Monday, 18th November 2024

Tumkur News: ಕನಕ ಜಯಂತಿ ಸರಳ ಆಚರಣೆ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕಚೇರಿಯಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಕನಕದಾಸರ ಜಯಂತಿಯನ್ನು ಸರಳವಾಗಿ, ಆಚರಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶಬಾಬು ತಿಳಿಸಿದರು.

ತಾಲ್ಲೂಕು ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಹುಳಿಯಾರಿನಲ್ಲಿ ಇದೇ ೨೯ ರಂದು ಕನಕ ಪುತ್ಥಳಿ ಅನಾವರಣ ಕಾರ್ಯಕ್ರಮ ವಿಜೃಂಭಣೆಯಿದ ಆಚರಿಸಲು ಪೂರ್ವಭಾವಿ ಸಭೆ ಕರೆದು ಚರ್ಚಿಸಿ ನಿರ್ಧರಿಸಲಾಗಿದೆ. ಆದ್ದರಿಂದ ಇಂದು ಸರಳವಾಗಿ ಕಚೇರಿ ಮಟ್ಟದಲ್ಲಿ ಆಚರಿಸಲಾಗಿದೆ. ಸಹಕರಿಸಿದ ಎಲ್ಲಾ ಕುಲಭಾಂದವರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಬೆಸ್ಕಾಂ ಎಇಇ ಗವಿರಂಗಯ್ಯ ಮಾತನಾಡಿ ಕನಕದಾಸರು ವೆಂಕಟರಮಣ ದೇವರ ವರಪ್ರಸಾದದಿಂದ ಬಚ್ಚಮ್ಮ ಮತ್ತು ಬೀರಪ್ಪ ನಾಯಕ ಎಂಬ ದಂಪತಿಗಳ ಮಗನಾಗಿ ಬಾಡ ಗ್ರಾಮದಲ್ಲಿ ಜನಿಸಿದರು. ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಸಂತನಾಗುವ ಮೊದಲು ಯೋಧನಾಗಿದ್ದ ಇವರು, ಯುದ್ದದಲ್ಲಿ ಗಂಭೀರವಾಗಿ ಗಾಯಗೊಂಡರು. ದೇವರ ಲೀಲೆಯಿಂದ ಬದುಕುಳಿದ ನಂತರ ಅವರು ಯೋಧನಾಗಿದ್ದ ಕೆಲಸವನ್ನು ತ್ಯಜಿಸಿ ಕೀರ್ತನೆಗಳ ಮೂಲಕ ಹರಿದಾಸರಾದರೆಂದು ತಿಳಿಸಿದರು.

ತಹಸೀಲ್ದಾರ್ ಪುರಂದರ್, ಪುರಸಭಾ ಉಪಾಧ್ಯಕ್ಷ ರಾಜಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್ ಕುರುಬ ಸಂಘದ ಅಧ್ಯಕ್ಷ ರಮೇಶ್, ಕನ್ನಡ ಸಂಘದ ಕಾರ್ಯದರ್ಶಿ ಕೃಷ್ಣೇಗೌಡ, ಕಸಾಪ ಅಧ್ಯಕ್ಷ ರವಿಕುಮಾರ್ ಕುರುಬ ಸಮುದಾಯದ ಮುಖಂಡರು ಸಿ.ಡಿ.ಚಂದ್ರಶೇಖರ್, ಸಿ.ಬಿ.ರೇಣುಕ ಸ್ವಾಮಿ ಹಾಗು ಇತರರಿದ್ದರು.

ಇದನ್ನೂ ಓದಿ: #TumkurBreaking