ಬೆಳಕು
ಶ್ರೀನಿವಾಸ ರಾಘವೇಂದ್ರ (ಶ್ರೀನಿಸುತ)
ನವೆಂಬರ್ ಮಾಸದ ಆಗಮನದೊಂದಿಗೆ ಕನ್ನಡಿಗರು ಭಾವಪೂರ್ಣರಾಗಿ ಗಾಢವಾಗಿ ನೆನೆಪಿಸಿಕೊಳ್ಳುವುದು ಒಂದು ಕನ್ನಡವನ್ನು ಮತ್ತೊಂದು ಖ್ಯಾತ ಹರಿದಾಸ ಸಂತರೆನಿಸಿದ್ದ ಶ್ರೀ ಕನಕದಾಸರನ್ನು (ಕನಕದಾಸ ಜಯಂತಿ ನಿಮಿತ್ತ). ಕನ್ನಡ ಭಾಷೆಯಲ್ಲಿ ಕನಕದಾಸರು ಕೊಟ್ಟ ಶ್ರೇಷ್ಠ ಕೃತಿಗಳನ್ನು ನೋಡಿದಾಗ ಯಾರಿಗಾದರೂ ಅನಿಸುತ್ತದೆ ಕನ್ನಡ ಮತ್ತು ಕನಕ ಒಬ್ಬರೊನ್ನೊಬ್ಬರು ಬಿಟ್ಟಿದ್ದಿಲ್ಲ. ಕರ್ನಾಟಕದ ಪುಣ್ಯಭೂಮಿಯಲ್ಲಿ ಕನಕದಾಸರು ಹುಟ್ಟಿದ್ದು ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬ್ರಾಹ್ಮಣೇತನಾಗಿ. ಆದರೆ ತಮ್ಮ ಜೀವನದಲ್ಲಿ ಅಧ್ಯಾತ್ಮ ಸಂಪತ್ತನ್ನು ಸಾಽಸಿ ತೋರಿಸಿ ಮೇಲ್ವರ್ಗದ ಜನರೂ ’ಕರುಬು’ವಂತೆ ಮಾಡಿದ್ದು ವಾಸ್ತವ ಸಂಗತಿ.
ವಿಜಯನಗರ ಸಾಮ್ರಾಜ್ಯದಲ್ಲಿ ಕೃಷ್ಣದೇವರಾಯನ ವೈಭವೋಪೇತ ಆಡಳಿತದ ಕಾಲದಲ್ಲಿ ಅಂದರೆ 16ನೇ ಶತಮಾನದಲ್ಲಿ ರಾಜಗುರು ಗಳಾಗಿದ್ದ ಶ್ರೀ ವ್ಯಾಸರಾಜರ ಸಂಪರ್ಕಕ್ಕೆ ಸಿಕ್ಕಿ ಅವರ ಕಾರುಣ್ಯಕ್ಕೆ ಪಾತ್ರರಾದರು. ಉಡುಪಿಯ ಶ್ರೀವಾದಿರಾಜ ಸ್ವಾಮಿಗಳ, ಮತ್ತೊಬ್ಬ ಶ್ರೇಷ್ಠ ಹರಿದಾಸರೆನಿಸಿದ ಶ್ರೀ ಪುರಂದರದಾಸರ ಸಮಕಾಲೀನರು ಕನಕದಾಸರು.
