ಮುಂಬೈ : ಎನ್‌ಸಿಪಿ ನಾಯಕ (NCP) ಮತ್ತು ಮಹಾರಾಷ್ಟ್ರದ (Maharashtra ex Home Minister) ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ (Anil Deshmukh) ಅವರ ಕಾರಿನ ಮೇಲೆ ನವೆಂಬರ್ 18 ಸೋಮವಾರದಂದು ನಾಗ್ಪುರ (Nagpur) ಬಳಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ದೇಶ್‌ಮುಖ್ ತಲೆಗೆ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ.
Nagpur, Maharashtra | NCP-SCP leader Anil Deshmukh alleges that some people pelted stones at his car on Katol Jalalkheda Road in Katol Assembly Constituency. He suffered injuries in the incident and is being taken to a nearby hospital.
— ANI (@ANI) November 18, 2024
Anil Deshmukh's son Salil is contesting the… pic.twitter.com/lwAuzCvOxs
ಸಚಿವರು ನಾಗ್ಪುರದಿಂದ ಹಿಂತಿರುಗುತ್ತಿದ್ದಾಗ ಕಟೋಲ್ ವಿಧಾನಸಭೆಯ ಕಟೋಲ್ ಜಲಖೇಡ ರಸ್ತೆಯಲ್ಲಿ ಕೆಲವು ಕಿಡಿಗೇಡಿಗಳು ಅವರ ಕಾರಿಗೆ ಕಲ್ಲು ತೂರಾಟ ನಡೆಸಿದ್ದಾರೆ. ದೇಶ್‌ಮುಖ್ ತಮ್ಮ ಪುತ್ರನ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂದಿರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮಾಜಿ ಗೃಹ ಸಚಿವರು ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದರು. ಅವರ ಕಾರಿನ ಕಿಟಕಿ ತೆರೆದಿತ್ತು ಎಂದು ಹೇಳಲಾಗುತ್ತಿದೆ. ಅನಿಲ್ ದೇಶಮುಖ್ ಅವರ ಪುತ್ರ ಸಲೀಲ್ ಅವರು ಎನ್‌ಸಿಪಿ ಶರದ್ ಪವಾರ್ ಅವರ ಪಕ್ಷದಿಂದ ಕಟೋಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ.
Former Home Minister Anil Deshmukh Injured in Stone Attack During Last Day of Campaigning near Nagpur➡️ https://t.co/7AHro1WyTk#nagpurnews #nagpur #viralnews #anildeshmukh #nagpurpolice #Election2024 #accident #nagpur pic.twitter.com/TINTzQ2UbX
— nagpurnews (@nagpurnews3) November 18, 2024
ಸಾಮಾಜಿಕ ಜಾಲತಾಣದಲ್ಲಿ ಅನಿಲ್ ದೇಶ್‌ಮುಖ್ ತಲೆಯಿಂದ ರಕ್ತಸ್ರಾವವಾಗುತ್ತಿರುವುದನ್ನು ವೀಡಿಯೋಗಳು ಕಾಣಿಸಿಕೊಂಡಿದೆ. ಘಟನೆಯಲ್ಲಿ ಅವರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ನವೆಂಬರ್ 23ರಂದು ರಾಜ್ಯದ ಮತಗಳ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಮಿತ್ರಪಕ್ಷಗಳಾದ ಶಿವಸೇನೆ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ.
ಇದನ್ನೂ ಓದಿ : Maharashtra Election: ಮಹಾರಾಷ್ಟ್ರ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