-ಶೀಲಾ ಸಿ. ಶೆಟ್ಟಿ, ಬೆಂಗಳೂರು
ರೆಟ್ರೊ ಫ್ಯಾಷನ್ನಲ್ಲಿದ್ದ ಬಣ್ಣ ಬಣ್ಣದ ಸಿಕ್ವಿನ್ಸ್ ಸೀರೆ ಬ್ಲೌಸ್ಗಳು (Multi Shade Sequins Blouse Fashion) ಇದೀಗ ಮರಳಿ ಎಂಟ್ರಿ ನೀಡಿವೆ. ಹೌದು, ಇದುವರೆಗೂ ಕೇವಲ ಗೋಲ್ಡ್, ಬ್ಲ್ಯಾಕ್ ಹಾಗೂ ಸಿಲ್ವರ್ ಸಿಕ್ವಿನ್ಸ್ ಹ್ಯಾಂಡ್ ವರ್ಕ್ ಡಿಸೈನ್ಗೆ ಸೀಮಿತವಾಗಿದ್ದ, ಈ ಸೀರೆ ಬ್ಲೌಸ್ಗಳು ಇದೀಗ ಹಸಿರು, ಬಿಳಿ, ಹಳದಿ, ನೀಲಿ, ಕೇಸರಿ ಹೀಗೆ ನಾನಾ ಬಣ್ಣದ ಮಲ್ಟಿ ಶೇಡ್ ಡಿಸೈನ್ನಲ್ಲಿ ಬಿಡುಗಡೆಗೊಂಡಿವೆ. ಸಾದಾ ಸೀರೆ ಜತೆಗೆ ಮ್ಯಾಚ್ ಆಗುತ್ತಾ ಮಾನಿನಿಯರನ್ನು ಆಕರ್ಷಿಸತೊಡಗಿವೆ.
ಏನಿದು ಮಲ್ಟಿ ಶೇಡ್ ಸಿಕ್ವಿನ್ಸ್ ಸೀರೆ ಬ್ಲೌಸ್?
ನೋಡಲು ಮಿನುಗುವ ಚಿಕ್ಕ ಚಿಕ್ಕ ಪ್ಲೇಟ್ ರೂಪದ ಚಮಕಿ ಮೆಟೀರಿಯಲ್ನಿಂದ ಸಿದ್ಧಪಡಿಸಲಾಗುವ ವಿನ್ಯಾಸವಿದು. ಇವನ್ನು ಒಟ್ಟುಗೂಡಿಸಿ ನಾನಾ ಬಗೆಯ ಚಿತ್ತಾರಗಳನ್ನು ಮೂಡಿಸಲಾಗಿರುತ್ತದೆ. ಉದಾಹರಣೆಗೆ, ಹೂ-ಬಳ್ಳಿಯ ವಿನ್ಯಾಸ, ಸೂರ್ಯ-ಚಂದ್ರ, ನಕ್ಷತ್ರ ಹೀಗೆ ಬಗೆಬಗೆಯ ಡಿಸೈನ್ಗಳನ್ನು ಹ್ಯಾಂಡ್ ವರ್ಕ್ನಿಂದಲೇ ಈ ಸಿಕ್ವಿನ್ಸ್ ಬಳಸಿ ಸೃಷ್ಟಿಸಲಾಗಿರುತ್ತದೆ. ಸಾದಾ ಬ್ಲೌಸಿನ ಮೇಲೆ ಆಯಾ ಸೀರೆಗೆ ತಕ್ಕಂತೆ ಡಿಸೈನರ್ಗಳು ಕಸ್ಟಮೈಸ್ ಮಾಡಿರುತ್ತಾರೆ. ಸದ್ಯ ಈ ಮಲ್ಟಿ ಶೇಡ್ನ ಸಿಕ್ವಿನ್ಸ್ ವಿನ್ಯಾಸದ ಸೀರೆ ಬ್ಲೌಸ್ಗಳು ನಾನಾ ರೂಪದಲ್ಲಿ ಮರಳಿವೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಚಾರ್ಮಿ.
ಟ್ರೆಂಡ್ ಸೆಟ್ ಮಾಡಿದ ನಟಿ ನೋರಾ ಸಿಕ್ವಿನ್ಸ್ ಬ್ಲೌಸ್
ಇದಕ್ಕೆ ಪೂರಕ ಎಂಬಂತೆ, ಬಾಲಿವುಡ್ ನಟಿ ನೋರಾ, ಸಾದಾ ಸೀರೆಯೊಂದಿಗೆ ಧರಿಸಿರುವ ಯೆಲ್ಲೋ ಗ್ರೀನ್ ಮಿಕ್ಸ್ ಸಿಕ್ವಿನ್ಸ್ ವರ್ಕ್ ಇರುವ ಮಲ್ಟಿ ಶೇಡ್ನ ಬ್ಲೌಸ್ ಟ್ರೆಂಡಿಯಾಗಿದೆ. ಸೀರೆ ಪ್ರಿಯರನ್ನು ಸೆಳೆದಿದೆ. ಪರಿಣಾಮ, ಈಗಾಗಲೇ ಮಾರುಕಟ್ಟೆಯಲ್ಲಿ ಸೈಡಿಗೆ ಸರಿದಿದ್ದ ರೆಟ್ರೊ ಸಿಕ್ವಿನ್ಸ್ ಬ್ಲೌಸ್ಗಳು ಮರಳಿ ಎಂಟ್ರಿ ನೀಡಿವೆ ಎನ್ನುತ್ತಾರೆ ಬ್ಲೌಸ್ ಡಿಸೈನರ್ಸ್. ಅವರ ಪ್ರಕಾರ, ಒಂದು ಬ್ಲೌಸನ್ನು ಸಾಕಷ್ಟು ಸೀರೆಗಳಿಗೆ ಮ್ಯಾಚ್ ಮಾಡಿ ಧರಿಸಬಹುದಂತೆ.