ಕನಕದಾಸರು ಮೊದಲಿಗೆ ಕತ್ತಿ, ಗುರಾಣಿ ಹಿಡಿದು ಕ್ಷಾತ್ರಧರ್ಮದಿಂದ ಮಾಡಿದ್ದು ಯುದ್ಧಾಳುವಾಗಿ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದುಹೋದ ಘಟನೆಗಳಿಂದ ನೊಂದು, ಬೆಂದು ಅಧ್ಯಾತ್ಮದತ್ತ ಹೊರಳಿದ್ದು ಇತಿಹಾಸ. ಕನಕ ದಾಸರು ಕೇವಲ ಹರಿದಾಸರಾಗಿರಲಿಲ್ಲ ಜೊತೆಗೆ ಕವಿಗಳೂ ಕೂಡ. ಅವರು ರಚಿಸಿದ ’ಮೋಹನ ತರಂಗಿಣಿ’ ಮಹಾಕಾವ್ಯವನ್ನು ನೋಡಿದಾಗ ಇದು ವೇದ್ಯವಾಗುತ್ತದೆ. ’ಹರಿಭಕ್ತಿಸಾರ’ ಅವರ ಸ್ವತಂತ್ರ ಗ್ರಂಥ. ಶತಮಾನಗಳ ತರುವಾಯ ’ಶ್ರೀ ಹರಿಕಥಾಮೃತ ಸಾರ’ ರಚಿಸಿದ ಶ್ರೀ ಜಗನ್ನಾಥದಾಸರ ಮೇಲೆ ಹರಿಭಕ್ತಿ ಸಾರದ ಪ್ರಭಾವ ಎದ್ದುಕಾಣುತ್ತದೆ. ’ರಾಮಧಾನ್ಯ ಚರಿತೆ’, ’ನಳ ಚರಿತ್ರೆ’ ಮೊದಲಾದ ಕೃತಿಗಳನ್ನು ಕನಕದಾಸರು ಕೊಟ್ಟು ಹೋಗಿದ್ದಾರೆ. ಶ್ರೀವ್ಯಾಸರಾಜರ ಸಂಪರ್ಕಕ್ಕೆ ಬಂದ ಮೇಲೆ ಅವರ ಮೇಲೆ ಅಧ್ಯಾತ್ಮ ಹಾಗೂ ಮಧ್ವಮತದ ಪ್ರಭಾವ ಉಂಟಾಯಿತು.
ಅವರು ಕೃತಿ ರಚನೆಯಲ್ಲಿ ಆಚಾರ್ಯಮಧ್ವರು ಹಾಕಿಕೊಟ್ಟಿದ್ದ ಪ್ರಮೇಯಗಳ ಚೌಕಟ್ಟನ್ನು ಎಂದೂ ಮೀರಲಿಲ್ಲ! ತಾವು ರಚಿಸಿದ ದೇವರನಾಮ ಗಳಲ್ಲಿ ಪಾರಮ್ಯದ ದೃಷ್ಟಿಯಲ್ಲಿ ವಿಷ್ಣುವನ್ನು, ತದನಂತರ ಶಿವನನ್ನು ಕೊಂಡಾಡಿ ಶೈವವೈಷ್ಣವರನ್ನು ಸಮನ್ವಯಗೊಳಿಸಿದರು! ಉಳಿದ ಹರಿದಾಸರು ತಮ್ಮ ದೇವರ ನಾಮಗಳಿಗೆ, ಉಗಾಭೋಗಗಳಿಗೆ, ಸುಳಾದಿಗಳಿಗೆ ಪ್ರಸಿದ್ಧರಾದರೆ, ಕನಕದಾಸರು ತಮ್ಮ ದೇವರನಾಮ ಮೊದಲಾದವುಗಳೊಂದಿಗೆ ’ಮುಂಡಿಗೆ’ ಗಳಿಂದಾಗಿಯೂ ಪ್ರಸಿದ್ಧರಾಗಿರುವರು. ಮುಂಡಿಗೆ ಎಂದರೆ ವಿಷಯವನ್ನು ನೇರವಾಗಿ ಪ್ರಸ್ತಾಪಿಸದೆ ಸುತ್ತಿ ಬಳಸಿ ಹೇಳಿ, ಮೆದುಳು ತಿಣುಕಾಡುವಂತೆ ಮಾಡುವ ಕಸರತ್ತು ಅಥವಾ ಒಗಟು. ಕಡೆಗೆ ಉತ್ತರ ಹೊಳೆದಾಗ ಮುಂಡಿಗೆಗಳನ್ನು ವಿಮರ್ಶಿಸಿ ದವರಿಗೆ ’ಮಂಡಿಗೆ ’ ಭಕ್ಷ್ಯ ತಿಂದಷ್ಟೇ ಖುಷಿಯಾಗುತ್ತದೆ!
ಕನಕದಾಸರು ನಿಜಜೀವನದಲ್ಲಿ ಸಹ ಒಗಟು ಒಗಟಾದ ಮಾತುಗಳಿಗೆ ಪ್ರಸಿದ್ಧರಾದವರು ಎಂದೇ ಪ್ರತೀತಿ. ಒಮ್ಮೆ ವ್ಯಾಸರಾಜರು ಕನಕರನ್ನು ಕೇಳಿದರು- ’ಕನಕ ಮೋಕ್ಷಕ್ಕೆ ಯಾರು ಹೋಗುತ್ತಾರೆ?’ ಎಂದು. ಕನಕದಾಸರು ಹೇಳಿದರು.
