-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವಿಂಟರ್ ಸೀಸನ್ ವೆಡ್ಡಿಂಗ್ ಫ್ಯಾಷನ್‌ನಲ್ಲಿ (Winter Wedding Fashion 2024), ಗ್ರ್ಯಾಂಡ್ ಎಥ್ನಿಕ್‌ವೇರ್ಸ್‌ಗೆ ಹೊಸ ಲುಕ್ ದೊರೆತಿದೆ. ವಧುವಿನ ಸಿಂಗಾರಕ್ಕೆ ಸಾಥ್ ನೀಡುತ್ತಿರುವ ಡಿಸೈನವೇರ್‌ಗಳಿವು. ಹೌದು, ಸಿಂಪಲ್ಲಾಗಿ ಹೇಳುವುದಾದಲ್ಲಿ, ವಧುವಿನ ವರ್ಣಮಯ ಶೃಂಗಾರದಲ್ಲಿ ಈ ಬಾರಿ ಇಂಡೋ-ವೆಸ್ಟರ್ನ್ ಶೈಲಿಯ ಗಾಗ್ರ- ಚೋಲಿ, ಕ್ರಾಪ್ ಸೆಲ್ವಾರ್ ದುಪ್ಪಟಾ, ಗ್ರ್ಯಾಂಡ್ ಹ್ಯಾಂಡ್ ವರ್ಕ್ ಸೀರೆಗಳು, ಪಾಸ್ಟೆಲ್ ಪೇಂಟಿಂಗ್ ಹೂಗಳ ಅಲಂಕಾರದಿಂದ ಕಂಗೊಳಿಸುವ ಸಿಲ್ಕ್, ನೆಟ್ಟೆಡ್ ಹಾಗೂ ಜಾರ್ಜೆಟ್ ಕಲಾತ್ಮಕ ಸೀರೆ, ಫ್ಲೋರಲ್, ಎಂಬಾಲಿಶ್ಡ್ ಡಿಸೈನರ್ ಲೆಹೆಂಗಾಗಳು ಎಂಟ್ರಿ ನೀಡಿವೆ.
ಮದುಮಗನ ಶೃಂಗಾರದಲ್ಲಿರುವ ಡಿಸೈನವೇರ್‌ಗಳು
ಇನ್ನು, ವೆಡ್ಡಿಂಗ್ ಮೆನ್ಸ್ ಫ್ಯಾಷನ್‌ನಲ್ಲಿ ಮದುಮಗನ ಮದುವೆ ಸೂಟ್‌ಗಳು, ವೆಸ್ಟರ್ನ್ & ಭಾರತೀಯ ಸಮ್ಮಿಶ್ರ ಸೂಟ್‌ಗಳು ಹಾಗೂ ರಜಪೂತ್ ಶೈಲಿಯ ಡಿಸೈನವೇರ್‌ಗಳು ಟ್ರೆಂಡಿಯಾಗಿವೆ. ಅವುಗಳಲ್ಲಿ ಕಾಂಟ್ರಾಸ್ಟ್ ಬಣ್ಣಗಳು, ಅವುಗಳ ಮೇಲಿನ ಕುಸುರಿ ಕಲಾ ಪ್ರಕಾರಗಳು, ಚಮಕಿ ಹಾಗೂ ಮಣಿಗಳನ್ನು ಅವುಗಳ ಮೇಲೆ ಬಳಸಿದ ಶೈಲಿ, ಕಾಲರ್ ನೆಕ್ ಎಲ್ಲವೂ ವಿಭಿನ್ನ ಹಾಗೂ ಹಳೆಯ ತಲೆಮಾರುಗಳನ್ನು ನೆನಪಿಸುವ ಗತವೈಭವದ ಪೋಷಾಕುಗಳನ್ನು ನೆನಪಿಸುವ ಆಂಟಿಕ್ ಲುಕ್‌ನ ಡಿಸೈನವೇರ್‌ಗಳು ಆಗಮಿಸಿವೆ. ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲಿ ನಾಯಕರು ಧರಿಸುವಂತಹ ಗ್ರ್ಯಾಂಡ್ ಡಿಸೈನವೇರ್‌ಗಳಿಗೆ ಮೊದಲಿಗಿಂತ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಡಿಸೈನರ್ ಜಗನ್.
