ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಎಂಟನೇ ವಾರಕ್ಕೆ ಕಾಲಿಟ್ಟಿದೆ. 50 ದಿನ ಪೂರೈಸಿರುವ ಹಿನ್ನಲೆಯಲ್ಲಿ ಮನೆಯೊಳಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕೂಡ ಎಂಟ್ರಿಕೊಟ್ಟಿದ್ದಾರೆ. ಈ ಮೊದಲು ಸಿಂಗರ್ ಹನುಮಂತ ಅವರು ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದರು. ಇದೀಗ ಮನೆಯಲ್ಲಿದ್ದ ಸ್ಪರ್ಧಿಗಳಿಗೆ ನಡುಕ ಹುಟ್ಟಿಸಲು ಇಬ್ಬರು ಸಖತ್ ಸ್ಟ್ರಾಂಗ್ ಕಂಟೆಸ್ಟೆಂಟ್ಗಳ ಎಂಟ್ರಿಯಾಗಿದೆ. ಅವರೇ ಶೋಭಾ ಶೆಟ್ಟಿ ಮತ್ತು ರಂಜಿತ್ ಬುಜ್ಜಿ.
ಇದರಲ್ಲಿ ಶೋಭಾ ಅವರಿಗೆ ಬಿಗ್ ಬಾಸ್ ಹೊಸದೇನೂ ಅಲ್ಲ. ಈ ಹಿಂದೆ ತೆಲುಗು ಬಿಗ್ಬಾಸ್ ಸೀಸನ್ 7 ರಲ್ಲಿ ಇವರು ಭಾಗಿಯಾಗಿದ್ದರು. ಅಲ್ಲಿ ತಮ್ಮ ಜಗಳ, ಮಾತುಗಳ ಮೂಲಕವೇ ಜನಪ್ರಿಯ ಆಗಿದ್ದರು. ಇದೀಗ ಕನ್ನಡದ ಸೀಸನ್ 11 ರಲ್ಲೂ ಅದೇ ನೇರ ಮಾತುಗಳಿಂದ ಮೊದಲ ದಿನವೇ ಹೈಲೈಟ್ ಆಗಿದ್ದಾರೆ. ಮನೆಯೊಳಗೆ ಕಾಲಿಟ್ಟ ದಿನವೇ ಸ್ಟ್ರಾಂಗ್ ಆಗಿ ಡೈಲಾಗ್ ಹೊಡೆದಿದ್ದಾರೆ.
ಮುಂಜಾನೆ ಸಾಂಗ್ ಬದಲು, ಇವರಿಬ್ಬರು ಆಗಮಿಸಿ ಮ್ಯೂಸಿಕ್ ಪೂರೈಸಿದ್ದಾರೆ. ಇವರನ್ನು ಮನೆಮಂದಿ ಆನಂದದಿಂದ ಸ್ವಾಗತಿಸಿದ್ದಾರೆ. ನಂತರ, ಸ್ಪರ್ಧಿಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಈ ಇಬ್ಬರಿಗೆ ಕೊಟ್ಟಿದ್ದಾರೆ. ಜೊತೆಗೆ, ಕಾಯಿ ಒಡೆಯಬೇಕಿದೆ. ಗೌತಮಿ ಜಾದವ್ ಮನೆಯಲ್ಲಿ ಮುಖವಾಡ ಹಾಕಿಕೊಂಡಿದ್ದಾರೆ. ಅದನ್ನ ತೆಗೆದು ಬಿಸಾಕುವೆ ಅನ್ನೋ ಗತ್ತಿನಲ್ಲಿಯೇ ಶೋಭಾ ಶೆಟ್ಟಿ ಡೈಲಾಗ್ ಹೊಡೆದಿದ್ದಾರೆ. ತೆಂಗಿನ ಕಾಯಿ ಒಡೆದು ಈ ಒಂದು ಮಾತು ಹೇಳಿದ್ದಾರೆ. ಈ ಒಂದು ಮಾತಿಗೆ ಗೌತಮಿ ಸೈಲೆಂಟ್ ರಿಯಾಕ್ಷನ್ ಕೊಟ್ಟಿದ್ದಾರೆ.
ಅತ್ತ ತ್ರಿವಿಕ್ರಮ್ ಅವರ ಬಗ್ಗೆ ಮಾತನಾಡಿದ ರಜತ್, ನೀವು ಈ 50 ದಿನಗಳಲ್ಲಿ ಸಾಧಿಸಿರೋದನ್ನು ನಾನು ವೈಲ್ಡ್ಕಾರ್ಡ್ ಎಂಟ್ರಿ ಮೂಲಕ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. ಇನ್ನು ರಂಜಿತ್ ಅವರು ನಟರಾಗಿದ್ದು, ಕಿರುತೆರೆ ಧಾರಾವಾಹಿಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್, ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಬ್ಯುಸಿನೆಸ್ ನೋಡಿಕೊಳ್ಳುತ್ತಿದ್ದಾರೆ. ರಜತ್ ಕೆಲವು ದಿನಗಳ ಹಿಂದೆ ದರ್ಶನ್-ರೇಣುಕಾಸ್ವಾಮಿ ಘಟನೆ ಬಗ್ಗೆ ಧ್ವನಿ ಎತ್ತಿದ್ದರು.