’ನಾನು ಹೋದರೆ ಹೋದೇನು!’ ನಾನೇ ಜ್ಯೇಷ್ಠ, ಶ್ರೇಷ್ಠ ಎಂಬ ಅಹಮಿಕೆ ಬಿಟ್ಟವರು ಮೋಕ್ಷಕ್ಕೆ ಹೋಗುತ್ತಾರೆ ಎನ್ನುವುದು ಕನಕರ ಅಂಬೋಣ! ಅದಕ್ಕೆ ಮತ್ತೊಂದು ನಿದರ್ಶನ ಹೀಗಿದೆ. ಕನಕದಾಸರು ಆ ಕಾಲದ ತಮ್ಮ ಕೃತಿಗಳಿಂದ ಜ್ಞಾನಿವರೇಣ್ಯರೆನಿಸಿದ್ದರು. ಅವರ ಕೀರ್ತಿ ದೂರ
ದೇಶಗಳಿಗೆ ಹರಡಿತ್ತು. ಸಂಚಾರ ಕಾಲದಲ್ಲಿ ಶ್ರೀನಿವಾಸನ ದರುಶನಕ್ಕೆ ಒಮ್ಮೆ ತಿರುಪತಿಗೆ ಹೋಗುವ ಪ್ರಸಂಗ ಬಂದಿತು. ಕನಕದಾಸರನ್ನು ಸ್ವಾಗತಿಸಲು ಸಿದ್ಧರಾಗಿದ್ದ ’ಮಹಂತರು’ ಕನಕದಾಸರನ್ನು ನೋಡಿರಲಿಲ್ಲ. ಕನಕದಾಸರು ಆ ಕಾಲದಲ್ಲೂ ಜನದಟ್ಟಣೆಯಿಂದಾಗಿ ದೇವರ ದರುಶನಕ್ಕಾಗಿ ಸರದಿಯಲ್ಲಿ ಸಾಮಾನ್ಯನಂತೆ ನಿಂತಿದ್ದರು.
’ಕನಕದಾಸರು ಎಲ್ಲಿದ್ದಾರೆ?’ ಎಂಬ ಮಹಂತರ ಮಾತು ಕೇಳಿಸಿಕೊಂಡ ಅ ಇದ್ದ ಕನಕದಾಸರು ಹೇಳಿದರು ’ಮುಂದಿನವರಿಗೆ ಹಿಂದೆ, ಹಿಂದಿನವರಿಗೆ ಮುಂದೆ’! (ನಿಮ್ಮೆದುರೇ ಇರುವೆ’ ಎಂದು ಭಾವ). ಅವರ ಕಾಲದಲ್ಲೂ ಸಮಾಜದಲ್ಲಿ ಧಾರ್ಮಿಕ ಹುಳುಕುಗಳು, ಡಾಂಭಿಕತೆ ತಾಂಡವವಾಡುತ್ತಿತ್ತು. ಆದರೆ ಕನಕರು ಎಂದೂ ಧರ್ಮದಿಂದ ಸಿಡಿದು ಹೊರಗೆ ಹೋಗಲಿಲ್ಲ. ಮಹಾಭಾರತದ ವಿದುರನಂತೆ ದುರ್ಯೋಧನಾದಿ ಕೌರವರ ಅಪಮಾನ, ನಿಂದನೆಗಳಿಗೆ ಒಳಗಾದರೂ, ಲೆಕ್ಕಿಸದೆ ಆ ಜನಗಳ ಮಧ್ಯೆಯೇ ಇದ್ದುಕೊಂಡು ಮಂದಿಯನ್ನು, ಸಮಾಜದ ಓರೆಕೋರೆಯನ್ನು ತಮ್ಮ ಕೃತಿಗಳಲ್ಲಿ ನಿಷ್ಠುರವಾದ ಮಾತು ಗಳಿಂದಲೇ ತಿದ್ದಿ ಜಗನ್ಮಾನ್ಯರಾದರು.
