Friday, 22nd November 2024

Viral Video: ಪಿರಮಿಡ್ ಏರಿದ ಬೀದಿ ನಾಯಿಯನ್ನು ನೋಡಲು ಜನವೊ ಜನ! ವಿಡಿಯೊ ನೋಡಿ

Viral Video

ಇತ್ತೀಚೆಗೆ ಈಜಿಪ್ಟ್‌ನ ಗಿಜಾದಲ್ಲಿರುವ ಖಾಫ್ರೆ ಗ್ರೇಟ್ ಪಿರಮಿಡ್‍ ಅನ್ನು 3 ವರ್ಷದ ಅಪೊಲೊ ಎಂಬ ಬೀದಿ ನಾಯಿ ಹತ್ತಿದ್ದು, ಅದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ಈಗ ವೈರಲ್(Viral Video) ಅಗಿ ಸಾಕಷ್ಟು ಜನರ ಗಮನ ಸೆಳೆದಿದೆ. ಅಪೊಲೊ ಪಿರಮಿಡ್‍ ಏರುವ ದೃಶ್ಯವನ್ನು ಅಮೆರಿಕದ ಪ್ಯಾರಾಗ್ಲೈಡಿಂಗ್ ಉತ್ಸಾಹಿ ಅಲೆಕ್ಸ್ ಲ್ಯಾಂಗ್ ವಿಡಿಯೊ ಮಾಡಿದ್ದಾರೆ ಮತ್ತು ಅವರ ಸ್ನೇಹಿತ ಮಾರ್ಷಲ್ ಮೋಶರ್ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಾಯಿ ಅಪೊಲೊ 136 ಮೀಟರ್ ಪಿರಮಿಡ್ ಅನ್ನು ಸುಲಭವಾಗಿ ಏರುವುದನ್ನು ಮತ್ತು ಅಲ್ಲಿ ಮೇಲ್ಭಾಗದಲ್ಲಿರುವ ಪಕ್ಷಿಗಳನ್ನು ನೋಡಿ ಬೊಗಳುವುದನ್ನು ರೆಕಾರ್ಡ್‌ ಮಾಡಲಾಗಿದೆಯಂತೆ.

ಈ ವಿಡಿಯೊ ಕೆಲವೇ ದಿನಗಳಲ್ಲಿ ವೈರಲ್ ಆಗಿದ್ದು, ಪಿರಮಿಡ್ ಏರಿದ ನಾಯಿಯನ್ನು ನೋಡಲು ಜನರು ಅಲ್ಲಿಗೆ ಭೇಟಿ ನೀಡಿದ್ದಾರೆ. ಇದರಿಂದ ಅಪೊಲೊವನ್ನು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿ ಗುರುತಿಸಲಾಗಿದೆ. ಅಪೊಲೊ ಪಡೆದ ಈ ಖ್ಯಾತಿಯಿಂದ  ಸ್ಥಳೀಯ ಪ್ರವಾಸೋದ್ಯಮ ಉದ್ಯಮದ ಮೇಲೆ ಧನಾತ್ಮಕ ಪ್ರಭಾವ ಬೀರಿದೆ. ಜನರು ಹಳೆಯ ಪಿರಮಿಡ್‍ಗಳನ್ನು ನೋಡಲು ಮಾತ್ರವಲ್ಲದೆ ಅಪೊಲೊ ಬೀದಿ ನಾಯಿಯನ್ನು ನೋಡಲು ಕೂಡ ಬರುತ್ತಾರೆ. ಅಲ್ಲಿನ ಮಾರ್ಗದರ್ಶಕರು ತಮ್ಮ ಪ್ರವಾಸದ ವಿವರಗಳಲ್ಲಿ  ಅಪೊಲೊ ವಿಚಾರವನ್ನು ಸೇರಿಸಿಕೊಂಡಿದ್ದಾರೆ, ಮತ್ತು ಅದನ್ನು ಪೌರಾಣಿಕ ಐಕಾನ್ ಅನುಬಿಸ್‍ಗೆ ಹೋಲಿಸಿದ್ದಾರೆ. ಅನುಬಿಸ್‍ ಮರಣಾ ನಂತರ ಈಜಿಪ್ಟಿನ ದೇವತೆಯಾಗಿದೆ.

ಅಪೊಲೊ ನೋಡಲು ಸುತ್ತಲಿನ ಸ್ಥಳಿಯರು ಆಸಕ್ತಿ ವ್ಯಕ್ತಪಡಿಸಿದ್ದರಿಂದ ಜನಸಂಖ್ಯೆ ಹೆಚ್ಚಳದಿಂದಾಗಿ ಸ್ಥಳೀಯ ವ್ಯವಹಾರಗಳಿಗೂ ಸಹ ಅನುಕೂಲಕರವಾಗಿದೆ. ಪಿರಮಿಡ್‍ಗಳ ಬಳಿ ವಸ್ತುಗಳನ್ನು ಮಾರಾಟ ಮಾಡುತ್ತಿರುವ  ಬೀದಿ ಬದಿ ವ್ಯಾಪಾರಿಗಳಿಗೆ ಜನರು ಅಪೊಲೊ ಮತ್ತು ಅದರ ಸಹಚರರನ್ನು ಭೇಟಿಯಾಗಲು ಬಯಸಿದ್ದರಿಂದ ಹೆಚ್ಚಿನ ಗ್ರಾಹಕರು ಸಿಕ್ಕಂತಾಗಿದೆ.

ಇದನ್ನೂ ಓದಿ: ಸಂಗಾತಿಯನ್ನರಸಿ ಬರೋಬ್ಬರಿ 300 ಕಿ.ಮೀ ಪ್ರಯಾಣಿಸಿದ ಟೈಗರ್ ‘ಜಾನಿ’! ವಿಡಿಯೊ ಇದೆ

ಅಪೊಲೊ ಒಂದು ಬೀದಿ ನಾಯಿ, ಇದು ಈಜಿಪ್ಟ್‌ನ ಕಠಿಣ ಹವಾಮಾನವನ್ನು ಸಹಿಸಿಕೊಳ್ಳಬಲ್ಲ ನಾಯಿ ತಳಿಯಾಗಿದೆ. ಇದು ಗಿಜಾದಲ್ಲಿ ಮುಕ್ತವಾಗಿ ಅಲೆದಾಡುತ್ತಾ ಸುಮಾರು 8 ನಾಯಿಗಳಲ್ಲಿ ಒಂದಾಗಿದೆ.