ಲಖನೌ : ಸಾವು ಎಲ್ಲಿ, ಯಾವಾಗ, ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ ಅದರಂತೆ ಇಲ್ಲೊಬ್ಬ ವ್ಯಕ್ತಿ ತನ್ನ ಮದುವೆ ಸಂಭ್ರಮದಲ್ಲಿದ್ದ. ಮನೆ ಮಂದಿ ಎಲ್ಲಾ ಸೇರಿ ಮಗನ ಮದುವೆಯನ್ನು ಅದ್ಧೂರಿಯಾಗಿ ನಡೆಸಲು ತಯಾರಿ ನಡೆಸಿದ್ದರು. ಆದರೆ ದುರ್ವಿಧಿ ಅಂದರೆ ಇದೇ ಇರಬೇಕು ಮದುವೆಯಲ್ಲಿ ಸಂಬಂಧಿಕರ ಜೊತೆ ನೃತ್ಯ ಮಾಡುತ್ತಲೇ ಹೃದಯಾಘಾತಗೊಂಡು ಮದುಮಗ ಮೃತಪಟ್ಟ ಘಟನೆ ಭಾನುವಾರ(ನ.17) ಉತ್ತರ ಪ್ರದೇಶದ (Uttar pradesh) ಹತ್ರಾಸ್ನಲ್ಲಿ ನಡೆದಿದ್ದು ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಸದ್ಯ ಆತ ಕುಸಿದು ಬಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. (Viral News)
हाथरस, यूपी में शादी के दिन दूल्हे शिवम की मौत हो गई। डांस के बाद वो भात कार्यक्रम में जाकर बैठा और वहीं जमीन पर गिर पड़ा। डॉक्टर इसे साइलेंट अटैक मान रहे हैं।@madanjournalist pic.twitter.com/u8gsUKZobM
— Sachin Gupta (@SachinGuptaUP) November 18, 2024
ಮೃತ ದುರ್ದೈವಿಯನ್ನು ಹತ್ರಾಸ್ ಜಿಲ್ಲೆಯ ಭೋಜ್ಪುರ ಗ್ರಾಮದ ನಿವಾಸಿ ಶಿವಂ (22) ಎಂದು ಗುರುತಿಸಲಾಗಿದೆ. ಶಿವಂ ಇಲ್ಲಿನ ಶಾಲೆಯೊಂದರಲ್ಲಿ ಕಂಪ್ಯೂಟರ್ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದ್ದು ಆಗ್ರಾದ ಮೋಹಿನಿ ಅವರೊಂದಿಗೆ ವಿವಾಹವಾಗಬೇಕಿತ್ತು ಅದರಂತೆ ಶಿವಂ ಮನೆಯಲ್ಲಿ ಸಂಭ್ರಮ ಮನೆಮಾಡಿತ್ತು. ಮದುವೆ ಕಾರ್ಯಕ್ಕೆ ಕುಟುಂಬ ಸದಸ್ಯರು ಎಲ್ಲರು ಮನೆಗೆ ಬಂದಿದ್ದರು.
ಸೋಮವಾರ(ನ.18) ರಂದು ಮದುವೆ ನಡೆಯಬೇಕಿತ್ತು. ಮನೆಯಲ್ಲಿ ಸಂಭ್ರಮದಿಂದ ಎಲ್ಲರು ಮದುವೆ ತಯಾರಿ ನಡೆಸುತ್ತಿದ್ದರು. ಭಾನುವಾರ ಕುಟುಂಬ ಸದಸ್ಯರ ಜೊತೆಗೆ ಶಿವಂ ನೃತ್ಯ ಮಾಡುತ್ತಿದ್ದ ಈ ವೇಳೆ ಏಕಾಏಕಿ ಹೃದಯಾಘಾತವಾಗಿದೆ ಕೂಡಲೇ ಕುಟುಂಬ ಸದಸ್ಯರು ಆತನನ್ನು ಆಸ್ಪತ್ರೆಗೆ ಕರೊದೊಯ್ದಿದ್ದಾರೆ ಆದರೆ ಅಷ್ಟು ಹೊತ್ತಿಗಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮದುವೆಯಾಗಬೇಕಾಗಿದ್ದ ಮಸಣ ಸೇರಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಮದುವೆ ಕಣ್ಣುತುಂಬಿಕೊಳ್ಳುಲು ಕಾತುರದಿಂದ ಕಾಯುತ್ತಿದ್ದ ಆತನ ಪಾಲಕರಿಗೆ ದಿಕ್ಕು ತೋಚದಂತಾಗಿದೆ.
ಇದನ್ನೂ ಓದಿ : Viral Video: ರೆಸ್ಟೋರೆಂಟ್ನಲ್ಲಿ ಊಟ ಮಾಡ್ತಿದ್ದ ಯುವಕನಿಗೆ ಮುಖಾಮೂತಿ ನೋಡದೇ ಚಚ್ಚಿದ ಮಾಜಿ ಶಾಸಕನ ಪುತ್ರ; ಶಾಕಿಂಗ್ ವಿಡಿಯೋ ವೈರಲ್
ಪ್ರತ್ಯೇಕ ಪ್ರಕರಣದಲ್ಲಿ, ವ್ಯಕ್ತಿ ದೇವರ ದರ್ಶನಕ್ಕೆ ಬಂದವನು ಶಿವನ ಪಾದ ಸೇರಿದ್ದಾನೆ. ಈ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುತ್ತಿದ್ದವನಿಗೆ ಎದೆ ನೋವು ಕಾಣಿಸಿಕೊಂಡಿದೆ. ನೋವು ತಡೆಯಲಾಗದೇ ಅಲ್ಲಿಯೇ ಕುಳಿತುಕೊಂಡಿದ್ದಾನೆ ಅಷ್ಟೇ, ಪ್ರಾಣ ಪಕ್ಷಿ ಹಾರಿ ಹೋಗಿದೆ. ಮೃತಪಟ್ಟ ವ್ಯಕ್ತಿಯನ್ನು ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿ ಮಂಡಲದ ಕೆ.ವಿಷ್ಣುವರ್ಧನ್ ಎಂದು ಗುರುತಿಸಲಾಗಿದೆ.