಲು ಸಾರ್ವಜನಿಕ ದೇಣಿಗೆಗಳನ್ನು ಕೋರಿ ಆನ್‌ಲೈನ್ ಕ್ರೌಡ್ ಫಂಡಿಂಗ್ ಪ್ರಯತ್ನವನ್ನು ಸ್ವರಾ ಪ್ರಾರಂಭಿಸಿದ್ದಾರೆ . ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಕ್ರೌಡ್‌ಫಂಡಿಂಗ್ ಅಭಿಯಾನದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡ ಸ್ವರಾ “ನನ್ನ ಪತಿ ಫಹಾದ್ ಅಹ್ಮದ್ ಅವರು ಅನುಶಕ್ತಿ ನಗರದಿಂದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇದು ಅವರ ಕ್ರೌಡ್‌ಫಂಡಿಂಗ್ ಅಭಿಯಾನವಾಗಿದೆ. ದಯವಿಟ್ಟು ರಾಜಕೀಯದಲ್ಲಿ ಬದ್ಧ, ಪ್ರಗತಿಪರ, ವಿದ್ಯಾವಂತ ಯುವಕನನ್ನು ಬೆಂಬಲಿಸಲು ದೇಣಿಗೆ ನೀಡಿ” ಎಂದು ಬರೆದುಕೊಂಡಿದ್ದಾರೆ.
My husband @FahadZirarAhmad Fahad Ahmad is contesting the Maharashtra Assembly Elections from Anushakti Nagar, Mumbai. This is his crowdfunding campaign.
— Swara Bhasker (@ReallySwara) November 5, 2024
Please donate to support committed, progressive, educated young people in politics! 🧡✨https://t.co/2eGX7HJZUl
ಇದನ್ನೂ ಓದಿ : Maharashtra Elections 2024 : ಸ್ವರ ಭಾಸ್ಕರ್ ಪತಿ ಫಹಾದ್‌ಗೆ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಟಿಕೆಟ್