ಬೆಂಗಳೂರು: ಕೇಂದ್ರ ಸರ್ಕಾರ (Central government) ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ (Good news) ನೀಡಿದೆ. ಕರ್ನಾಟಕದ ಮೊದಲ ʼವಂದೇ ಭಾರತ್ʼ ಸ್ಲೀಪರ್ ರೈಲು (Vande Bharat sleeper train) ಆರಂಭಕ್ಕೆ ಸಿದ್ದತೆ ನಡೆದಿದ್ದು, ಮುಂದಿನ ತಿಂಗಳಿನಿಂದ ಈ ರೈಲು ಸಂಚಾರ ನಡೆಸಲಿದೆ.
ಈ ಹೊಸ ಸೇವೆಯು ಬೆಂಗಳೂರು ಮತ್ತು ಬೆಳಗಾವಿಯನ್ನು ಸಂಪರ್ಕಿಸಲಿದ್ದು, ಪ್ರಯಾಣಿಕರಿಗೆ ವೇಗ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ನೀಡುತ್ತದೆ. ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಂದಿನ ತಿಂಗಳು ರೈಲು ಸಂಚಾರ ಆರಂಭಿಸಲಿದೆ ಎಂದು ಘೋಷಿಸಿದ್ದು, ರಾಜ್ಯದ ಸಾರಿಗೆ ಮೂಲಸೌಕರ್ಯಕ್ಕೆ ಮಹತ್ವದ ಹೆಜ್ಜೆ ಇಡಲಿದೆ.
ಮೊದಲ ಸ್ಲೀಪರ್ ವಂದೇ ಭಾರತ್ ರೈಲುಗಳ ಟಿಕೆಟ್ ದರಗಳು ರಾಜಧಾನಿ ಎಕ್ಸ್‌ಪ್ರೆಸ್ ದರಗಳಿಗೆ ಸಮನಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿವಿಧ ವರ್ಗಗಳಿಗೆ ಅಂದಾಜು ಬೆಲೆಗಳು ಇಲ್ಲಿವೆ:
ಎಸಿ 3 ಶ್ರೇಣಿ: ₹3200-3400
ಎಸಿ 2 ಶ್ರೇಣಿ: ₹4400-4500
ಪ್ರಥಮ ದರ್ಜೆ ಎಸಿ: ₹5400-5500
ಪ್ರಸ್ತುತ, ಪುಣೆ – ಬೆಳಗಾವಿ ವಂದೇ ಭಾರತ್ ರೈಲಿನಿಂದ ಕರ್ನಾಟಕವು ಈಗಾಗಲೇ ಪ್ರಯೋಜನ ಪಡೆಯುತ್ತಿದೆ. ಆದಾಗ್ಯೂ, ಮುಂಬರುವ ಸ್ಲೀಪರ್ ಸೇವೆಯು ರಾಜ್ಯದಲ್ಲಿ ಮೊದಲನೆಯದಾಗಿದ್ದು, ಬೆಂಗಳೂರು ಮತ್ತು ಬೆಳಗಾವಿ ನಡುವಿನ ಆರಾಮದಾಯಕ ಪ್ರಯಾಣದ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ.
ಇದನ್ನೂ ಓದಿ: ವಂದೇ ಭಾರತ್ ರೈಲುಗಳಲ್ಲಿ ಇಂದಿನಿಂದ ಮಿರಾಕಲ್ ಸ್ವಚ್ಛತಾ ಪರಿಕಲ್ಪನೆ ಆರಂಭ