Monday, 18th November 2024

Pushpa 2: ಗನ್‌ ಹಿಡಿದು ‘ಪುಷ್ಪ 2’ ಲುಕ್‌ನಲ್ಲಿ ಮಿಂಚಿದ ಕ್ರಿಕೆಟಿಗ ವಾರ್ನರ್‌

ಸಿಡ್ನಿ: ಟಾಲಿವುಡ್​ ಸ್ಟೈಲಿಶ್ ಸ್ಟಾರ್​ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ(Rashmika Mandanna) ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ‘ಪುಷ್ಪ 2’(Pushpa 2) ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆಗೊಂಡಿದೆ. ಚಿತ್ರ ಇದೇ ಡಿಸೆಂಬರ್ 05ರಂದು ರಿಲೀಸ್​ ಆಗಲಿದೆ. ಸದ್ಯ ಅಲ್ಲು ಅರ್ಜುನ್(Allu Arjun) ಮತ್ತು ಚಿತ್ರತಂಡ ಸಿನಿಮಾದ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೇವಿಡ್‌ ವಾರ್ನರ್‌(David Warner) ಕೂಡ ಆಸ್ಟ್ರೇಲಿಯಾದಲ್ಲಿ ಪುಷ್ಪ ಲುಕ್‌ನಲ್ಲಿ ಕಾಣಿಸಿಕೊಂಡು ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಫೋಟೊ ವೈರಲ್‌ ಆಗಿದೆ.

ವಾರ್ನರ್‌ ಗೋಲ್ಡನ್‌ ಕಲರ್‌ನ ಗನ್‌ ಹಿಡಿದುಕೊಂಡು ಪುಷ್ಪ 2ನಲ್ಲಿ ಅಲ್ಲು ಅರ್ಜುನ್‌ ಕಾಣಿಸಿಕೊಂಡಂತೆ ಕಾಣಿಸಿದ್ದಾರೆ. ಅವರ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಏಪ್ರಿಲ್ 7 ರಂದು ಅಲ್ಲು ಅರ್ಜುನ್ ವಿಭಿನ್ನವಾಗಿ ಕಾಣಿಸಿಕೊಂಡ ಪುಷ್ಪ-2 ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದರಲ್ಲಿ ಅಲ್ಲು ಅರ್ಜುನ್​ ವಿಚಿತ್ರ ಶೈಲಿಯ ಆಭರಣಗಳು ಮತ್ತು ಸೀರೆಯೊಂದಿಗೆ ಪೋಸ್ ನೀಡಿದ್ದರು. ಅದೇ ರೂಪದಲ್ಲಿ ಅಂದು ವಾರ್ನರ್​ ಕೂಡ ಕಾಣಿಸಿಕೊಂಡಿದ್ದರು.

ಪುಷ್ಪ 2 ಚಿತ್ರದ ‘ಪುಷ್ಪ ಪುಷ್ಪ ಪುಷ್ಪ ರಾಜ್’ ಹಾಡು ಬಿಡುಗಡೆಗೊಂಡಾಗಲೂ ವಾರ್ನರ್‌ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಕೆಲವು ವರದಿಗಳ ಪ್ರಕಾರ, ಡೇವಿಡ್ ವಾರ್ನರ್ ಕೂಡ ಪುಷ್ಪಾ 2 ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಟ್ರೈಲರ್‌ನಲ್ಲಿ ವಾರ್ನರ್‌ ಕಾಣಿಸಿಕೊಳ್ಳಲಿದ್ದರೂ ತೆರೆ ಮೇಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಾರ್ನರ್‌ ಪುಷ್ಪ 2 ಲುಕ್‌ನಲ್ಲಿ ಕಾಣಿಸಿಕೊಂಡಂತಿದೆ ಎನ್ನಲಾಗಿದೆ.

ಇದನ್ನೂ ಓದಿ ಭಾರತ ವಿರುದ್ಧದ ಟಿ20 ಸರಣಿಗೆ ಡೇವಿಡ್ ವಾರ್ನರ್ ಇಲ್ಲ

ಪುಷ್ಪ ಸಿನೆಮಾದ ಡೈಲಾಗ್‌ ಮತ್ತು ಹಾಡಿಗೆ ವಾರ್ನರ್‌ ಆಗಾಗ ತಮ್ಮ ಮುಖವನ್ನು ಮಾರ್ಫ್ ಮಾಡಿ ವಿಡಿಯೊ ಹಂಚುಕೊಳ್ಳುತ್ತಿರುತ್ತಾರೆ. ಐಪಿಎಲ್‌ ಆಡುವ ವೇಳೆ ಅವರು ಮೈದಾನದಲ್ಲಿ ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್” ಎಂದು ಅಲ್ಲು ಅರ್ಜುನ್ ಶೈಲಿಯಲ್ಲಿ ಗಡ್ಡ ಸವರಿ ಡೈಲಾಗ್​ ಹೊಡೆದಿದ್ದರು. ಇತ್ತೀಚೆಗೆ 37ನೇ ಜನ್ಮದಿನದ ಆಚರಿಸಿಕೊಂಡಿದ್ದ ವಾರ್ನರ್‌ಗೆ ಅರ್ಜುನ್‌ ಶುಭ ಹಾರೈಸಿದ್ದರು. ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಸ್ಟೋರಿ ಹಾಕಿ ʼಹುಟ್ಟು ಹಬ್ಬದ ಶುಭಾಶಯಗಳು ಸಹೋದರʼ ಎಂದು ಪೋಸ್ಟ್‌ ಮಾಡಿದ್ದರು.