ಮದುವೆ ಮನೆಯೂ ಒಂದು ರ‍್ಯಾಂಪ್ ಶೋ
ಫ್ಯಾಷನ್ ಡಿಸೈನರ್ ಮೀರಜ್ ಅವರ ಪ್ರಕಾರ, ಮದುವೆ ಮನೆಯೂ ಫ್ಯಾಷನ್ ರ‍್ಯಾಂಪ್ ಶೋ ಇದ್ದಂತೆ. ಯಾಕೆಂದರೆ, ಇಲ್ಲಿ, ಬಗೆ ಬಗೆಯ ವಿನೂತನ ವಿನ್ಯಾಸಗಳ ಎಥ್ನಿಕ್ ಉಡುಪುಗಳ ಜಾತ್ರೆಯೇ ಇಲ್ಲಿ ನೆರೆದಿರುತ್ತದೆ, ಇದು ಇತ್ತೀಚಿನ ಟ್ರೆಂಡಿಕಾನ್ಸೆಪ್ಟ್‌ಗೆ ಸೇರಿದೆ ಎನ್ನುತ್ತಾರೆ.
ವೆಡ್ಡಿಂಗ್ ಡಿಸೈನರ್ ಸ್ಟುಡಿಯೋ-ಬೋಟಿಕ್‌ಗಳು
ಅಂದಹಾಗೆ ಇದೀಗ ಮೊದಲಿನಂತೆ, ಮದುವೆ ಹಾಗೂ ಇನ್ನಿತರೆ ಸಮಾರಂಭಗಳಿಗೆ ವಾರಗಟ್ಟಲೆ ಬಟ್ಟೆ ಅಂಗಡಿಗಳು ಹಾಘೂ ಶೋ ರೂಂಗಳಿಗೆ ಅಲೆದು ಹುಡುಕಿ ತಡಕಾಡುವ ತಲೆಬಿಸಿ ಕೂಡ ಕಡಿಮೆಯಾಗಿದೆ ಎನ್ನಬಹುದು. ಮದುವೆಗೆ ಅಗತ್ಯವಿರುವ ಜರತಾರಿ ಸೀರೆ, ಕುರ್ತಾ, ಧೋತಿ, ಮದುಮಗನ ಸೂಟ್, ರೇಷ್ಮೆ ಪಂಚೆ, ಧೋತಿ ಹೀಗೆ ಎಲ್ಲವನ್ನು ತಿಂಗಳಾನುಗಟ್ಟಲೇ ತಿರುಗಾಡಿ ಆಯ್ಕೆ ಮಾಡಿ ಖರೀದಿಸುವ ಟ್ರೆಂಡ್ ಕಡಿಮೆಯಾಗಿದೆ. ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಆರ್ಡರ್ ತೆಗೆದುಕೊಂಡು ಅವರವರ ಇಚ್ಛೆಗನುಗುಣವಾಗಿ ಬಣ್ಣ, ವಿನ್ಯಾಸ ಸೇರಿದಂತೆ ವರ್ಣಮಯ ಸಿದ್ಧ ಉಡುಪುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಡಿಸೈನರ್ ಸ್ಟುಡಿಯೋಗಳು ಹಾಗೂ ಬೋಟಿಕ್‌ಗಳು ಮತ್ತು ಡಿಸೈನರ್ಸ್ ಶಾಪ್‌ಗಳು ಹೆಚ್ಚಾಗಿವೆ. ಇದು ಮದುವೆಯಾಗುವವರ ಆಯ್ಕೆಗೆ ತಕ್ಕಂತೆ ಡಿಸೈನವೇರ್‌ಗಳನ್ನು ಪೂರೈಸುತ್ತಿವೆ ಎನ್ನುತ್ತಾರೆ ಡಿಸೈನರ್ ಜಗನ್.
ಈ ಸುದ್ದಿಯನ್ನೂ ಓದಿ | Winter Jacket Fashion: ಈ ಜಮಾನಾದ ಹುಡುಗಿಯರ ವಿಂಟರ್ ಜಾಕೆಟ್ ಫ್ಯಾಷನ್ ಕ್ರೇಜ್ ಹೀಗಿದೆ!
ವಿಂಟರ್ ವೆಡ್ಡಿಂಗ್ ಡಿಸೈನವೇರ್ಸ್ ಆಯ್ಕೆ ಮಾಡುವಾಗ ಗಮನವಿರಲಿ
- ಡಿಸೈನರ್ವೇರ್ಸ್ ಟ್ರೆಂಡಿಯಾಗಿರುವುದನ್ನು ಮೊದಲೇ ಖಚಿತಪಡಿಸಿಕೊಳ್ಳಿ.
- ಯೂನಿಕ್ ಡಿಸೈನ್ನವು ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತವೆ.
- ಬ್ರಾಂಡೆಡ್ ಬದಲು ಲೋಕಲ್ ಡಿಸೈನರ್‌ಗಳ ಬಳಿಯೂ ಖರೀದಿಸಿ, ಪ್ರೋತ್ಸಾಹಿಸಿ.
- ಮರುಬಳಕೆ ಮಾಡಬಹುದಾದಂತಹ ಡಿಸೈನರ್‌ವೇರ್‌ಗಳನ್ನು ಖರೀದಿಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)