ಸೂರತ್: ದುಬೈಗೆ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ದಂಧೆಯನ್ನು ಸೂರತ್ ಪೊಲೀಸರು ಭೇದಿಸಿದ್ದು, ಮೂವರನ್ನು ಅರೆಸ್ಟ್ ಮಾಡಿದ್ದಾರೆ(Cyber Crime). ಅಲ್ಲದೇ 281 ಬ್ಯಾಂಕ್ ಖಾತೆಗಳನ್ನು ಸ್ಥಗಿತ ಮಾಡಲಾಗಿದ್ದು, ಈ ಬ್ಯಾಂಕ್ ಖಾತೆಗಳ ಮೂಲಕ ದುಬೈಗೆ ಹಣವನ್ನು ವರ್ಗಾಯಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಖಚಿತಪಡಿಸಿದ್ದು, 281 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವುದರ ಜತೆಗೆ, ಹಲವಾರು ಪಾಸ್ಬುಕ್ಗಳು, ಡೆಬಿಟ್ ಕಾರ್ಡ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಈ ಸದಸ್ಯರ ವಿರುದ್ಧ ದೇಶಾದ್ಯಂತ ವಿವಿಧ ನಗರಗಳಲ್ಲಿ 210 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ಇದಲ್ಲದೆ, ಹೆಚ್ಚಿನ ಗ್ಯಾಂಗ್ ಸದಸ್ಯರು ತಮ್ಮ ಪೂರ್ಣ ಹೆಸರನ್ನು ಎಂದಿಗೂ ಬಹಿರಂಗಪಡಿಸಲಿಲ್ಲ ಮತ್ತು ಲಭ್ಯವಿರುವ ಮಾಹಿತಿಯ ಸಹಾಯದಿಂದ ಸದಸ್ಯರ ರೇಖಾಚಿತ್ರಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಆರೋಪಿಗಳನ್ನು ಸುಲಭ ರೀತಿಯಲ್ಲಿ ಪತ್ತೆಹಚ್ಚಲು ನಾವು ರೇಖಾಚಿತ್ರಗಳನ್ನು ದೂರುದಾರರೊಂದಿಗೆ ಹಂಚಿಕೊಳ್ಳಲು ನಾನು ಪೊಲೀಸರಿಗೆ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಅಕ್ಟೋಬರ್ 17 ರಂದು, ಗುಜರಾತ್ ಪೊಲೀಸರು ನಡೆಸಿದ ದಾಳಿಯಲ್ಲಿ ಸೈಬರ್ ಕ್ರೈಮ್ ಚಟುವಟಿಕೆಗಳ ಆರೋಪ ಹೊತ್ತಿರುವ ಸಫಿಯಾ ಮಂಜಿಲ್ ಕಟ್ಟಡದ ಮಾಲೀಕ ಮತ್ತು ಅವರ ಇಬ್ಬರು ಪುತ್ರರನ್ನು ಬಂಧಿಸಿದ್ದರು. ಪೊಲೀಸ್ ಕಮಿಷನರ್ ಅನುಪಮ್ ಸಿಂಗ್ ಗೆಹ್ಲೋಟ್ ಪ್ರಕಾರ, ಸ್ಪೆಷಲ್ ಆಪರೇಷನ್ ಗ್ರೂಪ್ ಈ ದಾಳಿಯನ್ನು ನಡೆಸಿತು ಮತ್ತು ಕಟ್ಟಡದ ಮಾಲೀಕರನ್ನು ಮಕ್ಬೂಲ್ (58) ಎಂದು ಗುರುತಿಸಲಾಗಿದೆ, ಆತನ ಇಬ್ಬರು ಮಕ್ಕಳೊಂದಿಗೆ ಕಾಸಿಫ್ (32) ಮತ್ತು ಮಜ್ (25) ಎಂದು ಗುರುತಿಸಲಾಗಿದೆ. .
