Sunday, 17th November 2024

Viral Video: ಹೈ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ ಏರಿ ಮಹಿಳೆಯ ಹೈಡ್ರಾಮಾ! ವಿಡಿಯೊ ಇದೆ

Viral Video

ಉತಾಹ್‌: ಮಹಿಳೆಯೊಬ್ಬಳು ಹೈ ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ (High voltage transformer) ಏರಿ ಆತಂಕ ಸೃಷ್ಟಿಸಿದ ಘಟನೆ ಅಮೆರಿಕದ ಉತಾಹ್‌ನಲ್ಲಿ (Utah in US) ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವೈರಲ್ (Viral Video) ಆಗಿದೆ. ಮಹಿಳೆಯ ಈ ನಾಟಕೀಯ ವರ್ತನೆಯಿಂದಾಗಿ ಸುಮಾರು 800ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತ ಮಾಡಲಾಗಿದೆ.

ಉತಾಹ್‌ನ ಸಾಲ್ಟ್ ಲೇಕ್ ಸಿಟಿಯಲ್ಲಿ ಮಹಿಳೆಯೊಬ್ಬರು ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದ ಪರಿಣಾಮ 800ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಮಹಿಳೆಯನ್ನು ಟ್ರಾನ್ಸ್‌ಫಾರ್ಮರ್‌ನಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಿದ್ದಾರೆ.

ಸಾಲ್ಟ್ ಲೇಕ್ ಸಿಟಿಯ ಗ್ಲಾಡಿಯೋಲಾ ಸ್ಟ್ರೀಟ್ ಮತ್ತು ಡಿಕೇಡ್ ಡ್ರೈವ್ ಬಳಿ ಮಹಿಳೆಯೊಬ್ಬರು ಹೈ-ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗೆ ಹತ್ತಿದ್ದು, ಕೆಲವು ಗಂಟೆಗಳ ಕಾಲ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಮಹಿಳೆ ಟ್ರಾನ್ಸ್‌ಫಾರ್ಮರ್ ಹತ್ತಿದ ಮಾಹಿತಿ ತಿಳಿದು ಬಂದ ಪೊಲೀಸರು ಆಕೆಯನ್ನು ಕೆಳಗೆ ಇಳಿಸಲು ಹರಸಾಹಸ ಪಟ್ಟರು.

ಈ ಕುರಿತು ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆ ಹೈ-ವೋಲ್ಟೇಜ್ ಘಟಕದ ಉಪಕರಣಗಳ ಮೇಲೆ ನಿಂತಿರುವುದನ್ನು ಕಾಣಬಹುದು. ಬಳಿಕ ಆಕೆ ತಂತಿಯೊಂದರಲ್ಲಿ ನೇತಾಡುತ್ತಿದ್ದು, ಪೊಲೀಸರು ಆಕೆಯ ಮನವೊಲಿಸಿ ಇಳಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಸಾಕಷ್ಟು ಮಂದಿ ಸೇರಿ ಆಕೆಯನ್ನು ಕೆಳಗಿಳಿಸಲು ಪ್ರಯತ್ನಿಸುತ್ತಿದ್ದರು. ತುರ್ತು ಪ್ರತಿಕ್ರಿಯೆ ತಂಡವು ಸ್ಥಳಕ್ಕೆ ಆಗಮಿಸಿ ಮಹಿಳೆಯ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದರು. ಮಹಿಳೆಯು ಅಪಾಯದಲ್ಲಿರುವುದನ್ನು ಎಲ್ಲರೂ ಗಮನಿಸುತ್ತಿದ್ದರು. ಆಕೆಯನ್ನು ಇಳಿಯುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದರು.

ಪರಿಸ್ಥಿತಿಯು ಹೆಚ್ಚು ತೀವ್ರವಾಗುತ್ತಿದ್ದಂತೆ ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಯನ್ನು ಕೆಳಗಿಳಿಸಲು ಇಟ್ಟಿದ್ದ ಚೆರ್ರಿ ಪಿಕ್ಕರ್‌ ಯಂತ್ರದೊಳಗೆ ಪ್ರವೇಶಿಸಲು ಆದೇಶಿಸಿದರು. ಮಹಿಳೆ ಕೇಳದೇ ಇದ್ದಾಗ ಅಧಿಕಾರಿಯು ಮಹಿಳೆಗೆ ನೋವು ಮಾಡುವ ಗುಂಡು ಹಾರಿಸಿದ್ದಾರೆ. ಇದರಿಂದ ಮಹಿಳೆ ನೋವಿನಿಂದ ಕುಸಿದು ಬಿದ್ದಿದ್ದು, ನಿಧಾನವಾಗಿ ಆಕೆಯನ್ನು ಚೆರ್ರಿ ಪಿಕರ್‌ಗೆ ಇಳಿಸಲಾಯಿತು. ನೋವಿನಿಂದ ಅಳುತ್ತಿದ್ದ ಆಕೆಯನ್ನು ಬಳಿಕ ಆಂಬ್ಯುಲೆನ್ಸ್ ಕರೆಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Crime News: ಚಿಕನ್ ತಂದ ವಿಚಾರಕ್ಕೆ ಗಲಾಟೆ; ನಾನ್‌ವೆಜ್‌ ಪ್ರಿಯ ಸಹೋದರನನ್ನು ಬರ್ಬರವಾಗಿ ಕೊಲೆಗೈದ ಕಿಡಿಗೇಡಿಗಳು

ಈ ಸಂದರ್ಭದಲ್ಲಿ ಮಹಿಳೆ, ಈ ಪ್ರಪಂಚವು ತನಗೆ ಅಥವಾ ಭವಿಷ್ಯದ ಮಕ್ಕಳಿಗೆ ಇನ್ನು ಮುಂದೆ ಸುರಕ್ಷಿತವಾಗಿಲ್ಲ ಎಂದು ಕೂಗುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಆಕೆ ಮಾನಸಿಕ ಖಿನ್ನತೆಗೊಳಗಾಗಿದ್ದು, ಹೀಗಾಗಿ ಆಕೆ ಈ ಕೃತ್ಯಕ್ಕೆ ಮುಂದಾಗಿದ್ದಾಳೆ ಎನ್ನಲಾಗಿದೆ.