ಸಾದಾ ಸೀರೆಗಳಿಗೆ ಹೇಳಿಮಾಡಿಸಿದ ಬ್ಲೌಸ್
ಯಾವುದೇ ಸಾದಾ ಸೀರೆಗೆ ಇವು ಹೇಳಿ ಮಾಡಿಸಿದ ಬ್ಲೌಸ್ ಡಿಸೈನ್ಗಳಿವು ಎನ್ನುತ್ತಾರೆ ಸೀರೆ ಸ್ಟೈಲಿಸ್ಟ್ ರಾಜಿ. ಅವರು ಹೇಳುವಂತೆ. ಕಾಮನ್ ಕಲರ್ ಸಿಕ್ವಿನ್ಸ್ ಡಿಸೈನ್ನ ಬ್ಲೌಸ್ಗಳು ಬಹುತೇಕ ಎಲ್ಲಾ ಸೀರೆಗಳಿಗೂ ಮ್ಯಾಚ್ ಮಾಡಬಹುದು ಎನ್ನುತ್ತಾರೆ.
ಈ ಸುದ್ದಿಯನ್ನೂ ಓದಿ | Winter Jacket Fashion: ಈ ಜಮಾನಾದ ಹುಡುಗಿಯರ ವಿಂಟರ್ ಜಾಕೆಟ್ ಫ್ಯಾಷನ್ ಕ್ರೇಜ್ ಹೀಗಿದೆ!
ಮಲ್ಟಿ ಶೇಡ್ ಸಿಕ್ವಿನ್ಸ್ ಸೀರೆ ಬ್ಲೌಸ್ ಸೀಕ್ರೇಟ್ಸ್
- ಫುಲ್ ಅಥವಾ ತ್ರೀ ಫೋರ್ತ್ನ ಮಲ್ಟಿ ಶೇಡ್ ಸಿಕ್ವಿನ್ಸ್ ಬ್ಲೌಸ್ ಟ್ರೆಂಡ್ನಲ್ಲಿಲ್ಲ!
- ಯಾವುದೇ ಸಿಕ್ವಿನ್ಸ್ ಬ್ಲೌಸ್ ಹೊಲೆಸುವುದಾದಲ್ಲಿ, ಲೈನಿಂಗ್ ಹಾಕಿಸುವುದನ್ನು ಮರೆಯಬೇಡಿ.
- ನಾನಾ ಶೈಲಿಯ ರೆಡಿಮೇಡ್ ಸಿಕ್ವಿನ್ಸ್ ಬ್ಲೌಸ್ಗಳು ಎಲ್ಲಾ ಸೈಜ್ನಲ್ಲೂ ದೊರೆಯುತ್ತವೆ.
- ಸೀರೆಗೆ ಯಾವುದೇ ಶೇಡ್ನ ಸಿಕ್ವಿನ್ಸ್ ಬ್ಲೌಸ್ ಮಿಕ್ಸ್ ಮ್ಯಾಚ್ ಮಾಡಬಹುದು.
- ಈ ಬ್ಲೌಸ್ ಧರಿಸಿದಾಗ ಹೆಚ್ಚು ಆಭರಣ ಧರಿಸುವುದನ್ನು ಆವಾಯ್ಡ್ ಮಾಡಿ. ಸಿಕ್ಕಿ ಹಾಕಿಕೊಂಡು ಕಿತ್ತು ಹೋಗುವ ಸಾಧ್ಯತೆಗಳಿರುತ್ತವೆ.
- ಕಸ್ಟಮೈಸ್ಡ್ ಸಿಕ್ವಿನ್ಸ್ ಬ್ಲೌಸ್ ಹೊಲೆಸುವಾಗ ನಿಮ್ಮ ಬಳಿಯಿರುವ ಬಣ್ಣದ ಸೀರೆಗಳಿಗೆ ಹೊಂದುವಂತೆ ಹೊಲೆಸಬಹುದು.
- ಪ್ರತಿಬಾರಿಯೂ ಈ ಬ್ಲೌಸ್ಗಳನ್ನು ಪ್ರತ್ಯೇಕವಾಗಿ ಮಡಿಸಿಡಬೇಕು.
(ಲೇಖಕಿ ಫ್ಯಾಷನ್ ಪತ್ರಕರ್ತೆ)