Sunday, 17th November 2024

Viral Video: ಹೆರಿಗೆಗಾಗಿ ಕೆನಡಾಕ್ಕೆ ಹಾರುತ್ತಿದ್ದಾರೆ ಭಾರತೀಯ ಗರ್ಭಿಣಿಯರು; ಕಾರಣ ಏನು ಗೊತ್ತೆ?

Viral Video

ಒಟ್ಟಾವಾ: ಕೆನಡಾದ (Canada) ಹೆರಿಗೆ ವಾರ್ಡ್‌ಗಳಲ್ಲಿ ಭಾರತೀಯ ಗರ್ಭಿಣಿಯರು (Pregnant Indian Women) ತುಂಬಿದ್ದಾರೆ. ಹೆಚ್ಚಿನ ಭಾರತೀಯ ಮಹಿಳೆಯರು ಪ್ರಸವಕ್ಕಾಗಿ ಕೆನಡಾಕ್ಕೆ ಬರುತ್ತಿದ್ದಾರೆ ಎಂದು ಕೆನಡಾ ಪ್ರಜೆ ಚಾಡ್ ಎರೋಸ್ ಹೇಳಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಇತ್ತೀಚೆಗೆ ಅನೇಕ ಗರ್ಭಿಣಿಯರು ಹೆರಿಗೆಗಾಗಿ ವಿಶೇಷವಾಗಿ ಕೆನಡಾಕ್ಕೆ ಆಗಮಿಸುತ್ತಿದ್ದಾರೆ. ಮಹಿಳೆಯರು ಕೆನಡಾದ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರು ತಮ್ಮ ಮಕ್ಕಳು ಕೆನಡಾ ಪೌರತ್ವವನ್ನು ಪಡೆಯಲು ಬಯಸುತ್ತಿದ್ದಾರೆ ಎಂದು ಎರೋಸ್ ಹೇಳಿದ್ದಾರೆ.

ಹೆರಿಗೆ ವಾರ್ಡ್‌ಗಳು ಭಾರತೀಯ ಮಹಿಳೆಯರಿಂದ ತುಂಬಿವೆ ಎಂದು ನರ್ಸ್‌ವೊಬ್ಬರು ತಿಳಿಸಿದ್ದಾರೆ ಎಂದು ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಕೆನಡಾದ ಆಸ್ಪತ್ರೆಗಳು ಎಲ್ಲರನ್ನೂ ಸಮಾನವಾಗಿ ನೋಡಬೇಕು ಎಂದು ಎಕ್ಸ್‌ನಲ್ಲಿ ಹೇಳಿರುವ ಅವರು, ಕೆನಡಾದ ಪೌರತ್ವ ಪಡೆಯಲು ಭಾರತೀಯ ಮಹಿಳೆಯರು ಮಕ್ಕಳನ್ನು ಹೆರಲು ಕೆನಡಾಕ್ಕೆ ಬರುತ್ತಿದ್ದಾರೆ. ಕೆನಡಾದ ಆಸ್ಪತ್ರೆಗಳು ಯಾರನ್ನೂ ದೂರವಿಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಲ್ಲಿನ ಆರೋಗ್ಯ ವ್ಯವಸ್ಥೆಯನ್ನು ಬಳಸಿ ಬಳಿಕ ತಮ್ಮ ಮಗುವಿನೊಂದಿಗೆ ಸ್ವದೇಶಕ್ಕೆ ಹಿಂದಿರುಗುವ ಮಹಿಳೆಯರು ಮಗು ಬೆಳೆದ ಬಳಿಕ ಕೆನಡಾದ ಪ್ರಜೆಯಾಗಿ ಮರಳಿ ಬರುತ್ತಾರೆ. ಅವರ ಪೋಷಕರು, ಒಡಹುಟ್ಟಿದವರು, ಇಡೀ ಕುಟುಂಬವನ್ನು ಕರೆತರುತ್ತಾರೆ. ಕೆನಡಾದ ತೆರಿಗೆದಾರರ ವೆಚ್ಚದಲ್ಲಿ ಎಲ್ಲ ಉಚಿತ ಸೌಲಭ್ಯವನ್ನು ಪಡೆಯುತ್ತಾರೆ ಎಂದು ನಾನು ಬೇಕಿದ್ದರೆ ಬಾಜಿ ಕಟ್ಟಲು ಸಿದ್ಧನಿದ್ದೇನೆ ಎಂದು ಎರೋಸ್ ಹೇಳಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಕೆಲವರು ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಮಹಿಳೆಯರನ್ನು ಸಮರ್ಥಿಸಿಕೊಂಡಿದ್ದಾರೆ. ಎರೋಸ್ ಹೇಳಿಕೆಗೆ ತೀವ್ರ ಟೀಕೆ ಕೂಡ ವ್ಯಕ್ತವಾಗಿದೆ.