ಭಂಜನಾಚಾರ್ಯರು ಹುಟ್ಟಿದ್ದು ಸಾಮಾನ್ಯ ಮಧ್ಯಮ ವರ್ಗದ ಮಾಧ್ವ ಕುಟುಂಬದಲ್ಲಿ (1945). ಆ ಕಾಲಕ್ಕೆ ಹೊಸ ಪೇಟೆ ತಾಲೂಕು ವ್ಯಾಸನಕೆರೆ ಕೇವಲ 40 ಮನೆಗಳ ಕುಗ್ರಾಮ. ಶ್ರೀವ್ಯಾಸರಾಜರಿಂದ ಪ್ರತಿಷ್ಠಿತವಾದ ಆಂಜನೇಯ ಹಾಗೂ ಅವರು ನಿರ್ಮಿಸಿದ ಕೆರೆಯಿಂದಾಗಿ ಆ ಹಳ್ಳಿ ವ್ಯಾಸನಕೆರೆ ಎನ್ನಿಸಿತು. ಹನುಮಪ್ಪ ಶರ್ಮಾ ಎಂಬವರು ಆ ಆಂಜನೇಯನ ಅರ್ಚಕರಾಗಿ ಶ್ರೀವ್ಯಾಸರಾಜರಿಂದಲೇ ನೇಮಿತರಾ ದವರು. ಅವರ ವಂಶದ ವಿ.ಕೆ. ರಾಮರಾಯರು ಪ್ರಭಂಜನಾಚಾರ್ಯರ ತಂದೆ. ತಾಯಿ ಲಕ್ಷ್ಮೀಬಾಯಿಯವರು. ಮನೆ ಯಲ್ಲಿ ಸದಾ ಧಾರ್ಮಿಕ ಮತ್ತು ಸದಾಚಾರದ ವಾತಾವರಣ. ತಾಯಿ ದಾಸರ ಪದಗಳನ್ನು ಹಾಡುತ್ತಿದ್ದರು. ಪ್ರತಿದಿನವೂ ಕನಕದಾಸರ ಕೇಶವನಾಮ’ದ ಪಠಣದ ರಿಂಗಣ ಆ ಮನೆಯ ವಾತಾವರಣ. ಇದರ ಪ್ರಭಾವ ಬಾಲಕ ಪ್ರಭಂಜನರ ಮೇಲೆ ಆಯಿತು. ಅವರ ತಂದೆಯವರದಂತೂ ಕನಕದಾಸರ ಜೀವನಾದರ್ಶ. ಪ್ರಾಥಮಿಕಶಿಕ್ಷಣಕ್ಕೂ ಅವಕಾಶವಿಲ್ಲದ ಅವರ ಸ್ಥಳದಲ್ಲಿ ಅವರ ತಂದೆಯೇ ಇವರ ಗುರು. ಮುಂದೆ ಪ್ರೌಢಶಿಕ್ಷಣ ಹೊಸಪೇಟೆಯ ಮುನ್ಸಿಪಲ್ ಪ್ರೌಢಶಾಲೆಯಲ್ಲಿ.
ಪಿಯುಸಿ ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ. ಎಂಜಿನಿಯರಿಂಗ್ ಶಿಕ್ಷಣ ಮೈಸೂರಿನ ಎನ್.ಐ.ಇ. ತಾಂತ್ರಿಕ ಸಂಸ್ಥೆಯಲ್ಲಿ.
ಜೊತೆಜೊತೆಯಾಗಿ ಅಲ್ಲಿಯ ಖ್ಯಾತವಿದ್ವಾಂಸರಾದ ಶ್ರೀ ಎಚ್. ಸುಬ್ಬರಾವ್ ಎಂಬ ಮಹನೀಯರಲ್ಲಿ ಆಳವಾದ ಶಾಸ್ತ್ರಾಧ್ಯಯನ. ಅದರೊಂದಿಗೆ ಬಿ.ಇ. ಪದವಿಯ ಪ್ರಾಪ್ತಿ. ಎಂಜಿನಿಯರಿಂಗ್ ಓದಿದವರಿಗೆ ಸುಲಭವಾಗಿ ಕೆಲಸ, ಪಗಾರ ಸಿಗುತ್ತಿದ್ದ ಕಾಲ. ಅಧ್ಯಾತ್ಮದ ಸೆತಕ್ಕೆ ಒಳಗಾಗಿದ್ದ ಪ್ರಭಂಜ ನರು ವೃತ್ತಿಗೆ, ಸಂಬಳಕ್ಕೆ ಮರುಳಾಗಲಿಲ್ಲ.
