ಪರ್ತ್: ರೋಹಿತ್ ಶರ್ಮ ಅಲಭ್ಯದಲ್ಲಿ ಪರ್ತ್‌ನಲ್ಲಿ ನಡೆಯುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ(IND vs AUS) ತಂಡವನ್ನು ಮುನ್ನಡೆಸಲಿರುವ ವೇಗಿ ಜಸ್‌ಪ್ರೀತ್ ಬುಮ್ರಾಗೆ(Jasprit Bumrah) ಈ ಸರಣಿಯಲ್ಲಿ ಭಾರತದ ದಿಗ್ಗಜ ಬೌಲರ್‌ಗಳ ದಾಖಲೆ ಮುರಿಯುವ ಅವಕಾಶವಿದೆ.
ಬುಮ್ರಾ 5 ಪಂದ್ಯಗಳ ಸರಣಿಯಿಂದ 20 ವಿಕೆಟ್ ಕಲೆ ಹಾಕಿದರೆ, ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ. ಸದ್ಯ ದಾಖಲೆ ಮಾಜಿ ನಾಯಕ ಕಪಿಲ್ ದೇವ್ ಹೆಸರಿನಲ್ಲಿದೆ. ಕಪಿಲ್ ಆಸಿಸ್‌ನಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿ 51 ವಿಕೆಟ್ ಪಡೆದಿದ್ದಾರೆ. ಬುಮ್ರಾ ಇದುವರೆಗೆ 7* ಪಂದ್ಯಗಳನ್ನಾಡಿದ್ದು, 32 ವಿಕೆಟ್ ಪಡೆದಿದ್ದಾರೆ. ಕಪಿಲ್ ದೇವ್(Kapil Dev) ಮಾತ್ರವಲ್ಲದೆ ಅನಿಲ್ ಕುಂಬ್ಳೆ ಮತ್ತು ಬಿಶನ್ ಸಿಂಗ್ ಬೇಡಿ ದಾಖಲೆಯನ್ನು ಮುರಿಯುವ ಅವಕಾಶ ಕೂಡ ಬುಮ್ರಾ ಮುಂದಿದೆ.
ಅನಿಲ್ ಕುಂಬ್ಳೆ ಆಸೀಸ್ ನೆಲದಲ್ಲಿ (49), ಆರ್.ಅಶ್ವಿನ್ (39), ಬಿಶನ್ ಸಿಂಗ್ ಬೇಡಿ (35) ವಿಕೆಟ್ ಕಿತ್ತಿದ್ದಾರೆ. ಅಶ್ವಿನ್ ಕೂಡ ಈ ಬಾರಿ ಸರಣಿಯ ಭಾಗವಾಗಿರುವ ಕಾರಣ ಅವರಿಗೂ ಕೂಡ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯುವ ಅವಕಾಶವಿದೆ. ಒಟ್ಟಾರೆ ಬುಮ್ರಾ ಮತ್ತು ಅಶ್ವಿನ್ ಮಧ್ಯೆ ದಾಖಲೆ ತಮ್ಮದಾಗಿಸಿಕೊಳ್ಳಲು ತೀವ್ರ ಪೈಪೋಟಿ ಏರ್ಪಡುವುದು ಖಚಿತ ಎನ್ನಲಡ್ಡಿಯಿಲ್ಲ.
ಉಭಯ ತಂಡಗಳು
ಭಾರತ: ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ (ಮೊದಲ ಪಂದ್ಯಕ್ಕೆ ನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ಧ್ರುವ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಆಕಾಶ್‌ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್.
ಮೊದಲ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ನಾಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್.