ಮುಂಬೈ: ಬಾಲಿವುಡ್ ನಟಿ ತಾಪ್ಸಿ ಪನ್ನು ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ಪಾಪರಾಜಿಗಳೊಂದಿಗೆ ತಮಾಷೆ ಮಾಡಿದ್ದಾರೆ. ಖುಷಿಯ ಮೂಡ್ನಲ್ಲಿರುವ ನಟಿ, ಸೋಶಿಯಲ್ ಮೀಡಿಯಾದಲ್ಲಿ ತನ್ನ ನೆಗೆಟಿವ್ ವಿಡಿಯೊಗಳನ್ನು ಮಾತ್ರ ಅಪ್ಲೋಡ್ ಮಾಡಬೇಕು ಎಂದು ಪಾಪರಾಜಿಗಳೊಂದಿಗೆ ತಮಾಷೆ ಮಾಡಿದ್ದಾರೆ. ಪಾಪರಾಜಿಗಳೊಂದಿಗಿನ ಅವರ ಈ ಸಂವಾದದ ವಿಡಿಯೊ ಈಗ ವೈರಲ್(Taapsee Pannu) ಆಗಿದೆ.
“ಕ್ಯಾಪ್ಷನ್ ಖರಾಬ್ ಲಿಖ್ನಾ, ಮೇರಿ ಇಮೇಜ್ ಅಚ್ಛಿ ಮತ್ ಕರ್ನಾ … ಗಂದಿ ಬಾತೆ ಹಿ ಲಿಖ್ನಿ ಹೈ ಬಾಸ್….ಎಂದೆಲ್ಲಾ ವ್ಯಂಗ್ಯವಾಗಿ ಮಾತನಾಡಿದ್ದಾರೆ.“ನನ್ನ ವೈಯಕ್ತಿಕ ಕೆಲಸದಲ್ಲಿ ಇರುವಾಗ ನನ್ನ ಅನುಮತಿಯಿಲ್ಲದೆ ನೀವು ಕ್ಯಾಮೆರಾವನ್ನು ನನ್ನ ಮುಖಕ್ಕೆ ಹಿಡಿದರೆ, ನಾನು ಅದಕ್ಕೆ ಖುಷಿಪಟ್ಟು ನಿಮಗೆ ಪೋಸ್ ನೀಡುತ್ತೇನೆ ಎಂದು ನೀವು ನಿರೀಕ್ಷಿಸುವುದು ನ್ಯಾಯವಲ್ಲ” ಎಂದು ಅವರು ಕುಟುಕಿದ್ದಾರೆ.
ಪಾಪರಾಜಿಗಳೊಂದಿಗಿನ ವರ್ತನೆಗಾಗಿ ನಟಿ ತಾಪ್ಸಿ ಪನ್ನು ಅನೇಕ ಸಂದರ್ಭಗಳಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರು ಆಗಾಗ್ಗೆ ಪಾಪರಾಜಿಗಳಿಗೆ ಬೈಯುವುದನ್ನು ಕಾಣಬಹುದು, ಮತ್ತು ನೆಟ್ಟಿಗರು ಅವರಿಗೆ ‘ಜಯಾ ಬಚ್ಚನ್ 2.0’ ಎಂಬ ಅಡ್ಡಹೆಸರನ್ನು ಸಹ ಇಟ್ಟಿದ್ದಾರೆ. ಏಕೆಂದರೆ ಹಿರಿಯ ನಟಿ ಜಯಾ ಬಚ್ಚನ್ ಅವರು ಕೂಡ ಯಾವಾಗಲೂ ಪಾಪರಾಜಿಗಳೊಂದಿಗೆ ತಾಳ್ಮೆ ಕಳೆದುಕೊಳ್ಳುವ ವಿಚಾರಕ್ಕೆ ಹೆಸರುವಾಸಿಯಾಗಿದ್ದಾರೆ.
ಈ ಹಿಂದೆ ಸಂದರ್ಶನವೊಂದರಲ್ಲಿ, ತಾಪ್ಸಿ ಪನ್ನು ಪಾಪರಾಜಿಗಳ ಬಗ್ಗೆ ಕಿಡಿಕಾರಿದ್ದಾರೆ. ಅವರು ಮಾಡಿದ್ದೇಲ್ಲಾ ಸರಿ ಎಂದು ಹೇಳಲಾಗದು ಎಂದಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಫೋಟೋಗಳು ಮತ್ತು ಶೀರ್ಷಿಕೆಗಳನ್ನು ನೀಡುವ ಮೂಲಕ ಅವರು ಕೆಲವೊಮ್ಮೆ ಸೆಲೆಬ್ರಿಟಿಗಳನ್ನು ಕೆಟ್ಟವರೆಂದು ಬಿಂಬಿಸುತ್ತಾರೆ. ಅದು ನನಗೆ ಸರಿ ಎಂದು ಎನಿಸಿಲ್ಲ” ಎಂದು ಹೇಳಿದ್ದಾರೆ.
ತಾಪ್ಸಿ ಈ ವರ್ಷ ಎರಡು ಪ್ರಮುಖ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅವರು ತಮ್ಮ 2021 ರ ಚಿತ್ರ ಹಸೀನ್ ದಿಲ್ರುಬಾದ ಮುಂದುವರಿದ ಭಾಗವಾದ ಫಿರ್ ಆಯಿ ಹಸೀನ್ ದಿಲ್ರುಬಾದಲ್ಲಿ ರಾಣಿ ಕಶ್ಯಪ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಾ.. ಇದೆಂಥಾ ಅಚಾತುರ್ಯ! ಸಹಾಯಕ್ಕಾಗಿ 911ಗೆ ಕರೆ ಮಾಡಿದವನನ್ನೇ ಗುಂಡಿಕ್ಕಿ ಕೊಂದ ಪೊಲೀಸರು!
ಇದಲ್ಲದೆ, ಅಕ್ಷಯ್ ಕುಮಾರ್, ಅಮ್ಮಿ ವಿರ್ಕ್, ಪ್ರಜ್ಞಾ ಜೈಸ್ವಾಲ್, ವಾಣಿ ಕಪೂರ್ ಮತ್ತು ಇತರರು ನಟಿಸಿದ ಖೇಲ್ ಖೇಲ್ ಮೇ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.