ಸಂಸ್ಕೃತದಲ್ಲಿ ಮತ್ತಷ್ಟು ಅಧ್ಯಯನ ನಡೆಸುವ ಉದ್ದೇಶದಿಂದ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಅಧ್ಯಯನ ಹಾಗೂ ಬಿ.ಎ. ಪದವಿಯ ಪ್ರಾಪ್ತಿ. ಮುಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಸ್ನಾತಕೋತ್ತರ ಶಿಕ್ಷಣ. ಇವರ ವಿದ್ವತ್ತನ್ನು ಬಹಳವಾಗಿ ಮೆಚ್ಚಿದ ಪ್ರೊ. ಕೆ.ಟಿ.ಪಾಂಡುರಂಗಿ ಯವರಿಂದ ದೊರೆತ ವಿಶೇಷ ಸಹಕಾರ ಅವರ ಅಧ್ಯಯನದ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಿತು. ಮುಂದೆ ಗದಗ (ಜೆ.ಟಿ.
ಕಾಲೇಜ), ಬೆಂಗಳೂರು (ನ್ಯಾಷನಲ್ ಕಾಲೇಜ), ಚಿಕ್ಕ ಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರಿನ ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪನ ವೃತ್ತಿ. ಬಳಿಕ ಬೆಂಗಳೂರಿನ ಕೆ.ಆರ್.ಪುರಂನ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಣೆ. 2001ರಲ್ಲಿ ಸ್ವಯಂ ನಿವೃತ್ತಿ. ಆ ಬಳಿಕ ಹಿಂದಿನಿಂದಲೂ ನಡೆದುಬಂದಿದ್ದ ವ್ಯಾಸ- ದಾಸಸಾಹಿತ್ಯದ ಪ್ರಸಾರಕ್ಕಾಗಿ ಪಾಠ, ಪ್ರವಚನ, ಲೇಖನ, ಪ್ರಕಾಶನ ಮೊದಲಾದ ಕಾರ್ಯಗಳಲ್ಲಿ ಪೂರ್ಣವಾಗಿ ತೊಡಗಿಸಿಕೊಂಡು ಜ್ಞಾನಪ್ರಸಾರದ ಕಾರ್ಯ.
ಪ್ರಾಚೀನ ಹಸ್ತಪ್ರತಿ ಸಂಗ್ರಹಣ: ವಿದ್ಯಾರ್ಥಿದೆಸೆಯಲ್ಲಿಯೇ ಪ್ರಾರಂಭವಾದ ಪ್ರಾಚೀನಹಸ್ತಪ್ರತಿ ಗ್ರಂಥಗಳ ಸಂಗ್ರಹದ ಇವರ ಹವ್ಯಾಸ ಮುಂದೆ ಮತ್ತಷ್ಟು ಹೆಚ್ಚಾಗಿ ಸಾಗಿ, ಸಹಸ್ರಾರು ತಾಡವಾಲೆ ಗ್ರಂಥಗಳ ಸಂಗ್ರಹ ರೂಪುಗೊಂಡಿತು. ಅದರಿಂದಾಗಿ ವ್ಯಾಕರಣ, ಮೀಮಾಂಸೆ, ವೇದಾಂತ
ಮೊದಲಾದವುಗಳಿಗೆ ಸಂಬಂಽಸಿದ ನೂರಾರು ಹಸ್ತಪ್ರತಿಸಂಗ್ರಹಗಳು ಸುರಕ್ಷಿತವಾದವು. ಅವೆಲ್ಲವುಗಳನ್ನೂ ಶ್ರೀಜಯತೀರ್ಥಸಂಸ್ಕೃತ ಹಸ್ತಲಿಖಿತ ಗ್ರಂಥಾಲಯ ಎಂಬ ಹೆಸರಿನಲ್ಲಿ ಅವರು ಸಂರಕ್ಷಿಸಿದ್ದು, ಅವುಗಳ ಅಧ್ಯಯನ, ಸಂಶೋಧನೆ, ಪ್ರಕಾಶನ ಮೊದಲಾದ ಕಾರ್ಯಗಳನ್ನು
ಮಾಡುತ್ತಿರುವರು. ಅವರ ಸಂಗ್ರಹದಲ್ಲಿರುವ ಪ್ರಾಚೀನ ತಾಡವಾಲೆ ಪ್ರತಿ ಕ್ರಿ.ಶ. 1400ರಷ್ಟು ಹಿಂದಿನದು. ಇದರಿಂದ ಅವರ ಸಂಗ್ರಹಕಾರ್ಯದ ಮಹತ್ತ್ವ ತಿಳಿಯುವುದು. ಇದರಲ್ಲಿ ಶ್ರೀರಾಘವೇಂದ್ರಸ್ವಾಮಿಗಳು ಮೊದಲಾದ ಮಹನೀಯರ ಅಪೂರ್ವಕೃತಿಗಳು ಸಹ ಸೇರಿರುವವು.