ಈ ಸುದ್ದಿಯನ್ನೂ ಓದಿ: ₹ 15 ಕೋಟಿ ಮೌಲ್ಯದ ಡ್ರಗ್ಸ್ ವಶ
ಇನ್ನು ಎರಡು ದಿನಗಳ ಹಿಂದೆ ಡಿಜಿಟಲ್ ಬಂಧನ ದಂಧೆಯೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದರು. 72 ವರ್ಷದ ನಿವೃತ್ತ ಇಂಜಿನಿಯರ್ನ್ನು ಅವರ ಮನೆಯಲ್ಲಿ ಎಂಟು ಗಂಟೆಗಳ ಕಾಲ “ಡಿಜಿಟಲ್ ಬಂಧನ” (Digital Arrest) ದಲ್ಲಿ ಇರಿಸಿಕೊಂಡು 10 ಕೋಟಿ ರೂ. ವಂಚಿಸಿದ ಪ್ರಕರಣದ ದೆಹಲಿಯ ರೋಹಿಣಿ ನಗರದಲ್ಲಿ ನಡೆದಿದೆ. (Cyber Crime) ನಿವೃತ್ತ ಇಂಜಿನಿಯರ್ ತನ್ನ ಪತ್ನಿ ಜೊತೆ ರೋಹಿಣಿ ನಗರದಲ್ಲಿ ವಾಸವಿದ್ದಾರೆ. ಹಣ ಪಾವತಿಸಿ ಇಲ್ಲವೇ ಮಾದಕ ವಸ್ತು ಸಾಗಾಟ ಕೇಸ್ನಲ್ಲಿ ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಸೈಬರ್ ಖದೀಮರು ಅವರನ್ನು ಬೆದರಿಸಿದ್ದಾರೆ.
ನಿವೃತ್ತ ಇಂಜಿನಿಯರ್ ಹೇಳಿದ ಪ್ರಕಾರ ಸೈಬರ್ ಖದೀಮರು ತೈವಾನ್ನಿಂದ ನಿಮಗೆ ಪಾರ್ಸೆಲ್ ಬಂದಿದೆ ಅದನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆ ಹಿಡಿಯಲಾಗಿದೆ ಎಂದು ಹೇಳಿದ್ದರು. ನಂತರ ಮಾತನ್ನು ಮುಂದುವರಿಸಿದ ವ್ಯಕ್ತಿ ನಿಮ್ಮ ಹೆಸರಲ್ಲಿರುವ ಪಾರ್ಸೆಲ್ನಲ್ಲಿ ನಿಷೇಧಿತ ಡ್ರಗ್ಸ್ ಇದ್ದು, ಅದನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ತಡೆ ಹಿಡಿದಿದ್ದಾರೆ ನಿಮ್ಮ ಜತೆ ಕ್ರೈಂ ಬ್ರಾಂಚ್ನ ಸಿಬ್ಬಂದಿಯೊಬ್ಬರು ಮಾತನಾಡುತ್ತಾರೆ. ನೀವು ವಿಡಿಯೋ ಕಾಲ್ ಮೂಲಕ ಅವರ ಜತೆ ಮಾತನಾಡಿ ಎಂದು ಹೇಳಿದ್ದರು. ನಂತರ ವಿಡಿಯೋ ಕಾಲ್ ಮಾಡುವ ಆ್ಯಪ್ ಡೌನ್ಲೋಡ್ ಮಾಡಲು ಸೂಚನೆ ನೀಡಿದ್ದರು.
ನಂತರ ವಿಡಿಯೋ ಕಾಲ್ನಲ್ಲಿ ಮಾತನಾಡಿದ ಇಂಜಿನಿಯರ್ ಗಾಬರಿಯಾಗಿದ್ದಾರೆ. ಅವರನ್ನು ಎಂಟು ಗಂಟೆಗಳ ಕಾಲ ಫೋನ್ನಲ್ಲಿ ಮಾತನಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ನಿಮ್ಮನ್ನು ಡ್ರಗ್ಸ್ ಕೇಸ್ನಲ್ಲಿ ಬಂಧಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಸಂತ್ರಸ್ತರ ಮಕ್ಕಳು ವಿದೇಶದಲ್ಲಿದ್ದು ಹಣ ಕೊಡದಿದ್ದರೆ ಅವರ ಮೇಲೆ ಕೇಸ್ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಘಟನೆಯ ನಂತರ ಸಂತ್ರಸ್ತರು ಪೊಲೀಸರನ್ನು ದೂರು ನೀಡಿದ್ದಾರೆ. ತನಿಖೆ ಪ್ರಾರಂಭಿಸಿದ ಪೊಲೀಸರು ಅವರ ಖಾತೆಯಲ್ಲಿದ್ದ 60 ಲಕ್ಷ ರೂ. ಗಳನ್ನು ಸುರಕ್ಷಿತವಾಗಿಸಿದ್ದಾರೆ. ಘಟನೆ ಸಂಬಂಧ ಸೈಬರ್ ಬ್ರಾಂಚ್ನ ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ. ವಿದೇಶದಿಂದ ಕರೆ ಮಾಡಿ ವಂಚನೆ ನಡೆದಿರಬಹುದು ಎಂದು ಊಹಿಸಲಾಗಿದೆ.