Tuesday, 19th November 2024

BBK 11: ಬಿಗ್ ಬಾಸ್ ಮನೆಯಲ್ಲಿ ಮುರಿದುಬಿತ್ತು ಮಂಜು-ಮೋಕ್ಷಿತಾ ನಡುವಣ ಅಣ್ಣ-ತಂಗಿ ಸಂಬಂಧ

Ugramm Manju and Mokshitha Pai (1)

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಆರಂಭದಿಂದಲೂ ಉತ್ತಮ ಬಾಂಡಿಂಗ್ ಕಾಪಾಡಿಕೊಂಡು ಬಂದಿದ್ದ ಉಗ್ರಂ ಮಂಜು-ಗೌತಮಿ ಜಾಧವ್ ಹಾಗೂ ಮೋಕ್ಷಿತಾ ನಡುವಣ ಅಣ್ಣ-ತಂಗಿ ಸಂಬಂಧದಲ್ಲಿ ಕೆಲ ದಿನಗಳ ಹಿಂದೆ ಕೊಂಚ ಬಿರುಕು ಮೂಡಿತ್ತು. ಮೂವರು ಟಾಸ್ಕ್ ಮಧ್ಯೆ ಮನೆಯೊಳಗೆ ಜಗಳ ಆಡಿದ್ದರು. ಕೆಲ ಸಮಯ ದೂರ-ದೂರ ಕೂಡ ಆಗಿದ್ದರು. ಆದರೆ, ದಿನ ಮುಗಿಯುವ ಹೊತ್ತಿಗೆ ಮೂವರೂ ಮತ್ತೆ ಒಂದಾಗಿದ್ದರು. ಆದರೀಗ ಈ ಗುಂಪಿನಿಂದ ಮೋಕ್ಷಿತಾ ದೂರವಾಗಿದ್ದಾರೆ.

ಇಷ್ಟು ದಿವಸ ಅಣ್ಣ ತಂಗಿಯಂತೆ ಇದ್ದವರು ಮೋಕ್ಷಿತಾ ಮತ್ತು ಉಗ್ರಂ ಮಂಜು. ಆದರೆ, ಸೋಮವಾರ ಮಡಿಕೆ ಒಡೆದು ನಾಮಿನೇಟ್ ಮಾಡುವ ಹೆಸರು ಸೂಚಿಸುವಂತೆ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಸೂಚಿಸಿದ್ದಾರೆ. ಇದರಲ್ಲಿ ಮಂಜು ಅವರನ್ನೇ ಮೋಕ್ಷಿತಾ ನಾಮಿನೇಟ್ ಮಾಡಿದ್ದು ಹೊಸ ತಿರುವು ನೀಡಿದಂತಿದೆ.

ಮೋಕ್ಷಿತಾ ಪೈ ಅವರು, ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ. ​ಮಂಜಣ್ಣನ ಕೆಲವು ಮಾತುಗಳು ನನಗೆ ಕುಗ್ಗಿಸುತ್ತದೆ ಅಂತ ಹೇಳಿದ್ದಾರೆ. ಅದಕ್ಕೆ ಮಂಜಣ್ಣ ಇನ್ಮುಂದೆ ನನಗೆ ಅಣ್ಣ ಅಂತ ಕರಿಬೇಡ ಎಂದು ನೇರವಾಗಿ ಹೇಳಿ ಮೋಕ್ಷಿತಾ ಅವರನ್ನು ನಾಮಿನೇಟ್​ ಮಾಡಿದ್ದಾರೆ.

ಇನ್ನು ಇವರ ಮನೆಯೊಳಗಿನ ಇವರ ಸ್ನೇಹದ ಬಗ್ಗೆ ಬಿಗ್ ಬಾಸ್​ನಿಂದ ಹೊರಬಂದ ಅನುಷಾ ರೈ ಕೂಡ ಮಾತನಾಡಿದ್ದು, ಮನೆಗೆ ಎಂಟ್ರಿ ಕೊಟ್ಟ ದಿನದಿಂದ ಮೋಕ್ಷಿತಾ, ಮಂಜು ಹಾಗೂ ಗೌತಮಿ ಜಾಧವ್ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಆ ಸ್ನೇಹ ಹೆಚ್ಚು ದಿನ ಉಳಿಯಲ್ಲ. ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಹೀಗಾಗಿ ಈ ಗುಂಪಿನಿಂದ ಮೋಕ್ಷಿತಾ ಆಚೆ ಬಂದರು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೆ ಚೆಂಡನ್ನು ಗೋಲ್​ಗೆ ತಳ್ಳುವ ಆಟದಲ್ಲಿ ಉಗ್ರಂ ಮಂಜು ಇನ್ನೊಂದು ತಂಡದ ಜೊತೆಗೆ ಕೈಜೋಡಿಸಿ ಗೆಳೆಯರಾದ ಗೌತಮಿ ಮತ್ತು ಮೋಕ್ಷಿತಾ ತಂಡಕ್ಕೆ ಕೈಕೊಟ್ಟಿದ್ದಾರೆ. ಇದು ಗೌತಮಿ-ಮೋಕ್ಷಿತಾಗೆ ತೀವ್ರ ಸಿಟ್ಟು ತರಿಸಿತು. ಮಂಜು ಹೈಲೆಟ್​ ಆಗೋದಿಕ್ಕೆ ನೋಡುತ್ತಿದ್ದಾರೆ ಬಂದಾಗಿನಿಂದಲೂ. ನೀವು ಒಬ್ಬರೇ ಬಂದಿರೋದು, ನಿಮಗಾಗಿ ಅಷ್ಟೇ ಆಡಿ ಎಂದು ಮೋಕ್ಷಿತಾ ಹೇಳಿದ್ದರು. ನಾನು ಈ ಅಣ್ಣ-ತಂಗಿ ಸಂಬಂಧಕ್ಕೆ ಫುಲ್ ಸ್ಟಾಪ್ ಇಡುತ್ತಿದ್ದೇನೆ ಎಂದು ಮೋಕ್ಷಿತಾ ಅವರು ನೇರವಾಗಿ ಮಂಜು ಬಳಿಯೇ ಹೇಳಿದ್ದರು.

BBK 11: ರಜತ್ ಹೊಡೆದುರುಳಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದ ಮಂಜು-ತ್ರಿವಿಕ್ರಮ್