ಧಾರ್ಮಿಕ ಪ್ರವಚನ: ಓದಿಕೊಂಡು ವಿದ್ವಾಂಸರಾದವರೆಲ್ಲ ಉತ್ತಮ ವಾಕ್ಪಟುಗಳಾಗಿರಬೇಕೆಂಬ ನಿಯಮವೇನಿಲ್ಲ! ಓದಿನ ವೈದುಷ್ಯದೊಂದಿಗೆ ವಾಕ್ಪಟುತ್ವ ಆಚಾರ್ಯರಿಗೆ ಸಿದ್ಧಿಸಿದೆ. ಕೇಳುಗರನ್ನು ಬೆರಗುಗೊಳಿಸುವ ವಾಗಾಡಂಬರ ಇವರದಲ್ಲ. ವಿಷಯಗಳ ಸರಳ ನೇರ ನಿರೂಪಣೆ ಇವರ ಶೈಲಿ. ರಾಮಾಯಣ, ಮಹಾಭಾರತ, ಭಗವದ್ಗೀತಾ ಮೊದಲಾದ ಉದ್ಗ್ರಂಥಗಳನ್ನು ನಾಡಿನಾದ್ಯಂತ ಪ್ರವಚನ ಮಾಡಿದ್ದಾರೆ.
ದಾಸರ ಪದಗಳನ್ನು ಹೆಜ್ಜೆ ಹೆಜ್ಜೆಗೆ ಉಲ್ಲೇಖಿಸುವ ಇವರು ಹಾಡುಗಾರರರೇನಲ್ಲ. ನವಿರಾದ ಹಾಸ್ಯಮಿಶ್ರಿತ, ಅನುದ್ವೇಗದ, ಅಸ್ಖಲಿತ ಉಪನ್ಯಾಸ ಶೈಲಿ ಜನರ ಮನ ಗೆದ್ದಿದೆ. ಉಪನ್ಯಾಸಕಾರನಿಗೆ ಮುಖ್ಯವಾಗಿ ಇರಬೇಕಾದ್ದು ತಾನು ಮಾಡುತ್ತಿರುವ ವಿಷಯದ ಪ್ರಸ್ತುತಿಯ ಬಗ್ಗೆ ಎಚ್ಚರ, ಅದರ
ಗತಿ (ನಡಿಗೆ) ಮತ್ತು ಸಮಯ ಪ್ರಜ್ಞೆ. ಆಚಾರ್ಯರು ಇವೆಲ್ಲವನ್ನೂ ಮೈಗೂಡಿಸಿಕೊಂಡಿzರೆ. ವಿಶ್ವವಾಣಿ ಕ್ಲಬ್ ಹೌಸ್ನಲ್ಲಿ ಒಮ್ಮೆ ಇವರು ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ ನಿಮಿತ್ತ ಮಾತಾಡಿದ್ದು ನನ್ನ ನೆನಪಿಗೆ ಬರುತ್ತಿದೆ. ಇವರ ಉಪನ್ಯಾಸದಲ್ಲಿ ’ಏಕಾದಶಿ ಉಪವಾಸ’ ದ ಮಹತ್ತ್ವ ಮನೆಮಾಡಿದೆ. ಲೌಕಿಕ ದೃಷ್ಟಾಂತಗಳೊಂದಿಗೆ ಪ್ರಶ್ನೆ ಮಾಡುವ ಹವ್ಯಾಸದ ಇಂದಿನ ಯುವಜನತೆ ಇವರ ಉಪನ್ಯಾಸದಿಂದ
ಮನವರಿಕೆ ಕಂಡುಕೊಂಡಿದೆ. ಇವರು ಉಪನ್ಯಾಸಗಳನ್ನು ಪ್ರಾರಂಭಿಸಿ ಐವತ್ತು ವರುಷಗಳು ಸಂದಿದ್ದು ಮಾಧ್ವಸಮಾಜದಲ್ಲಿ ಇಂದಿಗೂ ’ಸ್ಟಾರ್ ಉಪನ್ಯಾಸಕ’ರೆನಿಸಿದ್ದಾರೆ ಎಂಬುದು ಉತ್ಪ್ರೇಕ್ಷೆಯ ಮಾತಲ್ಲ!