ಒಬ್ಬರು ಕಾಮೆಂಟ್‌ನಲ್ಲಿ ಸರ್ಕಾರ ಅನುಮತಿಸುವವರೆಗೆ ಯಾವುದೂ ಅಕ್ರಮವಲ್ಲ. ಸರ್ಕಾರ ನಿರ್ಬಂಧಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು ಪ್ರತಿಕ್ರಿಯಿಸಿ, ಇದನ್ನು ಕೇಳುವಾಗ ವಿಚಿತ್ರವಾಗಿ ಕಾಣುತ್ತದೆ. ಭಾರತೀಯ ಪ್ರಜೆಯಾಗಿದ್ದೇನೆ. ಇದನ್ನು ಕಳೆದ ಹಲವು ವರ್ಷಗಳಿಂದ ಅನುಸರಿಸಲಾಗುತ್ತಿದೆ. ಇದು ಕೇವಲ ಭಾರತದ ಬಗ್ಗೆ ಅಲ್ಲ. ಹೆಚ್ಚಿನ ಏಷ್ಯಾದ ದೇಶಗಳು. ಈ ಗೊಂದಲಮಯ ವ್ಯವಸ್ಥೆಯಿಂದಾಗಿ ಕೆನಡಾದ ರಾಜಕೀಯವು ಇಲ್ಲಿಗೆ ಪ್ರವೇಶಿಸುತ್ತದೆ ಎಂದು ತಿಳಿಸಿದ್ದಾರೆ.

ಇನ್ನೊಬ್ಬರು ನಿಮ್ಮ ಆತಂಕ ಸಾಮಾನ್ಯ. ಈ ಸಮಸ್ಯೆಯು ಕೆನಡಾದ ನೀತಿಗಳಿಂದ ಉದ್ಭವಿಸಿದೆ. ಇದು ವ್ಯವಸ್ಥೆಯ ಸಮಸ್ಯೆಯಾಗಿದ್ದು ಅದನ್ನು ಪರಿಹರಿಸಬೇಕಾಗಿದೆ ಎಂದು ತಿಳಿಸಿದ್ದಾರೆ. .ಮಹಿಳೆಯೊಬ್ಬರು ಪ್ರತಿಕ್ರಿಯಿಸಿ, ಆರೋಗ್ಯಕ್ಕಾಗಿ ಪಾವತಿಸಲು ಹಣವಿದ್ದರೆ ಏನು ಸಮಸ್ಯೆ? ಆದಾಯವನ್ನು ಗಳಿಸಲು ಸ್ಥಳವಿದ್ದರೆ ಅದ್ಭುತ. ಮಗು ಬೆಳೆದಾಗ ಅವರು ಇಲ್ಲಿನ ತೆರಿಗೆ ಪಾವತಿದಾರರಾಗುತ್ತಾರೆ ಎಂದಿದ್ದಾರೆ.

Viral Video: ಇಸ್ರೇಲಿ ದಂಪತಿಗೆ ಅವಮಾನ ಮಾಡಿದ ಕಾಶ್ಮೀರಿ ಅಂಗಡಿಯ ಮಾಲೀಕ ಕೊನೆಗೆ ಹೇಳಿದ್ದೇನು?

ಮತ್ತೊಬ್ಬರು ಪ್ರತಿಕ್ರಿಯಿಸಿ ನವಜಾತ ಶಿಶುವಿನ ಜನನ ಪ್ರಮಾಣ ಪತ್ರವನ್ನು ನೀಡಲು 3 ತಿಂಗಳು, ಪಾಸ್‌ಪೋರ್ಟ್‌ಗೆ 2 ತಿಂಗಳು ತೆಗೆದುಕೊಳ್ಳುತ್ತದೆ. ಏರ್‌ಲೈನ್‌ಗಳು 36 ವಾರಗಳ ಅನಂತರ ತಾಯಿಯಂದಿರ ಪ್ರಯಾಣಕ್ಕೆ ಅನುಮತಿಸುವುದಿಲ್ಲ. ಹೀಗಾಗಿ ಅವರು ಹೆರಿಗೆಗೆ ಕನಿಷ್ಠ 1 ತಿಂಗಳ ಮೊದಲು ಇಲ್ಲಿ ಇರಬೇಕು. ಒಟ್ಟು 6 ತಿಂಗಳುಗಳು ಬಾಡಿಗೆ ತೆರಿಗೆ, ಗ್ಯಾಸ್, ಎಚ್‌ಎಸ್‌ಟಿ, ಇತ್ಯಾದಿ ಸೇರಿ ಇದು ಉತ್ತಮ ವ್ಯಾಪಾರವಾಗಿದೆ ಎಂದಿದ್ದಾರೆ.