ಹರಿಯಾಣ: ಯೂಟ್ಯೂಬ್ನಲ್ಲಿ (Youtube) ಬಾಂಬ್ ತಯಾರಿಕೆಯನ್ನು ಕಲಿತ (learn bomb-making on YouTube) 12ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಕಿಯೊಬ್ಬರ ಕುರ್ಚಿಯ ಕೆಳಗೆ ಅದನ್ನು ಇಟ್ಟು ಸ್ಪೋಟಿಸಿದ್ದು (Bomb Blast), ಆಘಾತಕಾರಿ ಘಟನೆ ವರದಿಯಾಗಿದೆ. ಹರಿಯಾಣದಲ್ಲಿಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಶಿಕ್ಷಕಿ ಅಪಾಯದಿಂದ ಪಾರಾಗಿದ್ದಾರೆ(Viral News).
12ನೇ ತರಗತಿಯ 13 ವಿದ್ಯಾರ್ಥಿಗಳು ಸೇರಿ ಯೂಟ್ಯೂಬ್ನಲ್ಲಿ ಬಾಂಬ್ ತಯಾರಿಕೆಯನ್ನು ಕಲಿತು ವಿಜ್ಞಾನ ಶಿಕ್ಷಕಿಯ ಕುರ್ಚಿಯ ಕೆಳಗೆ ಇಟ್ಟಿದ್ದಾರೆ. ಪಟಾಕಿಯಂತಹ ಬಾಂಬ್ ಅನ್ನು ಸ್ಫೋಟಿಸಿದ ವಿದ್ಯಾರ್ಥಿಗಳನ್ನು ಶಾಲೆಯಿಂದ ಅಮಾನತುಗೊಳಿಸಲಾಗಿದ್ದು, ಅವರು ಯೂಟ್ಯೂಬ್ ಸಹಾಯದಿಂದ ಸ್ಫೋಟಕಗಳನ್ನು ತಯಾರಿಸಲು ಕಲಿತಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಅದೃಷ್ಟವಶಾತ್ ಶಿಕ್ಷಕಿ ಅಪಾಯದಿಂದ ಪಾರಾಗಿದ್ದಾರೆ. ಶಿಕ್ಷಕಿಯು ವಿದ್ಯಾರ್ಥಿಗಳನ್ನು ನಿಂದಿಸಿದ್ದು, ಇದಕ್ಕೆ ಪ್ರತಿಯಾಗಿ ವಿದ್ಯಾರ್ಥಗಳ ತಂಡ ಪ್ರತಿಕಾರಕ್ಕೆ ಮುಂದಾಗಿತ್ತು. ಒಬ್ಬ ವಿದ್ಯಾರ್ಥಿಯು ತನ್ನ ಕುರ್ಚಿಯ ಕೆಳಗೆ ಪಟಾಕಿಯನ್ನು ಹೋಲುವ ಬಾಂಬ್ ಅನ್ನು ಇರಿಸಿದರೆ, ಮತ್ತೊಬ್ಬ ರಿಮೋಟ್ ಕಂಟ್ರೋಲ್ ಮೂಲಕ ಅದನ್ನು ಸ್ಪೋಟಿಸಿದ್ದರು.
ವಿದ್ಯಾರ್ಥಿಗಳು ಯೂಟ್ಯೂಬ್ನಲ್ಲಿ ಬಾಂಬ್ ತರಹದ ಕ್ರ್ಯಾಕರ್ ಅನ್ನು ತಯಾರಿಸಲು ಕಲಿತು ಅದನ್ನು ರಿಮೋಟ್ ಕಂಟ್ರೋಲ್ ಸಹಾಯದಿಂದ ಸ್ಪೋಟಿಸಿದರು. ಹರಿಯಾಣ ಶಿಕ್ಷಣ ಇಲಾಖೆಯು ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ 13 ವಿದ್ಯಾರ್ಥಿಗಳನ್ನು ಒಂದು ವಾರ ಅಮಾನತುಗೊಳಿಸಿದೆ. ಈ ಆತಂಕಕಾರಿ ಘಟನೆಯ ಅನಂತರ ಶಿಕ್ಷಣ ಇಲಾಖೆ ಅಧಿಕಾರಿಗಳು ಕೂಡಲೇ ಶಾಲೆಗೆ ಭೇಟಿ ನೀಡಿ ಕೂಲಂಕುಷವಾಗಿ ತನಿಖೆ ಆರಂಭಿಸಿದ್ದಾರೆ.
ಶಿಕ್ಷಕಿಯು ಕ್ಷಮಿಸಿದ್ದರಿಂದ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕಲಾಗಿಲ್ಲ. ಮಕ್ಕಳನ್ನು ಶಾಲೆಯಿಂದ ಹೊರಹಾಕುವ ಬಗ್ಗೆ ಚರ್ಚೆಗಳು ನಡೆದಿವೆ. ಆದರೆ ಪೋಷಕರು ಕ್ಷಮೆಯಾಚಿಸಿದರು ಮತ್ತು ಭವಿಷ್ಯದಲ್ಲಿ ವಿದ್ಯಾರ್ಥಿಗಳು ಈ ರೀತಿ ವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Viral Video: ಹೈ ವೋಲ್ಟೇಜ್ ಟ್ರಾನ್ಸ್ಫಾರ್ಮರ್ ಏರಿ ಮಹಿಳೆಯ ಹೈಡ್ರಾಮಾ! ವಿಡಿಯೊ ಇದೆ
ಘಟನೆಯ ಬಗ್ಗೆ ಗ್ರಾಮ ಪಂಚಾಯತ್ನಲ್ಲೂ ಸಭೆ ನಡೆಸಲಾಯಿತು. ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ವಿದ್ಯಾರ್ಥಿಗಳನ್ನು ಒಂದು ವಾರದವರೆಗೆ ಅಮಾನತುಗೊಳಿಸಲಾಗಿದ್ದು, ಮುಂದೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ನರೇಶ್ ಮೆಹ್ತಾ ತಿಳಿಸಿದ್ದಾರೆ.