ಗ್ರಂಥ ಲೇಖನ ಮತ್ತು ಪ್ರಕಾಶನ: ಆಚಾರ್ಯರ ಲೇಖನ ಶೈಲಿ ಓದುಗರ ಮನ ಗೆದ್ದಿದೆ ಎಂಬುದಕ್ಕೆ ಇವರು ಬರೆದಿರುವ ಗ್ರಂಥಗಳೇ ಸಾಕ್ಷಿ. ಇದಕ್ಕಾಗಿಯೇ ಇವರು ’ಶ್ರೀವ್ಯಾಸಮಧ್ವ ಸಂಶೋಧನ ಪ್ರತಿಷ್ಠಾನ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಪೋಷಿಸಿದ್ದಾರೆ. ಇದರ ಅಡಿಯಲ್ಲಿ ವಿವಿಧಗ್ರಂಥಗಳ ಪ್ರಕಟಣೆ ಆಗಿದೆ. ಕನ್ನಡದಲ್ಲಿ ’ಶ್ರೀಮನ್ಮಹಾಭಾರತ ತಾತ್ಪರ್ಯ ನಿರ್ಣಯ’ ಅನುವಾದದಿಂದ ಪ್ರಾರಂಭಿಸಿ ’ಸ್ತೋತ್ರ
ಮಾಲಿಕಾ’ ವರಗೆ ಒಟ್ಟು ೨೦೦ ಕ್ಕಿಂತ ಹೆಚ್ಚು ಕೃತಿಗಳು ಪ್ರಕಾಶಿತ ವಾಗಿವೆ. ಇಂಗ್ಲಿಷ್ ಭಾಷೆಯಲ್ಲಿ ’ಲೈಫ್ ಅಂಡ್ ವP ಆ-
ಶ್ರೀ ಮಧ್ವಾಚಾರ್ಯ’ ಇಂದ ಹಿಡಿದು ’ರಾಘವೇಂದ್ರ ದರ್ಶನ’ ವರೆಗೆ ಒಟ್ಟು 20 ಕೃತಿಗಳು. ಸಂಸ್ಕೃತ ಭಾಷೆಯಲ್ಲಿ’ ಶ್ರೀಮನ್ಮಧ್ವಾಚಾರ್ಯರ ಸರ್ವಮೂಲಗ್ರಂಥ’ ಗಳನ್ನೊಳ ಗೊಂಡಂತೆ ನೂರಕ್ಕಿಂತ ಹೆಚ್ಚು ಗ್ರಂಥಗಳು ಬೆಳಕು ಕಂಡಿವೆ.
ಹರಿದಾಸ ಸಾಹಿತ್ಯಕ್ಕೆ ಸಂಬಂಧಿಸಿದಂತೆ ೨೫ಕ್ಕೂ ಹೆಚ್ಚು ಕೃತಿಗಳು ಪ್ರಕಾಶಿತವಾಗಿದ್ದು ಸಮಗ್ರ ದಾಸಸಾಹಿತ್ಯದ ಪ್ರಮುಖ ಹರಿದಾಸರ ಕೃತಿಗಳನ್ನೊಳಗೊಂಡ ಮತ್ತಷ್ಟು ಸಂಪುಟಗಳು ಪ್ರಕಟಣೆಗೆ ಸಿದ್ಧವಾಗಿವೆ. ಕನಕದಾಸರ ಬಗ್ಗೆಯಂತೂ ಸುಮಾರು 2000 ಪುಟಗಳ ವ್ಯಾಪ್ತಿಯ ಆರು ಸಂಪುಟಗಳನ್ನು ಪ್ರಕಾಶನಪಡಿಸಿರುವರು. ಅದಕ್ಕಾಗಿ ಈ ಕನಕಶ್ರೀ’ ಪ್ರಶಸ್ತಿಯು ಇವರಿಗೆ ಸಂದಿದೆ.
