ಮುಂಬಯಿ: ಆಸ್ಟ್ರೇಲಿಯಾ(INDW vs AUSW) ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ 16 ಸದಸ್ಯರ ಭಾರತ ಮಹಿಳಾ ತಂಡ(Indian women’s team) ಪ್ರಕಟವಾಗಿದೆ. ಯುವ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ(Shafali Verma) ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಆಲ್ರೌಂಡರ್ ಹರ್ಲೀನ್ ಡಿಯೋಲ್(Harleen Deol) ಸುಮಾರು ಒಂದು ವರ್ಷದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಹರ್ಮನ್ಪ್ರೀತ್ ಕೌರ್ ನಾಯಕಿಯಾಗಿ ಮುಂದುವರಿದಿದ್ದಾರೆ. ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಮೊದಲ ಪಂದ್ಯ ಡಿ. 5ರಂದು ನಡೆಯಲಿದೆ.
ಮೊದಲ ಎರಡು ಪಂದ್ಯಗಳು ಕ್ರಮವಾಗಿ ಬ್ರಿಸ್ಬೇನ್ನ ಅಲನ್ ಬಾರ್ಡರ್ ಫೀಲ್ಡ್ನಲ್ಲಿ ಡಿಸೆಂಬರ್ 5 ಮತ್ತು ಡಿಸೆಂಬರ್ 8 ರಂದು ನಡೆಯಲಿದ್ದು, ಡಿಸೆಂಬರ್ 11 ರಂದು ನಡೆಯುವ ಸರಣಿಯ ಅಂತಿಮ ಪಂದ್ಯ ಪರ್ತ್ನಲ್ಲಿ ನಡೆಯಲಿದೆ. ಈ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್ಶಿಪ್ನ ಭಾಗವಾಗಿದೆ.
ಶಫಾಲಿ ಈ ವರ್ಷ ಆಡಿದ ಆರು ಪಂದ್ಯಗಳಲ್ಲಿ ಕೇವಲ 108 ರನ್ ಗಳಿಸಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಇದೇ ಕಾರಣಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರ ಜತೆ ಉಮಾ ಚೆಟ್ರಿ, ದಯಾಳನ್ ಹೇಮಲತಾ, ಕನ್ನಡತಿ ಶ್ರೇಯಾಂಕಾ ಪಾಟೀಲ್ ಮತ್ತು ಸಯಾಲಿ ಸತ್ಘರೆ ಅವರನ್ನು ಕೈ ಬಿಡಲಾಗಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ನ್ಯೂಜಿಲ್ಯಾಂಡ್(New Zealand) ವಿರುದ್ಧ ತವರಿನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದ ವಿಕೆಟ್ ಕೀಪರ್ ರಿಚಾ ಘೋಷ್(Richa Ghosh) ಮತ್ತೆ ತಂಡ ಸೇರಿದ್ದಾರೆ. ಹರ್ಲೀನ್ ಕೂಡ ವರ್ಷದ ಬಳಿಕ ತಂಡಕ್ಕೆ ಮರಳಿದ್ದಾರೆ. 2023ರ ಡಿಸೆಂಬರ್ನಲ್ಲಿ ಅವರು ಕೊನೆಯ ಬಾರಿಗೆ ಭಾರತ ಪರ ಆಡಿದ್ದರು.
ಇದನ್ನೂ ಓದಿ IND vs AUS: ಕಪಿಲ್ ದೇವ್ ದಾಖಲೆ ಮುರಿಯಲು ಬುಮ್ರಾ, ಅಶ್ವಿನ್ ಮಧ್ಯೆ ತೀವ್ರ ಪೈಪೋಟಿ
ತಂಡ
ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರಿಯಾ ಪೂನಿಯಾ, ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ಯಾಸ್ತಿಕಾ ಭಾಟಿಯಾ (ವಿ.ಕೀ), ರಿಚಾ ಘೋಷ್ (ವ.ಕೀ), ತೇಜಲ್ ಹಸಬ್ನಿಸ್, ದೀಪ್ತಿ ಶರ್ಮಾ, ಮಿನ್ನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ಟಿಟಾಸ್ ಸಾಧು , ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಸೈಮಾ ಠಾಕೂರ್.
ವೇಳಾಪಟ್ಟಿ
ಮೊದಲ ಏಕದಿನ; ಡಿ.5, ತಾಣ; ಬ್ರಿಸ್ಬೇನ್
ದ್ವಿತೀಯ ಏಕದಿನ; ಡಿ. 8, ತಾಣ;ಬ್ರಿಸ್ಬೇನ್
ಮೂರನೇ ಏಕದಿನ; ಡಿ.11, ತಾಣ; ಪರ್ತ್