ನವದೆಹಲಿ: ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಮೆಗಾ ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ಯಾವೆಲ್ಲಾ ಆಟಗಾರರನ್ನು ಖರೀದಿಸಬೇಕೆಂಬ ಬಗ್ಗೆ ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಿವೆ. ಇದರ ನಡುವೆ ಕೆಎಲ್ ರಾಹುಲ್, ರಿಷಭ್ ಪಂತ್, ಶ್ರೇಯಸ್ ಅಯ್ಯುರ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಸ್ಟಾರ್ ಆಟ್ವಗಾರರು ಈ ಬಾರಿ ಮೆಗಾ ಹರಾಜಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇದರಲ್ಲಿ ಯಾವ ಆಟಗಾರ ದಾಖಲೆ ಅತ್ಯಂತ ದುಬಾರಿ ಆಟಗಾರ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಈ ಬಾರಿ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಅವರು, ಈ ಬಾರಿ ಮೆಗಾ ಹರಾಜಿನಲ್ಲಿ ಅತ್ಯಧಿಕ ಮೊತ್ತವನ್ನು ಯಾವ ಆಟಗಾರ ಪಡೆಯಲಿದ್ದಾರೆಂಬ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಕಳೆದ 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಅವರನ್ನು 24. 75 ಕೋಟಿ ರೂ. ಗಳನ್ನು ಪಡೆದಿದ್ದರು. ಆದರೆ, ಈ ಬಾರಿ ಮಿಚೆಲ್ ಸ್ಟಾರ್ಕ್ ಅವರ ದಾಖಲೆಯನ್ನು ರಿಷಭ್ ಪಂತ್ ಮುರಿಯಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.
IPL 2025: ಕೆಕೆಆರ್‌ಗೆ ರಿಂಕು ಸಿಂಗ್ ನಾಯಕ?
ಮಿಚೆಲ್ ಸ್ಟಾರ್ಕ್ ದಾಖಲೆಯನ್ನು ಪಂತ್ ಮುರಿಯಲಿದ್ದಾರೆ: ಪಠಾಣ್
ಒಂದು ದಶಕದ ಅವಧಿಯ ಬಳಿಕ ಈ ಬಾರಿ ನಡೆಯುವ ಮೆಗಾ ಹರಾಜು ಅತ್ಯಂತ ತೀವ್ರ ಕುತೂಹಕ ಕೆರಳಿಸಿದೆ. ಏಕೆಂದರೆ, ವಿಶ್ವದ ಸಾಕಷ್ಟು ಸ್ಟಾರ್ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೋಸ್ ಬಟ್ಲರ್, ಅರ್ಷದೀಪ್ ಸಿಂಗ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಯುಜ್ವೇಂದ್ರ ಚಹಲ್ ಹಾಗೂ ಮಿಚೆಲ್ ಸ್ಟಾರ್ಕ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಈ ಬಾರಿ ದಾಖಲೆಯ ಮೊತ್ತವನ್ನು ಜೇಬಿಗಳಿಸಿಕೊಳ್ಳಲಿದ್ದಾರೆಂದು ಇರ್ಫಾನ್ ಪಠಾಣ್ ಭವಿಷ್ಯ ನುಡಿದಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಇರ್ಫಾನ್ ಪಠಾಣ್, “ಮಿಚೆಲ್ ಸ್ಟಾರ್ಕ್ ಅವರ ಹರಾಜು ದಾಖಲೆ ಅಪಾಯದಲ್ಲಿದೆ. ಈ ದಾಖಲೆಯನ್ನು ಮುರಿಯಲು ರಿಷಭ್ ಪಂತ್ ಸಿದ್ದರಾಗಿದ್ದಾರೆ,” ಎಂದು ಬರೆದಿದ್ದಾರೆ.
IPL 2025 Auction: ಪಂತ್, ರಾಹುಲ್ ಸೇರಿ 23 ಆಟಗಾರರಿಗೆ 2 ಕೋಟಿ ಮೂಲಬೆಲೆ
ಯಾವ ತಂಡಕ್ಕೆ ರಿಷಭ್ ಪಂತ್ ಆಡಬಹುದು?
ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಭ್ ಪಂತ್ ಅವರನ್ನು ರಿಲೀಸ್ ಮಾಡುವ ಮೂಲಕ ಅಚ್ದರಿ ಮೂಡಿಸಿತ್ತು. ಏಕೆಂದರೆ ರಿಷಭ್ ಪಂತ್ ಅವರು ಐಪಿಎಲ್ ವೃತ್ತಿ ಜೀವನ ಆರಂಭಿಸಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಹಾಗೂ ಇಲ್ಲಿಯವರೆಗೂ ಈ ತಂಡದ ಪರ ಆಡಿದ್ದಾರೆ. 1.9 ಕೋಟಿ ರೂ. ಗಳಿಗೆ ರಿಷಭ್ ಪಂತ್ ಅವರನ್ನು ಖರೀದಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, 2016 ರಿಂದ ಇಲ್ಲಿಯವರೆಗೂ ಅವರು ಇದೇ ತಂಡದ ಜೊತೆ ಇದ್ದರು. 2018ರ ಮೆಗಾ ಹರಾಜಿನಲ್ಲಿ 8 ಕೋಟಿ ರೂ. ಪಡೆದಿದ್ದ ಪಂತ್, 2022ರ ಮೆಗಾ ಹರಾಜಿನಲ್ಲಿ ರಿಷಭ್ ಪಂತ್ 16 ಕೋಟಿ ರೂ. ಗಳನ್ನು ಪಡೆದಿದ್ದರು.
ರಿಷಭ್ ಪಂತ್ ಅವರು ಮುಂದಿನ ಆವೃತ್ತಿಯಲ್ಲಿ ಬೇರೆ ಯಾವುದಾದರೂ ಫ್ರಾಂಚೈಸಿಗೆ ನಾಯಕನಾಗುವ ಸಾಧ್ಯತೆ ಇದೆ. ನಾಯಕತ್ವವನ್ನು ನೀಡುವ ಸಲುವಾಗಿ ರಿಷಭ್ ಪಂತ್ ಅವರನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ಪ್ರಯತ್ನಿಸಬಹುದು. ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ರಿಷಭ್ ಪಂತ್ ಅವರನ್ನು ಖರೀದಿಸಲು ಪ್ರಯತ್ನಿಸಬಹುದು.