ಅಧ್ಯಯನ ಮತ್ತು ಅಧ್ಯಾಪನ: ಸಚ್ಛಾಸಗಳ ಅಧ್ಯಯನವನ್ನು ಉಸಿರಾಗಿಸಿಕೊಂಡಿರುವ ಆಚಾರ್ಯರು ಜಿಜ್ಞಾಸುಗಳ ಸಲುವಾಗಿ ಯೂಟ್ಯೂಬನಲ್ಲಿ ಶ್ರೀಮಧ್ವಾಚಾರ್ಯರ ಸಮಗ್ರ ಗ್ರಂಥಗಳನ್ನು (ಇದನ್ನು ’ಸರ್ವಮೂಲ’ ಎನ್ನುತ್ತಾರೆ.) ಪಾಠ ರೂಪದಲ್ಲಿ ಪ್ರವಚನ ಮಾಡಿದ್ದಾರೆ. ಆಸಕ್ತರು ’ವ್ಯಾಸಮಧ್ವ ’(qsZoZIZbeಡಿZ) ಚಾನೆಲ್ನಲ್ಲಿ ವೀಕ್ಷಿಸಬಹುದು.
ದೊರೆತ ಪುರಸ್ಕಾರ, ಗೌರವ: ಶ್ರೀ ಪ್ರಭಂಜನಾಚಾರ್ಯರ ಬಹುಮುಖವಾದ ವ್ಮಾಯ ಸೇವೆಯನ್ನು ಸರಕಾರ ಹಾಗೂ ಮಾಧ್ವಮಠಮಾನ್ಯಗಳು ಗುರುತಿಸಿವೆ. ಇವರಿಗೆ ದೊರೆತ ಬಿರುದುಗಳಲ್ಲಿ ಅತ್ಯಂತ ಪ್ರಧಾನವಾದದ್ದು ಕೆಂದ್ರ ಸರಕಾರದ ರಾಷ್ಟ್ರಪತಿ ಪ್ರಶಸ್ತಿ (2005), ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ (2002), ಸಂಸ್ಕೃತ ವಿದ್ವಾಂಸ ಪ್ರಶಸ್ತಿ (1999), ಉತ್ತಮ ಸಂಸ್ಕೃತ ಶಿಕ್ಷಕ ಪ್ರಶಸ್ತಿ (2000) ಹಾಗೂ
ಈಗ ದೊರಕಿರುವ ಕರ್ನಾಟಕ ಸರ್ಕಾರದ ಕನಕಶ್ರೀ’ ಪ್ರಶಸ್ತಿ. ರಾಘವೇಂದ್ರಮಠ ಮೊದಲಾದ ಪ್ರತಿಷ್ಠಿತ ಮಠಮಾನ್ಯಗಳಿಂದ ಹಾಗೂ ಅನೇಕ ವಿಶ್ವವಿದ್ಯಾನಿಲಯಗಳಿಂದ ’ವಿದ್ಯಾವಾಚಸ್ಪತಿ’, ’ವಿದ್ಯಾರತ್ನಾಕರ’, ಜ್ಞಾನರತ್ನಾಕರ’, ವಿದ್ಯಾಮಾನ್ಯ ಮಹಾಪ್ರಶಸ್ತಿ’, ಮಹಾಮಹೋಪಾಧ್ಯಾಯ ಮೊದಲಾದ ಪ್ರಶಸ್ತಿಗಳು ಇವರಿಗೆ ಸಂದಿವೆ. ಪ್ರಸ್ತುತ ಕನಕಶ್ರೀ ಪ್ರಶಸ್ತಿಯು ಇವರಿಗೆ ಸಂದ ನೂರನೆಯ ಪ್ರಶಸ್ತಿ ಎಂಬುದು ವಿಶೇಷ.
ಇದನ್ನೂ ಓದಿ: Kannadacolumn